ವಾಸವಿ ಸಮೂಹ ವಿದ್ಯಾ ಸಂಸ್ಥೆಗಳಿಂದ 70ನೇ ಕನ್ನಡ ರಾಜ್ಯೋತ್ಸವ: ಕನ್ನಡ ಸಂರಕ್ಷಣೆಗೆ ವಿದ್ಯಾರ್ಥಿಗಳ ಸಂಕಲ್ಪ ಕನ್ನಡ ನಿತ್ಯೋತ್ಸವವಾಗಬೇಕು.

varthajala
0

  ಬೆಂಗಳೂರು, ನ.8: ರಾಜ್ಯೋತ್ಸವ ನವೆಂಬರ್‌ ಮಾತ್ರ ಸೀಮಿತವಾಗಬಾರದು. ಕನ್ನಡ ನಿಯತ್ಯೋತ್ಸವಾಗಬೇಕು ಎಂದು ಹಿರಿಯ ಚಲನ ಚಿತ್ರ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ವಾಸವಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಕಾರ್ಯಕ್ರಮವು “ಕನ್ನಡ ಉಳಿಸಿ – ಕನ್ನಡಿಗರಾಗಿ ಹೆಮ್ಮೆಪಡಿ” ಎಂಬ ಘೋಷವಾಕ್ಯದಡಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ರಾಜೇಂದ್ರ ಸಿಂಗ್ ಬಾಬು, ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ಬದುಕಿನ ಶೈಲಿ ಮತ್ತು ನಾಡಿನ ಆತ್ಮವಾಗಿದೆ. 

ವಿಜ್ಞಾನ, ತಂತ್ರಜ್ಞಾನ ಮತ್ತು ಜಾಗತೀಕರಣದ ಕಾಲದಲ್ಲಿ ಮೂಲವಾದ ಕನ್ನಡವನ್ನು ಮರೆಯಬಾರದು. ಕನ್ನಡ ಮಾತನಾಡಲು ಹಿಂಜರಿಯಬಾರದು. ಯುವ ಸಮೂಹ ಕನ್ನಡದ ಶಕ್ತಿಯಾದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ಜನಾಂಗ ಬೆಳೆಯುತ್ತದೆ. ಭಾಷೆಯ ಮೇಲಿನ ಆಕ್ರಮಣ ತಡೆಯಬೇಕು. ಪ್ರತಿದಿನ ಕನ್ನಡ ನಮ್ಮ ಮಂತ್ರವಾಗಬೇಕು ಎಂದರು. ವಾಸವಿ ಸಮೂಹ ಶಿಕ್ಷಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನ್ನಡದ ಮಹತ್ವವನ್ನು ಅರಿತುಕೊಳ್ಳಬೇಕು. ಕನ್ನಡ ಪಾಠ ಕೇವಲ ಪಾಠ ಪುಸ್ತಕದಲ್ಲಿ ಅಲ್ಲ, ಅದು ನಿಮ್ಮ ಹೃದಯದಲ್ಲಿರಬೇಕು. ಮೊಬೈಲ್ ಹಾಗೂ ಆಧುನಿಕ ಸಾಧನಗಳಲ್ಲಿ ಕನ್ನಡ ಬಳಸುವಂತಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ಸಾಹಿತ್ಯದ ಪಠಣ ನಡೆಯಿತು.

Post a Comment

0Comments

Post a Comment (0)