ಪಾರ್ಕ್‍ನಲ್ಲೇ ಮಗುವಿಗೆ ಜನ್ಮ; ಹೆರಿಗೆ ಮಾಡಿಸುವಲ್ಲಿ ಶಿಕ್ಷಕಿ ಯಶಸ್ವಿ...!

varthajala
0

ಮೈಸೂರು(ಮಾ.14): ಮೈಸೂರಿನ 35 ವರ್ಷದ ಮಲ್ಲಿಕಾಗೆ, ಆ ಮಹತ್ವಾಕಾಂಕ್ಷೆಯ ದಿನದಂದು ಪ್ರೌಢಶಾಲಾ ಶಿಕ್ಷಕಿ ಶೋಭಾ ಪ್ರಕಾಶ್ ಯಾವ ದೇವತೆಗಿಂತ ಏನೂ ಕಡಿಮೆ ಇಲ್ಲ ಅನಿಸಿರಬೇಕು. ಏಕೆಂದರೆ, ಮೈಸೂರಿನ ನಜರಾಬಾದ್‍ನ ಉದ್ಯಾನವನದಲ್ಲಿ ಮಲ್ಲಿಕಾಗೆ ಹೆರಿಗೆ ಮಾಡಿದ್ದಾರೆ ಶಿಕ್ಷಕಿ ಶೋಭಾ. ಅದೂ ಕೇವಲ ಒಂದು ದೂರವಾಣಿ ಕರೆಯ ಸಹಾಯದಿಂದ. ಹೌದು, ಮುಂಬೈನಲ್ಲಿದ್ದ ವೈದ್ಯರೊಬ್ಬರ ದೂರವಾಣಿ ಕರೆಯ ಸಹಾಯದಿಂದ ಮೈಸೂರು ಮಹಿಳೆಗೆ ಹೆರಿಗೆ ಮಾಡಿದ್ದಾರೆ ಶೋಭಾ ಎಂಬ ಶಿಕ್ಷಕಿ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಮೂಲದ ಬುಡಕಟ್ಟು ಮಹಿಳೆ ಮಲ್ಲಿಕಾ, ಮಿನಿ ವಿಧಾನಸೌಧ ಎದುರಿಗೆ ಇರುವ ನಜರಾಬಾದ್‍ನ ಪಾರ್ಕ್ ನೋಡಲು ಮಹಿಳೆ ತನ್ನ ಇತರೆ ಮಕ್ಕಳ ಜತೆ ಬಂದಿದ್ದಳು. ಈ ವೇಳೆ, ಆಕೆಗೆ ಹೆರಿಗೆ ನೋವು ಶುರುವಾಯ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಲ್ಲಿಕಾಗೆ ಈ ಹೆರಿಗೆಗೂ ಮುಂಚೆ 4 ವರ್ಷ ವಯಸ್ಸಿನ ಮಗ ಮತ್ತು 2 ವರ್ಷದ ಮಗಳು ಸಹ ಇದ್ದು, ಅವರೊಂದಿಗೆ ಪಾರ್ಕ್‍ಗೆ ಭೇಟಿ ನೀಡಿದ್ದರು. ಈ ವೇಳೆ ಆಕೆಗೆ ರಕ್ತಸ್ರಾವ ಪ್ರಾರಂಭವಾಯಿತು. ದಾರಿಹೋಕರು ಅದನ್ನು ನೋಡಿ ತುರ್ತು ಸೇವೆಗೆ ಮತ್ತು ಆಂಬ್ಯುಲೆನ್ಸ್‍ಗೆ ಕರೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿ ನವಿಲೂರಿನಲ್ಲಿರುವ ತನ್ನ ಶಾಲೆಗೆ ತಲುಪಲು ಬಸ್ ಹಿಡಿಯಲು ಹಾದುಹೋಗುತ್ತಿದ್ದ ಶೋಭಾ ಪ್ರಕಾಶ್‍ರನ್ನು ಸ್ಥಳೀಯರು ಕರೆದು ಸಹಾಯ ಮಾಡಲು ಕೇಳಿದರು. ಆಕೆ ಹೆರಿಗೆ ನೋವಿನಲ್ಲಿದ್ದ ಮಲ್ಲಿಕಾಳನ್ನು ನೋಡಿ ಸಹಾಯ ಮಾಡಲು ಹೋದರು.

