ಅಂಜದೀಪ್ ದ್ವೀಪದಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಿಸಿದ ರಾಜ್ಯಪಾಲರು

varthajala
0

 ಅಂಜದೀಪ್ ದ್ವೀಪದಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಿಸಿದ ರಾಜ್ಯಪಾಲರು

ನೌಕ ಪಡೆ ಅಧಿಕಾರಿಗಳೊಂದಿಗೆ ಅಟ್ ಹೋಮ್ ಕಾರ್ಯಕ್ರಮದಲ್ಲಿ ಭಾಗಿ

ಕಾರವಾರ 13.12.2023: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಡಿಸೆಂಬರ್ 1961 ರಲ್ಲಿ ಆಪರೇಷನ್ ಸಮಯದಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ದ್ವೀಪವನ್ನು ಮುಕ್ತಗೊಳಿಸಿದ ಭಾರತೀಯ ನೌಕಾಪಡೆಯ ಸಿಬ್ಬಂದಿಯ ಅಚಲ ಧೈರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ಐತಿಹಾಸಿಕವಾಗಿ ಮಹತ್ವದ ಅಂಜದೀಪ್ ದ್ವೀಪದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. 








ನೌಕಾಪಡೆಯ ದಿನಾಚರಣೆ ಮತ್ತು ನೌಕಾಪಡೆಯ ಸಪ್ತಾಹದ ಆಚರಣೆಯ ಅಂಗವಾಗಿ ಕರ್ನಾಟಕ ನೌಕಾ ನೆಲೆಯಲ್ಲಿ ಆಯೋಜಿಸಿದ್ದ ವಿಶೇಷ 'ಅಟ್ ಹೋಮ್' ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೌಕನೆಲೆಯ ಅಧಿಕಾರಿ ಸಿಬ್ಬಂದಿಗಳು ಶುಭಾಶಯ ವಿನಿಮಯ ಮಾಡಿಕೊಂಡರು. 

ಕಾರವಾರದ ನೇವಿ ಶಾಲೆಯ ಮಕ್ಕಳು 1999 ರಲ್ಲಿ ಕಾರ್ಗಿಲ್ ಯುದ್ಧದ ವೀರಯೋಧರಿಗೆ ಸ್ಮರಣೀಯ ನೃತ್ಯ ಕಾರ್ಯಕ್ರಮದ ಮೂಲಕ ನಮನ ಸಲ್ಲಿಸಿದರು. 

ಕಾರವಾರ ನೌಕಾ ಬಂದರಿನಲ್ಲಿ ಯುದ್ಧನೌಕೆಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿತ್ತು. 

Post a Comment

0Comments

Post a Comment (0)