ಬೆಂಗಳೂರು, ನವಂಬರ್ 7 (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಇದೇ ಮೊದಲ ಬಾರಿಗೆ ಕಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಸ್ಪರ್ಧಾ ಶಿಬಿರ ಕಾರ್ಯಕ್ರಮದಲ್ಲಿ 30 ವಿದ್ಯಾರ್ಥಿಗಳನ್ನು ಸ್ಪರ್ಧಾ ಶಿಬಿರಕ್ಕೆ ಸಮಿತಿಯ ವತಿಯಿಂದ ಆಯ್ಕೆ ಮಾಡಲಾಗಿದೆ.
ಸುಮಾರು 315 ಕಲಾ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಕಲಾಕೃತಿಗಳ ಛಾಯಾಚಿತ್ರಗಳನ್ನು ನೋಡಿ ಆಯ್ಕೆ ಮಾಡಿದ 30 ವಿದ್ಯಾರ್ಥಿಗಳು 5 ದಿನ ನಡೆದ ಶಿಬಿರದಲ್ಲಿ ಪಾಲ್ಗೊಂಡು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿರುತ್ತಾರೆ. ಈ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿ, ಆಯ್ಕೆ ಸಮಿತಿ ಸೂಚಿಸಿದ 10 ವಿದ್ಯಾರ್ಥಿಗಳಿಗೆ 2025 ರ ʻಪ್ರತಿಭಾವಂತ ವಿದ್ಯಾರ್ಥಿʼ ಎಂದು ಪ್ರಶಂಶಿಸಿ ತಲಾ ರೂ.15,000/-ಗಳ ನಗದಿನೊಂದಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ರೀತಿಯ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಅಕಾಡೆಮಿಯ ವತಿಯಿಂದ ಹಮ್ಮಿಕೊಳ್ಳಲಾಗುವುದು. ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಜೈನ್ (ಡೀಮ್ಡ್ ಟು-ಬಿ ಯುನಿವರ್ಸಿಟಿ), ಬೆಂಗಳೂರು ಇವರ ಸಹಯೋಗದೊಂದಿಗೆ ನವೆಂಬರ್ 1 ರಿಂದ 5 ರ ವರೆಗೆ ಏರ್ಪಡಿಸಿದ ಪ್ರತಿಭಾನ್ವೇಷಣೆ ಸ್ಪರ್ಧಾ ಶಿಬಿರದಲ್ಲಿ ಬಹುಮಾನಕ್ಕೆ ಆಯ್ಕೆಯಾದ ಬನಶ್ರೀ ವಗ್ಗಾ, ನೇಹ ಜಯದೇವ್, ದಿಶಾ, ಗೌತಮ್ ಎಸ್., ವೈಶಾಕ್ ರೈ, ಸಂದೇಶ್ ಎಂ ಎಸ್, ವಿಠಲ ಅನ್ನಪ್ಪ ಬರಕಳೆ, ಸುದೀಪ್ ಎ.ಕಮ್ಮಾರ, ಮೇಘ ಆರ್., ಅರುಣ್ ಎ ಗಾಣಗಿ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.