ಈ ಮಧ್ಯೆ, ಕಾರ್ತಿಕ್ ಎಂಬ ಸ್ಥಳೀಯ ಯುವಕ ಮುಂಬೈನ ವೈದ್ಯರಿಗೆ ಕರೆ ಮಾಡಿ ಶೋಭಾರೊಂದಿಗೆ ಮಾತನಾಡಿದರು. ಮಹಿಳೆ ಹಾಗೂ ಮಗುವಿನ ಜೀವಕ್ಕೆ ಹೆದರುತ್ತಿದ್ದರೂ ಸಹ ವೈದ್ಯರು ಹೇಳಿದ ಹಂತಗಳನ್ನು ಶೋಭಾ ಅನುಸರಿಸಿದರು. ಇನ್ನು, ಸ್ಥಳದಲ್ಲಿ ಅಷ್ಟೊಂದು ಮಹಿಳೆಯರಿದ್ದರೂ, ಹೆರಿಗೆಗೆ ಸಹಾಯ ಮಾಡಲು ಯಾರೂ ಬರಲಿಲ್ಲ ಎಂದು ಶೋಭಾ ಬೇಸರ ವ್ಯಕ್ತಪಡಿಸಿದರು.

ಇನ್ನು, ಮಗುವನ್ನು ಹೆರಿಗೆ ಮಾಡಿದ ನಂತರ, ಹೊಕ್ಕುಳ ಬಳ್ಳಿಯನ್ನು ಹೇಗೆ ಕತ್ತರಿಸುವುದು ಎಂದು ಖಚಿತವಾಗಿರಲಿಲ್ಲ. ಆದರೆ, ಆ ವೇಳೆಗೆ ಆ?ಯಂಬುಲೆನ್ಸ್ ಸ್ಥಳಕ್ಕೆ ತಲುಪಿದೆ ಎಂದು ಶೋಭಾ ಹೇಳಿದರು. ನಂತರ ವೈದ್ಯಕೀಯ ಸಿಬ್ಬಂದಿ ಕರುಳ ಬಳ್ಳಿಯನ್ನು ಕತ್ತರಿಸಲು ಸಹಾಯ ಮಾಡಿದರು. ಹೆರಿಗೆಯ ನಂತರ, ಅವರು ಮಹಿಳೆಗೆ ಸ್ವಲ್ಪ ಬಿಸಿನೀರು ನೀಡಿದರು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಶೋಭಾ ಹೇಳಿದರು. ಶೋಭಾ ಕೂಡ ನಂತರ ಮಲ್ಲಿಕಾರನ್ನು ಭೇಟಿ ನೀಡಿ ನವಜಾತ ಶಿಶುವಿಗೆ 2,000 ರೂ. ಹಣ ನೀಡಿ ನೆರವು ನೀಡಿದರು. ಸ್ಥಳೀಯ ಪ್ರಾಥಮಿಕ ಶಿಕ್ಷಕರ ಸಂಘದಿಂದಲೂ ಮಲ್ಲಿಕಾಗೆ ಸಹಾಯ ಮಾಡಿತು.

ಮಲ್ಲಿಕಾ ಅರುವಾಟೋಕ್ಲು ನಿವಾಸಿಯಾಗಿದ್ದು, ಕೆಲವು ತಿಂಗಳ ಹಿಂದೆ ಪತಿಯೊಂದಿಗೆ ಜಗಳವಾಡಿದ್ದರು. ನಂತರ ಸ್ಥಳೀಯ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಾ ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ದುಡಿಯುತ್ತಿದ್ದಳು ಎಮದು ವರದಿಯಾಗಿದೆ. ಅಲ್ಲದೆ, ಹೆರಿಗೆ ನೋವು ಕಾಣಿಸಿಕೊಂಡ ದಿನ ಆಕೆ ತನ್ನ ಮನೆಗೆ ಹೊರಟಿದ್ದಳು.

ಮಲ್ಲಿಕಾಳನ್ನು ಚೆಲುವಾಂಬ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಯ ತಾಯಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಕೆಯನ್ನು ನೋಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.


Post a Comment

0Comments

Post a Comment (0)