ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೆಲ ಮುಸ್ಲಿಮರು ಸಾರ್ವಜನಿಕವಾಗಿ ನಮಾಜ್ ಪಠಣ ನಡೆಸಿರುವ ಘಟನೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಸುರಕ್ಷತಾ ಅಧಿಕಾರಿಗಳು ಮತ್ತು ನಿರ್ವಾಹಕ ಸಿಬ್ಬಂದಿ ಇದ್ದರೂ ಅವರು ಈ ನಡೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ.
ಹಿಂದೂ ಜನಜಾಗೃತಿ ಸಮಿತಿ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಹಿಂದೂ ಸಂಘಟನೆಗಳು ಸಾರ್ವಜನಿಕ ಪ್ರದೇಶ ಅಥವಾ ರಸ್ತೆಯಲ್ಲಿ ಕೇವಲ ಒಂದು ಪಥಸಂಚಲನ ನಡೆಸುವ ಬಗ್ಗೆ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಕೇಳಬೇಕಾಗುತ್ತದೆ, ಆದರೆ ವಿಮಾನ ನಿಲ್ದಾಣವಂತು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಉನ್ನತ ಸುರಕ್ಷತಾ ವಲಯ, ಅಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡುವುದು ರಾಷ್ಟ್ರದ ಭದ್ರತೆಯ ಮೇಲಿನ ಪ್ರಶ್ನೆಯಾಗಿದೆ. ಇನ್ನೊಂದೆಡೆ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಭಯೋತ್ಪಾದಕ ಕೈದಿಗಳಿಗೆ ಮೊಬೈಲ್ ಸೌಲಭ್ಯ ದೊರೆಯುತ್ತಿದೆ ಎಂಬ ವಿಡಿಯೋಗಳು ಹರಿದಾಡುತ್ತಿವೆ. ಇಂದು ವಿಮಾನ ನಿಲ್ದಾಣದಲ್ಲಿಯೇ ನಮಾಜ್ ಪಠಣ ನಡೆಯುತ್ತಿದರೂ ಸರ್ಕಾರ ಸುಮ್ಮನಿರುವುದು ಧಾರ್ಮಿಕ ಓಲೈಕೆಯ ನಿದರ್ಶನಗಳಾಗಿವೆ.
ಸರ್ಕಾರವು ಈ ಘಟನೆ ಕುರಿತು ತಕ್ಷಣ ತನಿಖೆ ನಡೆಸಬೇಕು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.