ಬೆಂಗಳೂರು: ಮದ್ಯಗಳ ಬೆಲೆಯನ್ನು ಮತ್ತೆ ಹೆಚ್ಚಿಸಿ ರಾಜ್ಯ ಸರ್ಕಾರ ಮಂಗಳವಾರ ಸಂಜೆ ಅಧಿಸೂಚನೆ ಹೊರಡಿಸಿದೆ,
ಇದರಿಂದ ಈಗಾಗಲೇ ಬೆಲೆಯೇರಿಕೆಯಿಂದ ಬೇಸತ್ತಿರುವ ಪಾನ ಪ್ರಿಯರಿಗೆ ಮತ್ತೆ ಗಾಯದ ಮೇಲೆ ಬರೆಯಳೆದಂತಾಗಿದೆ,
ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ ಸುಂಕ ಸಂಗ್ರಹ ಗುರಿ ನೀಡಿರುವುದನ್ನು ಗಮನದಲ್ಲಿರಿಸಿಕೊಂಡು ಬೆಲೆ ಹೆಚ್ಚಳ ಮಾಡಲಾಗಿದೆ, ಅಲ್ಲದೇ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದಲ್ಲಿ ಮದ್ಯದ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಲಾಗಿದೆ, ಎಂದು ಅಬಕಾರಿ ಇಲಾಖೆ ತಿಳಿಸಿದೆ,
ಅಧಿಸೂಚನೆಯಂತೆ ಬಿಯರ್ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ, ಮಿಕ್ಕಂತೆ ವಿಸ್ಕಿ, ಬ್ರಾಂಡಿ, ಜಿನ್, ರಮ್ ಬೆಲೆಯನ್ನು ಪ್ರತಿ ಮೂರು ತಿಂಗಳಿಗೆ ಶೇ 10 ರಷ್ಟು ಹೆಚ್ಚಿಸಲು ಪ್ರಸ್ತಾವನೆ ನೀಡಲಾಗಿದೆ, ಇದರಿಂದ ದುಬಾರಿ ಮದ್ಯಗಳನ್ನು ಹಾಗೂ ಟಾಡಿ ವೈನ್ ಮತ್ತ ಫೆನ್ನಿಯನ್ನು ಬೆಲೆಯೇರಿಕೆಯಿಂದ ಹೊರಗಿರಿಸಿದಂತಾಗಿದೆ,