ಬೆಂಗಳೂರು, ಸೆಪ್ಟೆಂಬರ್ 26, (ಕರ್ನಾಟಕ ವಾರ್ತೆ): ಬೆಂಗಳೂರು ಜಲಮಂಡಳಿ ಶಿಸ್ತಿನ ಕೋಟೆಯಾಗಿದ್ದು, ಇಡೀ ವಿಶ್ವಕ್ಕೆ ಮಾದರಿ ಸಂಸ್ಥೆಯಾಗಿದೆ. ತನ್ಮೂಲಕ ವಿಶ್ವಸಂಸ್ಥೆಯ ಪ್ರಶಸ್ತಿಗೂ ಸಹ ಭಾಜನವಾಗಿದೆ ಎಂದು ಬಿಡಬ್ಲ್ಯುಎಸ್‍ಎಸ್‍ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿಯಂತರರ ಸಂಘದಿಂದ ಆಯೋಜಿಸಿದ್ದ ಅಭಿಯಂತರರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ 5 ನೇ ಹಂತ ಇಡೀ ಏμÁ್ಯ ಭಾಗಕ್ಕೆ ಮಾದರಿ ಯೋಜನೆಯಾಗಿದೆ. 725 ಎಂ.ಎಲ್.ಡಿ ನೀರು ಒದಗಿಸುತ್ತಿರುವ ಬಹುದೊಡ್ಡ ಯೋಜನೆ ಇದಾಗಿದೆ. ದಿನದ 24 ಗಂಟೆಗಳ ಕಾಲ ನಮ್ಮ ಅಭಿಯಂತರರು ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಹತ್ತು ಲಕ್ಷ ಕೋಟಿ ಲೀಟರ್ ನೀರು ಪೂರೈಸುತ್ತಿದ್ದೇವೆ. ನೀರು ಉಳಿತಾಯ ಮಾಡುವ ಜೊತೆಗೆ ಮಳೆ ನೀರು ನಿರ್ವಹಣೆ ಸೇರಿ ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ಇಡೀ ವಿಶ್ವಕ್ಕೆ ಮಾದರಿಯಾಗಿ ವಿಶ್ವಸಂಸ್ಥೆ ಮೆಚ್ಚುಗೆಗೂ ಪಾತ್ರವಾಗಿದೆ ಎಂದರು.
ಅಭಿಯಂತರರು ದೇಶ ನಿರ್ಮಿಸುವ ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರ ಚಿಂತನೆಗಳೂ ವಿಭಿನ್ನವಾಗಿದೆ. ದೇವರು ಮನುಷ್ಯನ್ನು ಸೃಷ್ಟಿಸಿದರೆ, ಇಂಜಿನಿಯರಿಂಗ್ ಗಳು ವಿಶ್ವವನ್ನೇ ಸೃಷ್ಟಿಸುತ್ತಿದ್ದಾರೆ. ಎಸ್.ಎಂ. ವಿಶ್ವಶ್ವರಯ್ಯ ದೇಶ ಕಂಡ ಅತ್ಯುತ್ತಮ ಅಭಿಯಂತರರಾಗಿದ್ದಾರೆ. ಉತ್ತಮ ಸೇವೆ ನೀಡುವ ಮೂಲಕ ವಿಶ್ವೇಶ್ವರಯ್ಯ ಅವರಿಗೆ ಗೌರವ ತರಬೇಕು. ತಾವು ಮೂತಲಃ ವಿಜ್ಞಾನ ವಿದ್ಯಾರ್ಥಿ. ಆದರೆ ಕಳೆದ 15 ವರ್ಷಗಳಲ್ಲಿ 10 ವರ್ಷಗಳಿಂದ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂಜಿನಿಯರ್‍ಗಳು ಕ್ರಿಯಾಶೀಲ ವ್ಯಕ್ತಿತ್ವದವರು ಎಂದರು.
ಬೆಂಗಳೂರು ವಾಕ್ಸ್ ಸಂಸ್ಥೆಯ ಸಂಸ್ಥಾಪಕ ಅರುಣ್ ಪೈ, ಬೆಂಗಳೂರು ಜಲಮಂಡಳಿ ಪ್ರಧಾನ ಮುಖ್ಯ ಅಭಿಯಂತರ ಬಿ.ಎಸ್. ದಲಾಯತ್, ಬೆಂಗಳೂರು ಜಲ ಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ. ಗಂಗಾಧರ್, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ. ರಾಜಶೇಖರ್, ಖಜಾಂಚಿ ಎಸ್. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.