ದಿನನಿತ್ಯದ ನಿಖರ ಬಂಗಾರದ ಬೆಲೆಗಾಗಿ ದ ಜ್ಯೂವೆಲರ್ಸ್‌ ಅಸೋಷಿಯೇಷನ್‌ ಬೆಂಗಳೂರು ಸಂಪರ್ಕಿಸಿ -ಬೆಂಗಳೂರು ನಗರದಲ್ಲಿ ಜ್ಯೂವೆಲರಿ ಪಾರ್ಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ

varthajala
0

 ಬೆಂಗಳೂರುಅಕ್ಟೋಬರ್ 30: ಕರ್ನಾಟಕದ ಅತ್ಯಂತ ಹಳೆಯ ಮತ್ತು ಸಕ್ರಿಯ ವ್ಯಾಪಾರ ಸಂಸ್ಥೆಯಾದ ಜ್ಯೂವೆಲರ್ಸ್‌ ಅಸೋಷಿಯೇಷನ್‌ ಬೆಂಗಳೂರು (JAB), ತಮ್ಮದೇ ಆದ ದರಗಳನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ "ಅನಗತ್ಯ ಗೊಂದಲ" ಸೃಷ್ಟಿಸುತ್ತಿರುವ ಕೆಲವು ಆಭರಣ ಮಳಿಗೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದ ನಿಖರ ಚಿನ್ನದ ದರಗಳಿಗಾಗಿ ಅಸೋಷಿಯೇಷನ್‌ನನ್ನೇ ಸಂಪರ್ಕಿಸುವಂತೆ JAB ಸಾರ್ವಜನಿಕರಿಗೆ ಮನವಿ ಮಾಡಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ ಜ್ಯೂವೆಲ್ಲರಿ ಅಸೋಷಿಯೇಷನ್‌ ಬೆಂಗಳೂರು (JAB) ಅಧ್ಯಕ್ಷ ಚೇತನ್‌ ಕುಮಾರ್‌ ಮೆಹ್ತಾ ಅವರುಪಾರದರ್ಶಕತೆಗೆ ತಮ್ಮ ಸಂಸ್ಥೆಯ 85 ವರ್ಷಗಳ ಬದ್ಧತೆಯನ್ನು ಎತ್ತಿ ಹಿಡಿದರು. ಇದರ ಜೊತೆಗೆಬೆಂಗಳೂರು ನಗರದಲ್ಲಿ ಜ್ಯುವೆಲ್ಲರಿ ಪಾರ್ಕ್‌ ನಿರ್ಮಾಣಕ್ಕಾಗಿ ಜಾಗ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಘೋಷಿಸಿದರು. 


ನಿಖರ ದೈನಂದಿನ ಬಂಗಾರದ ಬೆಲೆಗೆ JAB ಅಧಿಕೃತ ಮೂಲ:

"ಬಂಗಾರದ ಬೆಲೆಗಳು ಆಯಾ ನಗರಕ್ಕೆ ವಿಭಿನ್ನವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಕೆಲವು ಆಭರಣ ಮಳಿಗೆಗಳು ತಮ್ಮದೇ ಆದ ಬೆಲೆಯನ್ನು ಪ್ರಕಟಿಸುತ್ತಿರುವುದು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಉಂಟುಮಾಡುತ್ತಿದೆ," ಎಂದು ಮೆಹ್ತಾ ಹೇಳಿದರು.

85 ವರ್ಷಗಳ ಶ್ರೀಮಂತ ಪರಂಪರೆಯಿರುವ JAB ರಾಜ್ಯದ ಅತ್ಯಂತ ಹಳೆಯ ಸಂಸ್ಥೆಯಾಗಿದ್ದುಮೊದಲಿನಿಂದಲೂ ನಿಖರವಾದ ಬೆಲೆಯನ್ನು ನೀಡುತ್ತಾ ಬಂದಿದೆ. ಸಾರ್ವಜನಿಕರು ದೈನಂದಿನ ಅಧಿಕೃತ ಮಾಹಿತಿ ಪಡೆಯಲು 080-41276222 ಅಥವಾ 080-22211037 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

 

ಅಲ್ಲದೆನಗರದ ಹಾಗೂ ರಾಜ್ಯದ ಪ್ರಮುಖ ಆಭರಣ ತಯಾರಕರು ಮತ್ತು ಮಾರಾಟಗಾರರ ಸಂಘಟನೆಯಾಗಿರುವ JAB, ತನ್ನ ಸದಸ್ಯರ ಮೂಲಕ ರಾಜ್ಯದಲ್ಲಿ ನಡೆಯುವ ಒಟ್ಟಾರೆ ಬಂಗಾರದ ವಹಿವಾಟಿನ ಬಗ್ಗೆಯೂ ದತ್ತಾಂಶ ಸಂಗ್ರಹ ಮಾಡುತ್ತದೆ ಎಂದು ಮೆಹ್ತಾ ತಿಳಿಸಿದರು.

