· ಕೌಶಲ್ಯದಲ್ಲಿ ಕಾರ್ಪೊರೇಟ್ ಅತ್ಯುತ್ಕೃಷ್ಟತಾ ಪ್ರಶಸ್ತಿ-ದೊಡ್ಡ ಕೈಗಾರಿಕೆಗಳ ವರ್
· ಕೌಶಲ್ಯ ಕರ್ನಾಟಕ ಪ್ರಶಸ್ತಿ-ಟಿಟಿಟಿಐ(ಟೊಯೋಟ ಟೆಕ್ನಿಕಲ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್)ಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕೌಶಲ್ಯ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಂಸ್ಥೆ
ಬೆಂಗಳೂರು: ಟೊಯೋಟ ಕಿರ್ಲೋಸ್ಕರ್ ಮೋಟಾರ್ (TKM), ಬೆಂಗಳೂರು ಕೌಶಲ್ಯ ಶೃಂಗಸಭೆ 2025ದ ಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿದೆ. ಇದು, ಭಾರತದಲ್ಲಿ ಅಭಿವೃದ್ಧಿ ಮತ್ತು ಮಾನವ ಬಂಡವಾಳ ನಿರ್ಮಾಣಕ್ಕಾಗಿ ಸಂಸ್ಥೆಯ ಅಸಾಮಾನ್ಯ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟ ಪ್ರಶಸ್ತಿಯಾಗಿದೆ.
ಟಿಕೆಎಮ್, ಕೌಶಲ್ಯ ಕೌಶಲ್ಯ ಕರ್ನಾಟಕ ಕಾರ್ಪೊರೇಟ್ ಅತ್ಯುತ್ಕೃಷ್ಟತಾ ಪ್ರಶಸ್ತಿ (ದೊಡ್ಡ ಕೈಗಾರಿಕೆಗಳ ವರ್ಗ) ಮತ್ತು ಟೊಯೋಟ ಟೆಕ್ನಿಕಲ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್ಗಾಗಿ ಕೌಶಲ್ಯ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಂಸ್ಥೆಗಾಗಿ ಕೌಶಲ್ಯ ಕರ್ನಾಟಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ (KSDC) ಆಯೋಜಿಸಿದ್ದ ಬೆಂಗಳೂರು ಕೌಶಲ್ಯ ಶೃಂಗಸಭೆ 2025, ಕೌಶಲ್ಯ ಪರಿಸರವ್ಯವಸ್ಥೆಯಲ್ಲಿ ಅತ್ಯುತ್ಕೃಷ್ಟತೆಯನ್ನು ಮುನ್ನಡೆಸುತ್ತಿರುವ ನಿದರ್ಶನೀಯ ಸಂಸ್ಥೆಗಳು, ತರಬೇತುದಾರರು ಹಾಗೂ ಸಂಸ್ಥೆಗಳನ್ನು ಗುರುತಿಸುತ್ತದೆ. ಬೆಂಗಳೂರಿನ ದಿ ಲಲಿತ್ ಅಶೋಕ್‌ದಲ್ಲಿ ನವಂಬರ್ 6ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ್ ಪಾಟೀಲ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿಯ ಚೇರ್ ಪರ್ಸನ್ ಶ್ರೀಮತಿ ಶಿವಕಾಂತಮ್ಮ(ಕಾಂತ) ನಾಯ್ಕ್, ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಚೇರ್ಮನ್ ಡಾ. ಇ.ವಿ. ರಮಣ ರೆಡ್ಡಿ(ಐಎಎಸ್, ಆರ್) ಹಾಜರಿದ್ದರು.
ಈ ಮಾನ್ಯತೆಗಳು “Grow India and Grow with India” ಎಂಬ ತತ್ವದಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಪ್ರತಿಭೆಯನ್ನು ಬೆಳೆಸುವಲ್ಲಿ ಟಿಕೆಎಮ್‍ನ ದೀರ್ಘಕಾಲಿಕ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತವೆ. ಕರ್ನಾಟಕ ಸರ್ಕಾರದೊಂದಿಗೆ ನಿರಂತರ ಸಹಕಾರದ ಮೂಲಕ, ಟೊಯೋಟಾ ಯುವಕರಿಗೆ ಉನ್ನತ ಮಟ್ಟದ ತಾಂತ್ರಿಕ ಜ್ಞಾನ, ಶಿಸ್ತು, ಮತ್ತು ಟೊಯೋಟ ಸಂಸ್ಕೃತಿಯ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸುವ ಮೂಲ ಮೌಲ್ಯಗಳನ್ನು ರೂಪಿಸುವಲ್ಲಿ ನೆರವಾಗುತ್ತಿದೆ.
