ಬೆಂಗಳೂರು, ಅಕ್ಟೋಬರ್ 30, (ಕರ್ನಾಟಕ ವಾರ್ತೆ): ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 70ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಾರಿ 70 ಜನ ಮಹನೀಯರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಿಂದ ಶಿವಮೊಗ್ಗದ ಪೆÇ್ರ. ರಾಜೇಂದ್ರ ಚೆನ್ನಿ, ತುಮಕೂರಿನ ತುಂಬಾಡಿ ರಾಮಯ್ಯ ಮತ್ತು ಡಾ. ಎಚ್.ಎಲ್. ಪುಷ್ಪ, ಚಿಕ್ಕಬಳ್ಳಾಪುರದ ಪ್ರೊ.. ಆರ್. ಸುನಂದಮ್ಮ, ಚಿಕ್ಕಮಗಳೂರದ ರಹಮತ್ ತರೀಕೆರೆ ಮತ್ತು ವಿಜಯಪುರದ ಹ.ಮ. ಪೂಜಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನಪದ ಕ್ಷೇತ್ರದಿಂದ ಕೊಪ್ಪಳದ ಬಸಪ್ಪ ಭರಮಪ್ಪ ಚೌಡ್ಕಿ, ಶಿವಮೊಗ್ಗದ ಬಿ. ಟಾಕಪ್ಪ ಕಣ್ಣೂರು, ಬೆಳಗಾವಿಯ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೊಳ, ಚಿತ್ರದುರ್ಗದ ಹನುಮಂತಪ್ಪ ಮಾರಪ್ಪ, ಚೀಳಂಗಿ, ಕೋಲಾರದ, ಎಂ. ತೋಪಣ್ಣ, ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ, ದಕ್ಷಿಣ ಕನ್ನಡದ ಶ್ರೀಮತಿ ಸಿಂಧು ಗುಜರನ್ ಮತ್ತು ಮೈಸೂರಿ ಎಲ್. ಮಹದೇವಪ್ಪ ಉಡಿಗಾಲ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಂಗೀತ ಕ್ಷೇತ್ರದಿಂದ ಕೊಪ್ಪಳದ ದೇವೆಂದ್ರಕುಮಾರ ಪತ್ತಾರ್ ಹಾಗೂ ಬೀದರಿನ ಮಡಿವಾಳಯ್ಯ ಸಾಲಿ ಭಾಜನರಾಗಿದ್ದಾರೆ.
ನೃತ್ಯ ಕ್ಷೇತ್ರದಿಂದ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಿಂದ ದಕ್ಷಿಣ ಕನ್ನಡದ ಪ್ರಕಾಶ್ ರಾಜ್ ಕೊಡಗಿನ ಶ್ರೀಮತಿ ವಿಜಯಲಕ್ಷ್ಮಿ ಸಿಂಗ್ ಆಡಳಿತ ಕ್ಷೇತ್ರದಿಂದ ಬೆಂಗಳೂರು ದಕ್ಷಿಣ (ರಾಮನಗರ)ದ ಹೆಚ್. ಸಿದ್ದಯ್ಯ ಭಾ.ಆ.ಸೇ., (ನಿ), ವೈದ್ಯಕೀಯ ಕ್ಷೇತ್ರದಿಂದ ತುಮಕೂರಿನ ಡಾ. ಆಲಮ್ಮ ಮಾರಣ್ಯ ಮತ್ತು ಬೆಂಗಳೂರು ಗ್ರಾಮಾಂತರದ ಡಾ. ಜಯರಂಗನಾಥ್ ಭಾಜನರಾದರೆ, ಸಮಾಜಸೇವೆ ಕ್ಷೇತ್ರದಿಂದ ವಿಜಯನಗರದ ಶ್ರೀಮತಿ ಸೂಲಗಿತ್ತಿ ಈರಮ್ಮ, ಬೆಂಗಳೂರು ಗ್ರಾಮಾಂತರದ ಶ್ರೀಮತಿ ಫಕ್ಕೀರಿ, ದಕ್ಷಿಣ ಕನ್ನಡದ ಶ್ರೀಮತಿ ಕೋರಿನ್ ಆಂಟೊನಿಯಟ್ ರನಾ, ಉಡುಪಿಯ ಡಾ.ಎನ್.ಸೀತಾರಾಮ ಶೆಟ್ಟಿ ಮತ್ತು ಶಿವಮೊಗ್ಗದ ಕೋಣಂದೂರು ಲಿಂಗಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ.
