BIG NEWS : ಮುಚ್ಚಿದ ಸರ್ಕಾರಿ ಶಾಲೆ ಪುನರಾರಂಭ ಮಾಡಿದ ಪುಟ್ಟು ಆಂಜಿನಪ್ಪ

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ: ನಮ್ಮ ತಾಲ್ಲೂಕಿನಲ್ಲಿ ಅತ್ಯಂತ ಕಡುಬವರಿದ್ದಾರೆ ಅಂತವರು ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಸಮಾಜ ಸೇವಕರಾದ ಪುಟ್ಟು ಆಂಜಿನಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಪುನರಾರಂಭಿಸಿ ಮಾತನಾಡಿ, ಗ್ರಾಮದಲ್ಲಿ ಸಮಾರು 10 ವರ್ಷಗಳ ಹಿಂದೆ ಮುಚ್ಚಿರುವ ಸರ್ಕಾರಿ ಶಾಲೆಯನ್ನು ಪುನಾರಾರಂಭ ಮಾಡಿಸಲು ಮುಂದಾದ ಗ್ರಾಮಸ್ಥರಿಗೆ ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದರು. ಮಕ್ಕಳಿಗೆ ನೀವು ಆಸ್ತಿ ಮಾಡುವ ಅಗತ್ಯವಿಲ್ಲ ಅದರ ಬದಲಾಗಿ ಉತ್ತಮ ವಿದ್ಯಾಭ್ಯಾಸ ನೀಡಿದರೆ ಅವರಿಗೆ ಅದೇ ದಿಡ್ಡ ಆಸ್ತಿ, ಈ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಈ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನನ್ನ ಸಹಕಾರ ಬೇಕಾಗಿದ್ದಲ್ಲಿ ನನಗೆ ತಿಳಿಸಿ, ಶಾಲೆ ಅಭಿವೃದ್ಧಿಗಾಗಿ ಕೈ ಜೋಡಿಸುತ್ತೇನೆ ಎಂದು ಹೇಳಿದರು.

 ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಮಾತನಾಡಿ, ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಲ್ಲದ ಕಾರಣ ಶಾಲೆಯನ್ನು ಸರ್ಕಾರ ರದ್ದು ಪಡಿಸಲಾಗಿತ್ತು, ಶಾಲೆಯನ್ನು ಪುನರಾರಂಭಿಸಲು  ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹನ್ನೆರಡರ ಮೇಲೆ ಇದ್ದರೆ ಮಾತ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಶಿಕ್ಷಕರನ್ನು ನೇಮಕ ಮಾಡುತ್ತದೆ. ನಂತರ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳು ಸಿಗಲಿವೆ ಎಂದು ತಿಳಿಸಿದರು.

ಕುಂಬಾರಹಳ್ಳಿ ಸರ್ಕಾರಿ ಶಾಲೆ ಸುಮಾರು 10 ವರ್ಷಗಳ ಹಿಂದೆ ಶಾಲೆಯನ್ನು ಮಕ್ಕಳ ದಾಖಲಾತಿ ಇಲ್ಲದ ಕಾರಣ ಮುಚ್ಚಲಾಗಿತ್ತು, ಗ್ರಾಮದ ಸರ್ಕಾರಿ ಶಾಲೆ ಮುಚ್ಚಿರುವ ಕಾರಣ ಮಕ್ಕಳು ಬೇರೆ ಗ್ರಾಮಗಳ ಶಾಲೆಗೆ ಹೋಗಿ ಬರಲು ತುಂಬಾ ಅನಾನುಕೂಲವಾಗಿತ್ತು, ಇದನ್ನು ಮನಗಂಡ ಗ್ರಾಮದ ಮುಖಂಡರಾದ ಶಿವಣ್ಣ, ಶ್ರೀನಿವಾಸರೆಡ್ಡಿ, ಬೈರಾರೆಡ್ಡಿ ಅವರು ಮುಂದಾಳತ್ವವನ್ನು ವಹಿಸಿಕೊಂಡು ಶಾಲೆಯನ್ನು ಪುನರಾರಂಭ ಮಾಡಿಸಿದರು. ಗ್ರಾಮದ ಪೋಷಕರು ಬೇರೆ ಗ್ರಾಮಗಳಿಗೆ ಮಕ್ಕಳನ್ನು ದಾಖಲಿಸದೇ ಇದೇ ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುತ್ತೇವೆ. ನಮ್ಮ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಗೌಡನಹಳ್ಳಿ ಮಂಜುನಾಥ್, ಮುಖಂಡರಾದ ಮುನಿರೆಡ್ಡಿ, ಚೌಡಪ್ಪ, ಬಶೆಟ್ಟಹಳ್ಳಿ ಅಂಬರೀಶ್, ವಲಸೇನಹಳ್ಳಿ ಚೌಡರೆಡ್ಡಿ ಸೇರಿದಂತೆ ಮುಖಂಡರು ಹಾಗೂ ಪೋಷಕರು ಭಾಗವಹಿಸಿದ್ದರು.

Post a Comment

0Comments

Post a Comment (0)