ಪರಿಸರ ಸ್ನೇಹಿ ಯೋಜನೆಗಳ ವೇಗವರ್ಧನೆ ಅಗತ್ಯ:ಪ್ರಧಾನಮಂತ್ರಿ ನರೇಂದ್ರ ಮೋದಿ

varthajala
0

 

ಪ್ರಕಟಣಾ ದಿನಾಂಕ: 08 MAR 2022 12:19PM by PIB Bengaluru

ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣ ಒದಗಿಸುವ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಪ್ರಧಾನಮಂತ್ರಿ ಅವರು ಮಾತನಾಡಿದ ಬಜೆಟ್ ನಂತರದ ಹತ್ತನೇ ವೆಬಿನಾರ್ ಇದಾಗಿದೆ.  

ಪ್ರಾರಂಭದಲ್ಲಿ ಪ್ರಧಾನಮಂತ್ರಿಯವರು ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಹಿಳಾ ಸಮುದಾಯಕ್ಕೆ ಶುಭಕೋರಿದರು ಮತ್ತು ಭಾರತ ಮಹಿಳಾ ಹಣಕಾಸು ಸಚಿವರನ್ನು ಹೊಂದಿದ್ದು, ಅವರು ಇಂತಹ ಪ್ರಗತಿಪರ ಬಜೆಟ್ ಅನ್ನು ನೀಡಿದ್ದಾರೆ ಎಂದು ಉಲ್ಲೇಖಿಸಿದರು.

ಶತಮಾನದ ಸಾಂಕ್ರಾಮಿಕದ ನಂತರ ಭಾರತದ ಆರ್ಥಿಕತೆ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ ಮತ್ತು ನಮ್ಮ ಆರ್ಥಿಕ ವಲಯದ ನಿರ್ಧಾರಗಳನ್ನು ಮತ್ತು ಬಲಿಷ್ಠ ಆರ್ಥಿಕ ಆಧಾರ ಸ್ತಂಭವನ್ನು ಇದು ಪ್ರತಿಫಲಿಸುತ್ತದೆ. ಈ ಬಜೆಟ್ ನಲ್ಲಿ ಉನ್ನತ ಬೆಳವಣಿಗೆಯ ವೇಗ ಕಾಯ್ದುಕೊಳ್ಳಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. “ವಿದೇಶಿ ಹೂಡಿಕೆಯನ್ನು ಉತ್ತೇಜಿಸಲು, ಮೂಲ ಸೌಕರ್ಯ ಹೂಡಿಕೆಯಲ್ಲಿ ತೆರಿಗೆ ಕಡಿತ, ಎನ್.ಐ.ಐ.ಎಫ್, ಗಿಪ್ಟ್ ಸಿಟಿ, ಹೊಸ ಎಫ್.ಡಿ.ಐ ನಂತಹ ಸಂಸ್ಥೆಗಳ ರಚನೆಯಂತಹ ಕ್ರಮಗಳಿಂದ ಹಣಕಾಸು ಮತ್ತು ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ನಾವು ಪ್ರಯತ್ನಿಸಿದ್ದೇವೆ” ಎಂದು ಹೇಳಿದರು.

“ಹಣಕಾಸು ವಲಯದಲ್ಲಿ ಡಿಜಿಟಲ್ ತಂತ್ರಜ್ಞಾವನ್ನು ವಿಸ್ತೃತವಾಗಿ ಬಳಸಿಕೊಂಡು ಆರ್ಥಿಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾಗಿದೆ.  75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ [ಸಿಬಿಡಿಸಿಗಳು] ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ” ಎಂದರು.

ಆತ್ಮ ನಿರ್ಭರ ಭಾರತ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸಂಬಂಧಿತ ಯೋಜನೆಗಳಿಗೆ ಹಣಕಾಸು ಒದಗಿಸುವ ಹಾಗೂ ವಿವಿಧ ಮಾದರಿಗಳನ್ನು ಅನ್ವೇಷಿಸುವ ಮೂಲಕ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಯೋಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪಿಎಂ ಗತಿಶಕ್ತಿ ರಾಷ್ಟ್ರೀಯ ಮುಖ್ಯ ಯೋಜನೆ ಇಂತಹ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.