ಸಂಕೀರ್ಣ ಕ್ಷೇತ್ರದಿಂದ ದಕ್ಷಿಣ ಕನ್ನಡದ ಉಮೇಶ ಪಂಬದ, ಧಾರವಾಡದ ಡಾ. ರವೀಂದ್ರ ಕೋರಿಶೆಟ್ಟರ್, ಬೆಂಗಳೂರಿನ ಕೆ. ದಿನೇಶ್, ತುಮಕೂರಿನ ಶಾಂತರಾಜು, ರಾಯಚೂರಿನ ಜಾಫರ್ ಮೊಹಿಯುದ್ದೀನ್ ಬೆಂಗಳೂರು ಗ್ರಾಮಾಂತರದ ಪೆನ್ನ ಓಬಳಯ್ಯ, ಬಳ್ಳಾರಿಯ ಶ್ರೀಮತಿ ಶಾಂತಿ ಬಾಯಿ.ಕೆ, ಮತ್ತು ಬೆಳಗಾವಿಯ ಪುಂಡಲೀಕ ಶಾಸ್ತ್ರೀ (ಬುಡಬುಡಕೆ) ಅವರು ಭಾಜನರಾದರೆ, ಹೊರನಾಡು / ಹೊರದೇಶ ಕ್ಷೇತ್ರದಿಂದ ಸೌದಿಯ ಜಕರಿಯ ಬಜಪೆ ಮುಂಬೈನ ಪಿ.ವಿ. ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪರಿಸರ ಕ್ಷೇತ್ರದಿಂದ ಚಾಮರಾಜನಗರದ ರಾಮೇಗೌಡ ಮತ್ತು ಯಾದಗಿರಿಯ ಮಲ್ಲಿಕಾರ್ಜುನ ನಿಂಗಪ್ಪ ಕೃಷಿ ಕ್ಷೇತ್ರದಿಂದ ಹಾವೇರಿ ಡಾ.ಎಸ್.ವಿ. ಹಿತ್ತಲಮನಿ ಮತ್ತು ಹಾಸನದ ಎಂ.ಸಿ. ರಂಗಸ್ವಾಮಿ ಪ್ರಶಸ್ತಿಗೆ ಭಾಜನರಾದರೆ ಮಾಧ್ಯಮ ಕ್ಷೇತ್ರದಿಂದ ಬೆಂಗಳೂರಿನ ಕೆ. ಸುಬ್ರಮಣ್ಯ, ಮೈಸೂರಿನ ಅಂಶಿ ಪ್ರಸನ್ನ ಕುಮಾರ್, ದಕ್ಷಿಣ ಕನ್ನಡದ ಬಿ.ಎಂ. ಹನೀಫ್ ಮತ್ತು ಮಂಡ್ಯ ಜಿಲ್ಲೆಯ ಎಂ.ಸಿದ್ದರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರದಿಂದ ಚಿಕ್ಕಬಳ್ಳಾಪುರದ ರಾಮಯ್ಯ, ದಾವಣಗೆರೆಯ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ಮತ್ತು ಗದಗದ ಡಾ. ಆರ್.ವಿ.ನಾಡಗೌಡ, ಸಹಕಾರ ಕ್ಷೇತ್ರದಿಂದ ಕೊಪ್ಪಳದ ಶೇಖರಗೌಡ ವಿ ಮಾಲಿಪಾಟೀಲ್ ಅವರು ಭಾಜನರಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಿಂದ ಉಡುಪಿಯ ಕೋಟ ಸುರೇಶ ಬಂಗೇರ ಮತ್ತು ಐರಬೈಲ್ ಆನಂದ ಶೆಟ್ಟಿ ಹಾಗೂ ಉತ್ತರ ಕನ್ನಡದ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ.ಹೆಗಡೆ) ಬಯಲಾಟ ಕ್ಷೇತ್ರದಿಂದ ಹಾಸನದ ಗುಂಡೂರಾಜ್ ಅವರಿಗೆ ಲಭಿಸಿದೆ.
ರಂಗಭೂಮಿ ಕ್ಷೇತ್ರದಿಂದ ಬೆಂಗಳೂರು ದಕ್ಷಿಣ (ರಾಮನಗರ)ದ ಹೆಚ್. ಎಂ. ಪರಮಶಿವಯ್ಯ, ವಿಜಯಪುರದ ಎಲ್.ಬಿ. ಶೇಖ್ (ಮಾಸ್ತರ್), ಬೆಂಗಳೂರಿನ ಬಂಗಾರಪ್ಪ ಖುದಾನ್‍ಪುರದ ದಕ್ಷಿಣ ಕನ್ನಡದ ಮೈಮ್ ರಮೇಶ್, ಮತ್ತು ರಾಯಚೂರಿನ ಶ್ರೀಮತಿ ಡಿ. ರತ್ನಮ್ಮ ದೇಸಾಯಿ ಅವರು ಭಾಜನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಿಂದ ಬೆಂಗಳೂರಿನ ಡಾ. ಎಂ.ಆರ್. ಜಯರಾಮ್, ಮೈಸೂರಿನ ಡಾ. ಎನ್.ಎಸ್.ರಾಮೇಗೌಡ ಕಲಬುರಗಿಯ ಎಸ್.ಬಿ. ಹೊಸಮನಿ ಬೆಳಗಾವಿಯ ಶ್ರೀಮತಿ ರಾಜ್ ಶ್ರೀ ನಾಗರಾಜು, ಕ್ರೀಡಾ ಕ್ಷೇತ್ರದಿಂದ ಬೆಂಗಳೂರಿನ ಆಶೀಶ್ ಕುಮಾರ್ ಬಲ್ಲಾಳ್, ಮೈಸೂರಿನ ಎಂ.ಯೋಗೇಂದ್ರ ಮತ್ತು ಕೊಡಗಿನ ಡಾ. ಬಬಿನಾ ಎನ್. ಎಂ. (ಯೋಗ) ನ್ಯಾಯಾಂಗ ಕ್ಷೇತ್ರದಿಂದ ಬಾಗಲಕೋಟೆಯ ನ್ಯಾ. ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ), ಶಿಲ್ಪಕಲೆ ಕ್ಷೇತ್ರದಿಂದ ಯಾದಗಿರಿಯ ಬಸಣ್ಣ ಮೋನಪ್ಪ ಬಡಿಗೇರ ಮತ್ತು ಬಾಗಲಕೋಟೆಯ ನಾಗಲಿಂಗಪ್ಪ ಜಿ ಗಂಗೂರ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿತ್ರಕಲೆ ಕ್ಷೇತ್ರದಿಂದ ವಿಜಯನಗರದ ಬಿ. ಮಾರುತಿ ಮತ್ತು ಕರಕುಶಲ ಕ್ಷೇತ್ರದಿಂದ ಮೈಸೂರಿನ ಶ್ರೀಮತಿ ಎಲ್. ಹೇಮಾಶೇಖರ್ ಅವರು 70 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 2025ನೇ ಸಾಲಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್ ಎಂ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.