 

ಉತ್ಪಾದನೆಗೆ ಉತ್ತೇಜನ ನೀಡಲು ಜ್ಯುವೆಲ್ಲರಿ ಪಾರ್ಕ್‌ಗೆ ಬೇಡಿಕೆ

JAB ಸಕ್ರಿಯ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರೊಂದಿಗೆ ಜಂಟಿಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಸೋಷಿಯೇಷನ್‌ ತಿಳಿಸಿದೆ.

ಉದ್ದೇಶ: ಆಭರಣ ವಿನ್ಯಾಸತರಬೇತಿ ಹಾಗೂ ಉತ್ಪಾದನೆಗೆ ಅನುಕೂಲಕರವಾದ ಪರಿಸರವನ್ನು ನಿರ್ಮಿಸುವುದು.

ನಿರೀಕ್ಷೆ: ಮುಂದಿನ ಆಯವ್ಯಯದಲ್ಲಿ ಸರ್ಕಾರವು ಜಾಗವನ್ನು ಮಂಜೂರು ಮಾಡುವ ಭರವಸೆ ಇದೆ. ಈ ಪಾರ್ಕ್‌ನಿಂದ ಕರ್ನಾಟಕದ ಆಭರಣ ಉದ್ಯಮವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳಲಿದೆ ಎಂದು JAB ಅಭಿಪ್ರಾಯಪಟ್ಟಿದೆ.

 

ಪತ್ರಿಕಾಗೋಷ್ಠಿಯಲ್ಲಿ JAB ಮುಖ್ಯ ಸಲಹೆಗಾರರಾದ ಜಿ.ವಿ. ಶ್ರೀಧರ್‌ಉಪಾಧ್ಯಕ್ಷರಾದ ಅಶೋಕ್‌ ರಾಥೋಡ್‌ಗೌರವ ಕಾರ್ಯದರ್ಶಿಗಳಾದ ಆರ್‌ ಶ್ರೀನಿವಾಸ್‌ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಜುವೆಲ್ಲರ್ಸ್ ಅಸೋಸಿಯೇಷನ್ ಬೆಂಗಳೂರು (JAB) ಕುರಿತು

JAB ದೇಶದ ಅತ್ಯಂತ ಹಳೆಯ ಮತ್ತು ಸಕ್ರಿಯ ಆಭರಣ ವ್ಯಾಪಾರ ಸಂಸ್ಥೆಯಾಗಿದ್ದುರತ್ನ ಮತ್ತು ಆಭರಣ ಉದ್ಯಮವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಪ್ರಮುಖ ಗುರಿ: ಆಭರಣ ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವುದುಸಂಘಟಿತ ವಲಯದ ಕಡೆಗೆ ಬದಲಾವಣೆ ತರುವುದು ಮತ್ತು ಸ್ವರ್ಣಕುಶಲಕರ್ಮಿಗಳ (ಕಾರ್ಮಿಕರ) ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ಉದ್ಯಮದಲ್ಲಿ ಹೆಜ್ಜೆಗುರುತು: ಕರ್ನಾಟಕವನ್ನು ಭಾರತದಲ್ಲಿ ಅತ್ಯುತ್ತಮ ಆಭರಣ ಉತ್ಪಾದನಾ ರಾಜ್ಯವನ್ನಾಗಿ ಸ್ಥಾಪಿಸುವುದು JAB ಗುರಿಯಾಗಿದ್ದುಯಶಸ್ವಿ ಬೆಳ್ಳಿಯ ವಿಶೇಷ B2B ಪ್ರದರ್ಶನವನ್ನು ಪ್ರಾರಂಭಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ.


Post a Comment

0Comments

Post a Comment (0)