ದೇಶದ ಸಮತೋಲದ ಅಭಿವೃದ್ಧಿ ದಿಸೆಯಲ್ಲಿ ಪ್ರಧಾನಮಂತ್ರಿ ಅವರು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ ಅಥವಾ ಪೂರ್ವ ಭಾರತ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಕುರಿತ ಆದ್ಯತಾ ಕಾರ್ಯಕ್ರಮಗಳನ್ನು ಅವರು ಪುನುರುಚ್ಚರಿಸಿದರು.

ಭಾರತದ ಮಹತ್ವಾಕಾಂಕ್ಷೆಗಳು ಮತ್ತು ಎಂ.ಎಸ್.ಎಂ.ಇ  ಬಲವರ್ಧನೆಯ ನಡುವಿನ ಸಂಪರ್ಕದ ಬಗ್ಗೆ ಪ್ರಧಾನಮಂತ್ರಿವರು ಒತ್ತಿ ಹೇಳಿದರು. ಫಿನ್ ಟೆಕ್, ಅಗ್ರಿಟೆಕ್, ಮೆಡಿಟೆಕ್ ಮತ್ತು ಕೌಶಲ್ಯಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ದೇಶ ಮುಂದುವರಿಯುವವರೆಗೆ ಕೈಗಾರಿಕೆ 4.0 ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಅಂತಹ ಕ್ಷೇತ್ರಗಳಲ್ಲಿ ಹಣಕಾಸು ಸಂಸ್ಥೆಗಳ ಸಹಾಯದಿಂದ ಭಾರತ ಕೈಗಾರಿಕೆ 4.0 ಹಂತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.  

ಭಾರತ ಮೊದಲ ಮೂರು ದೇಶಗಳಲ್ಲಿ ಗುರುತಿಸಬಹುದಾದ ಕ್ಷೇತ್ರಗಳನ್ನು ಹುಡುಕುವ ದೂರ ದೃಷ್ಟಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ನಿರ್ಮಾಣಗಳು, ನವೋದ್ಯಮಗಳು, ಇತ್ತೀಚೆಗೆ ಜಾರಿಗೊಳಿಸಲಾದ ಡ್ರೋನ್ ನೀತಿ, ಬಾಹ್ಯಾಕಾಶ ಮತ್ತು ಭೂ ವೈಶಿಷ್ಟ್ಯಗಳಂತಹ ದತ್ತಾಂಶ ಕ್ಷೇತ್ರಗಳಲ್ಲಿ ಭಾರತ ಮೊದಲ ಮೂರು ಆಗ್ರ ರಾಷ್ಟ್ರಗಳ ಸಾಲಿನಲ್ಲಿ ಹೊರ ಹೊಮ್ಮಬಹುದು.  ಇದಕ್ಕಾಗಿ ನಮ್ಮ ಉದ್ಯಮ ಮತ್ತು ಸ್ಟಾರ್ಟ್ ಅಪ್ ಗಳು ಆರ್ಥಿಕ ವಲಯದ ಸಂಪೂರ್ಣ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಉದ್ಯಮಶೀಲತೆಯ ವಿಸ್ತರಣೆ, ನಾವಿನ್ಯತೆ ಮತ್ತು ಹೊಸ ಹುಡುಕಾಟ ನವೋದ್ಯಮಗಳಲ್ಲಿ ಸಂಭವಿಸುತ್ತದೆ. ಅವರಿಗೆ ಹಣ ಒದಗಿಸಲು ನಮಗೆ ಭವಿಷ್ಯದ ಆಲೋಚನೆಗಳ ಬಗ್ಗೆ ಆಳವಾದ ತಿಳಿವಳಿಕೆ ಇದ್ದಾಗ ಮಾತ್ರ ಸಾಧ್ಯ ಎಂದು ಹೇಳಿದರು. “ನಮ್ಮ ಹಣಕಾಸು ವಲಯ ನಾವಿನ್ಯತೆಗೆ ಆರ್ಥಿಕ ನೆರವು ಒದಗಿಸುವುದನ್ನು ಪರಿಗಣಿಸುತ್ತದೆ ಮತ್ತು ಭವಿಷ್ಯದ ಆಲೋಚನೆಗಳು ಮತ್ತು ಕ್ರಮಗಳಂತಹ ಸುಸ್ಥಿರ ಅಪಾಯ ನಿರ್ವಹಣೆಗೆ ಆದ್ಯತೆ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಅತಿ ದೊಡ್ಡ ನೆಲೆ ಇರುವ ಭಾರತದ ಆರ್ಥಿಕತೆ ಎಂದರೆ ಅದು ಗ್ರಾಮೀಣ ಆರ್ಥಿಕತೆ. ಸರ್ಕಾರ ಸ್ವಯಂ ಸೇವಾ ಸಂಸ್ಥೆಗಳು – ಎಸ್.ಎಚ್.ಜಿಗಳು, ಕಿಸಾನ್ ಕ್ರಿಡಿಟ್ ಕಾರ್ಡ್ ಗಳು, ರೈತ ಉತ್ಪನ್ನ ಸಂಘಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳನ್ನು ಬಳಪಡಿಸಲು ಕ್ರಮ ಕೈಗೊಂಡಿದೆ. ಗ್ರಾಮೀಣ ಆರ್ಥಿಕತೆಯನ್ನು ತಮ್ಮ ನೀತಿಗಳ ಕೇಂದ್ರದಲ್ಲಿ ಇರಿಸಿಕೊಳ್ಳುವಂತೆ ಅವರು ಸಭೆಯನ್ನು ಕೋರಿದರು.