ಟೊಯೋಟ ಟೆಕ್ನಿಕಲ್ ತರಬೇತಿ ಸಂಸ್ಥೆ (TTTI)ಯಲ್ಲಿ, ಗ್ರಾಮೀಣ ಯುವಕರಿಗೆ ಕಠಿಣ ಮತ್ತು ಸಮಗ್ರ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿ ತಾಂತ್ರಿಕ ನಿಪುಣತೆಯ ಜೊತೆಗೆ ನಾಯಕತ್ವ ಗುಣಗಳು, ಜೀವನ ಕೌಶಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯ ಆಳ ಸಂವೇದನೆಯನ್ನು ಒಳಗೊಂಡಿದೆ. ಈ ಉಪಕ್ರಮಗಳು ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಮಿಷನ್ ಮತ್ತು ಕರ್ನಾಟಕ ಸರ್ಕಾರದ ಕೌಶಲ್ಯ ಕರ್ನಾಟಕ ದೃಷ್ಟಿಕೋನಗಳೊಂದಿಗೆ ನಿಕಟವಾಗಿ ಹೊಂದಿಕೊಂಡಿದ್ದು, ಭಾರತವು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನೈಪುಣ್ಯ ಕೇಂದ್ರವಾಗಿ ಬೆಳೆಯುವ ದಾರಿಯನ್ನು ಪ್ರೋತ್ಸಾಹಿಸುತ್ತವೆ.
ಈ ಗೌರವಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ ಟೊಯೋಟ ಕಿರ್ಲೋಸ್ಕರ್ ಮೋಟಾರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಹಣಕಾಸು ಮತ್ತು ಆಡಳಿತ) ಶ್ರೀ ಜಿ. ಶಂಕರ ಅವರು,
“ಕರ್ನಾಟಕ ಸರ್ಕಾರದಿಂದ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸುವುದು ನಮಗೆ ಅತ್ಯಂತ ಗೌರವದ ವಿಷಯ. ಟೊಯೋಟಾದಲ್ಲಿ, ನಾವು ಕೌಶಲ್ಯಾಭಿವೃದ್ಧಿಯನ್ನು ರಾಷ್ಟ್ರ ನಿರ್ಮಾಣದ ಮೂಲವೆಂದು ನಂಬುತ್ತೇವೆ. ಭಾರತದ ಯುವಕರನ್ನು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಲು ಶಕ್ತಿಮತ್ತರನ್ನಾಗಿಸಲು ನಮ್ಮ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಲು ಈ ಮಾನ್ಯತೆಗಳು ನಮಗೆ ಪ್ರೇರಣೆ ನೀಡುತ್ತವೆ. ನಮ್ಮ ತರಬೇತಿಯ ಸುತ್ತಮುತ್ತ 60% ಭಾಗವು ಶಿಸ್ತಿನ ನಿರ್ಮಾಣ, ಮಾದರಿ ಸುರಕ್ಷತಾ ಮನೋಭಾವ, ಮೌಲ್ಯಗಳು, ಗೌರವ, ನಾಗರಿಕ ಸಂವೇದನೆ ಮತ್ತು ಶಾಶ್ವತ ಅಭ್ಯಾಸಗಳನ್ನು ಬೆಳೆಸಲು ಮೀಸಲಾಗಿದೆ. ಉಳಿದ 40% ಭಾಗವು ಪ್ರತಿ ಕೆಲಸದ ಕ್ಷೇತ್ರದಲ್ಲಿ ಜಪಾನಿನ ಟಕುಮಿ ಆದರ್ಶದ ನೈಪುಣ್ಯ ಮತ್ತು ಉತ್ಕೃಷ್ಟತೆಯನ್ನು ಬೆಳೆಸುವಲ್ಲಿ ನೆರವಾಗುತ್ತದೆ.” ಎಂದು ಹೇಳಿದರು.
ಟೊಯೋಟ ಕಿರ್ಲೋಸ್ಕರ್ ಮೋಟಾರ್ (TKM) ತಾಂತ್ರಿಕ ಜ್ಞಾನ ಮತ್ತು ವಾಸ್ತವ ಅನುಭವವನ್ನು ಸಂಯೋಜಿಸಿದ ಸಮಗ್ರ ಕೌಶಲ್ಯಾಭಿವೃದ್ಧಿ ಚಟುವಟಿಕೆಯ ವಿನ್ಯಾಸವನ್ನು ನಿರ್ಮಿಸಿದೆ. TTTI, ಟೊಯೋಟಾ ಕೌಶಲ್ಯ, ಟೊಯೋಟ ಟೆಕ್ನಿಕಲ್ ಎಜುಕೇಷನ್ ಪ್ರೋಗ್ರಾಂ (T-TEP), ಹಾಗೂ ಗ್ಲೋಬಲ್ ಸ್ಕಿಲ್-ಅಪ್ ಕಾರ್ಯಕ್ರಮಗಳ ಮೂಲಕ, ಟಿಕೆಎಂ ಯುವಕರಿಗೆ ಜಾಗತಿಕ ಮಟ್ಟದ ತಾಂತ್ರಿಕ ಪರಿಚಯ ಮತ್ತು ವೃತ್ತಿ ಬೆಳವಣಿಗೆಗೆ ಸಮಾನ ಅವಕಾಶಗಳನ್ನು ನೀಡಿದೆ.
