ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ವಿಶೇಷ ಉತ್ತೇಜನ - ಪ್ರೊ. ರಮೇಶ್.ಬಿ.

varthajala
0

 ಬೆಂಗಳೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ): ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ವಿಶೇಷ ಉತ್ತೇಜನ ನೀಡಲು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಕುಲಪತಿಗಳಾದ ಪ್ರೊ. ರಮೇಶ್.ಬಿ. ತಿಳಿಸಿದ್ದಾರೆ.


ಕಲಬುರಗಿಯ ಪಾಲಿ ಇನ್ಸಿಟಿಟ್ಯೂಟ್ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್  ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪಾಲಿ-ಕನ್ನಡ ಶಬ್ದಕೋಶದ ನಾಲ್ಕನೆಯ ಸಂಪುಟದ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು.

ಕ್ರಿ.ಪೂ. 5ನೇ ಶತಮಾನದ ಕಾಲಘಟ್ಟದಲ್ಲಿ ಜನಬಳಕೆಯ ಪಾಲಿ, ಭಾರತೀಯ ಜ್ಞಾನ ಶಾಖೆಯ ಅತ್ಯಮೂಲ್ಯ ಆಗರವಾಗಿದೆ ಎಂದು ಅವರು ತುಮಕೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬೌದ್ಧಧರ್ಮ ಗುರು ದಲೈ ಲಾಮಾ ರವರು "ಶಾಂತಿ ಮತ್ತು ಸಮೃದ್ಧಿ" ಕುರಿತು ವಿದ್ವತ್ ಪೂರ್ಣ ಉಪನ್ಯಾಸ ನೀಡಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು.

ಹೊಸ ಜನ ಸಂಸ್ಕøತಿ ಮತ್ತು ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಗೌತಮ ಬುದ್ಧ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳು ಮಹತ್ವದ ದಾರಿದೀಪಗಳಾಗಿವೆ ಎಂದರು.

ಇದೇ ಸಂದರ್ಭದಲ್ಲಿ ನ್ಯಾಕ್ ಸಂಸ್ಥೆಯ ನಿಕಟ ಪೂರ್ವ ನಿರ್ದೇಶಕರಾದ ಡಾ. ಎಸ್.ಸಿ. ಶರ್ಮಾ ಅವರು ಪಾಲಿ-ಕನ್ನಡ ಶಬ್ದಕೋಶದ ನಾಲ್ಕನೆಯ ಸಂಪುಟದ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಪುರಾತನ ಶಾಸ್ತ್ರೀಯ ಭಾμÉಯಾದ ಪಾಲಿ ಭಾಷೆಯು ಭಾರತೀಯ ಸಂಸ್ಕøತಿಯ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದರು.

ಪಾಲಿ ಇನ್ಸಿಟಿಟ್ಯೂಟ್ ನ ಗೌರವ ನಿರ್ದೇಶಕರಾದ ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್ ಅವರು  ಮಾತನಾಡಿ, ಕನ್ನಡವವೂ ಸೇರಿದಂತೆ ದ್ರಾವಿಡ ಜೊತೆ ಪಾಲಿ ಬಳಕೆಯಾಗುತ್ತಿರುವ ಕುರಿತು ವಿವರಿಸಿದರು.

ಕನ್ನಡ-ಪಾಲಿ-ಇಂಗ್ಲೀಷ್ ವಿದ್ವಾಂಸರಾದ ಡಾ.ಸಿ.ಚಂದ್ರಮೋಹನ್ ಗ್ರಂಥದ ಮಹತ್ವದ ಕುರಿತು ವಿಶ್ಲೇಷಿಸಿದರು.

ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ವೈ.ಎಸ್.ಸಿದ್ದೇಗೌಡರು ಮೌಲ್ಯಯುತ ಜೀವನದ ಮೂಲಾಧಾರವಾದ ಸಾಹಿತ್ಯದ ಪೋಷಣೆಗೆ ನಿಘಂಟುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿ ಇನ್ಸಿಟಿಟ್ಯೂಟ್‍ನ ಅಧ್ಯಕ್ಷರಾದ ರಾಹುಲ್ ಎಂ. ಖರ್ಗೆ, ಬೆಂಗಳೂರು ಕುಲಸಚಿವರಾದ ನವೀನ್ ಜೋಸೆಫ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ  ಪ್ರೊ. ಕೆ.ಆರ್. ಜಲಜಾ ಉಪಸ್ಥಿತರಿದ್ದರು.

Post a Comment

0Comments

Post a Comment (0)