ಭಾರತದ ಮಹತ್ವಾಕಾಂಕ್ಷೆ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯೊಂದಿಗೆ ಸಂಪರ್ಕಹೊಂದಿದೆ. “ಯಾರಾದರೂ ಅವರಲ್ಲಿ ಹೊಸ ಕೆಲಸ ಮಾಡಲು ಮುಂದೆ ಬಂದರೆ ನಮ್ಮ ಹಣಕಾಸು ಸಂಸ್ಥೆಗಳು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಯೋಚಿಸುವುದು ಅಗತ್ಯ” ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿನ ಕೆಲಸ ಮತ್ತು ಹೂಡಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಲು ಹೆಚ್ಚು ಹೆಚ್ಚು ವೈದ್ಯಕೀಯ ಸಂಸ್ಥೆಗಳನ್ನು ಹೊಂದುವುದು ನಿರ್ಣಾಯಕವಾಗಿದೆ. “ನಮ್ಮ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್ ಗಳು ತಮ್ಮ ವಹಿವಾಟಿನ ಯೋಜನೆಯಲ್ಲಿ ಇದಕ್ಕೆ ಆದ್ಯತೆ ನೀಡಬಹುದೇ” ಎಂದು ಪ್ರಧಾನಮಂತ್ರಿ ಅವರು ಪ್ರಶ್ನಿಸಿದರು.

ಬಜೆಟ್ ಪರಿಸರ ಮತ್ತು ವಾತಾವರಣದ ಆಯಾಮಗಳತ್ತಲೂ ಶ್ರೀ ನರೇಂದ್ರ ಮೋದಿ ದೃಷ್ಟಿಹರಿಸಿದರು. 2070 ರ ವೇಳೆಗೆ ನಿವ್ವಳ ಶೂನ್ಯದ ಭಾರತದ ಗುರಿಯನ್ನು ಪುನರುಚ್ಚರಿಸಿದರು ಮತ್ತು ಈ ದಿಕ್ಕಿನಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಹೇಳಿದರು. “ಈ ಕೆಲಸಗಳನ್ನು ತ್ವರಿತಗೊಳಿಸಲು ಪರಿಸರ ಸ್ನೇಹಿ ಯೋಜನೆಗಳಿಗೆ ವೇಗ ನೀಡುವುದು ಅಗತ್ಯವಾಗಿದೆ. ಹಸಿರು ಹಣಕಾಸು ಕುರಿತು ಅಧ್ಯಯನ ನಡೆಯಬೇಕು ಮತ್ತು ಅನುಷ್ಠಾನಗೊಳಿಸಬೇಕು. ಇಂತಹ ಹೊಸ ಅಂಶಗಳು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.


Post a Comment

0Comments

Post a Comment (0)