2007ರಲ್ಲಿ ಟಿಕೆಎಮ್‍ನ ಬಿಡದಿ ಪ್ಲಾಂಟ್‌ನಲ್ಲಿ ಸ್ಥಾಪಿಸಲ್ಪಟ್ಟ TTTI, ಗ್ರಾಮೀಣ ಯುವಕರಿಗೆ ಮೂರು ವರ್ಷದ ವಸತಿ ಆಧಾರಿತ ತರಬೇತಿಯನ್ನು ನೀಡುತ್ತದೆ. 1,400ಕ್ಕೂ ಹೆಚ್ಚು ಪದವೀಧರರನ್ನು ಹೊಂದಿರುವ ಮತ್ತು 100% ಉದ್ಯೋಗಾವಕಾಶ ಸಾಧಿಸಿದ ಈ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಜಾಗತಿಕ ಕೌಶಲ್ಯ ಸ್ಪರ್ಧೆಗಳಲ್ಲಿ ಮಿಂಚಿದ್ದಾರೆ. 2024ರಲ್ಲಿ ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ, TTTI ತರಬೇತಿ ಪಡೆದ ಭಾಗವಹಿಸಿದವರು ಅನೇಕ ಎಕ್ಸಲೆನ್ಸ್ ಪದಕಗಳನ್ನು ಪಡೆದರು. ಇದನ್ನು ಪೂರಕವಾಗಿಸಿದಂತೆ, ಟೊಯೋಟ ಕೌಶಲ್ಯ ಕಾರ್ಯಕ್ರಮವು ಫ್ಲೆಕ್ಸಿ MoU ಯೋಜನೆಯಡಿ ಎರಡು ವರ್ಷದ “ ಕಲಿಯುತ್ತಾ ಗಳಿಸಿ ” ಮಾದರಿಯನ್ನು ಅನುಸರಿಸುತ್ತದೆ. ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಶ್ರೀ ಮಂಜುನಾಥ ಎಸ್ ಅವರು, 2024ರ ಆಲ್ ಇಂಡಿಯಾ ಟ್ರೇಡ್ ಟೆಸ್ಟ್‌ನಲ್ಲಿ ರಾಷ್ಟ್ರ ಮಟ್ಟದ ಟಾಪರ್ ಆಗಿ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸನ್ಮಾನಿತರಾದದ್ದು ಇದರ ಯಶಸ್ಸಿನ ಸಾಕ್ಷಿಯಾಗಿದೆ.
ಜಾಗತಿಕ ಮಟ್ಟದಲ್ಲಿ, ತಾಂತ್ರಿಕ ಇಂಟರ್ನ್ ತರಬೇತಿ ಯೋಜನೆಯಡಿ (TITP), ಟಿಕೆಎಂ 1,000 ಕ್ಕೂ ಹೆಚ್ಚು ಯುವಕರಿಗೆ ಜಪಾನ್‌ನ ಟೊಯೋಟ ಮೋಟಾರ್ ಕಾರ್ಪೊರೇಷನ್‌ನಲ್ಲಿ ಉನ್ನತ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ.
ಟಿಕೆಎಮ್, ಕರ್ನಾಟಕ ಸರ್ಕಾರದೊಂದಿಗೆ ಸಕ್ರಿಯ ಸಹಭಾಗಿತ್ವ ಏರ್ಪಡಿಸಿಕೊಂಡು 100ಕ್ಕೂ ಹೆಚ್ಚು ಐಟಿಐಗಳನ್ನು ಅಧ್ಯಾಪಕ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಮತ್ತು ಸಂಸ್ಥೆಯಲ್ಲಿನ ಸಂಸ್ಕೃತಿ ನಿರ್ಮಾಣದ ಮೂಲಕ ಸುಧಾರಿಸಿದೆ. ಸಮಗ್ರ ಶಿಕ್ಷಣ ಕರ್ನಾಟಕದೊಂದಿಗೆ ಸಹಕರಿಸಿ, ಏಳು ಜಿಲ್ಲೆಗಳ 800 ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ಬಲಪಡಿಸುವ ಮೂಲಕ ಗ್ರಾಮೀಣ ಯುವಕರಿಗೆ ಸಮಾನ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸುಲಭಗೊಳಿಸಲಾಗಿದೆ.
ಈ ಎಲ್ಲ ಉಪಕ್ರಮಗಳ ಮೂಲಕ, ದೇಶದಾದ್ಯಂತ 1,40,000 ಕ್ಕೂ ಹೆಚ್ಚು ಯುವಕರನ್ನು ತರಬೇತಿ ನೀಡಿ, ಸಬಲಗೊಳಿಸಲಾಗಿದೆ. ಕೈಗಾರಿಕಾ ಪ್ರಗತಿ ಮತ್ತು ಸಾಮಾಜಿಕ ಪ್ರಗತಿ ಒಂದೇ ಜೊತೆಗೆ ಸಾಗಬೇಕು ಎಂಬ ಟೊಯೋಟಾದ ಶಾಶ್ವತ ನಂಬಿಕೆಯನ್ನು ಇವು ಸ್ಪಷ್ಟಪಡಿಸುತ್ತವೆ.