ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯದಲ್ಲಿ ಪ್ರಸ್ತುತ ಪ್ರಾಣಿಗಳ ಪೋಷಣೆ, ಇಂಧನ ವೆಚ್ಚ ಮತ್ತು ಇತರೆ ಆಡಳಿತ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಮೃಗಾಲಯದ ಪ್ರವೇಶ ಟಿಕೆಟ್ ದರಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕøತ ದರವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಸೂರ್ಯಸೇನ್ ಅವರು ತಿಳಿಸಿದ್ದಾರೆ.
ಮೃಗಾಲಯದಲ್ಲಿ ಅನುಮೋದಿತ ಪರಿಷ್ಕøತ ದರ ವಯಸ್ಕರಿಗೆ ರೂ.120, ಮಕ್ಕಳಿಗೆ ರೂ.60, ಹಿರಿಯ ನಾಗರಿಕರಿಗೆ 70 ರೂ. ನಿಗದಿಪಡಿಸಲಾಗಿದೆ. ಚಿಟ್ಟೆಗಳ ಪಾರ್ಕ್‍ಗೆ ವಯಸ್ಕರಿಗೆ ರೂ.50, ಮಕ್ಕಳಿಗೆ ರೂ.30, ಹಿರಿಯ ನಾಗರಿಕರಿಗೆ 30 ರೂ. ನಿಗದಿಪಡಿಸಲಾಗಿದೆ.
ಮೃಗಾಲಯ ಮತ್ತು ಚಿಟ್ಟೆಗಳ ಪಾರ್ಕ್ ಎರಡು ಸೇರಿ ವಯಸ್ಕರಿಗೆ ರೂ.170, ಮಕ್ಕಳಿಗೆ ರೂ.90, ಹಿರಿಯ ನಾಗರಿಕರಿಗೆ 100 ರೂ. ನಿಗದಿಪಡಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಹಿತದೃಷ್ಟಯಿಂದ ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೃಗಾಲಯ ವೀಕ್ಷಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.