ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರೀ) ವತಿಯಿಂದ ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಮಕ್ಕಳ ದಿನಾಚರಣೆ ಅಂಗವಾಗಿ, ಕಲೆ, ಸಾಹಿತ್ಯ, ಸಂಗೀತ, ಯೋಗ, ಅಂತರ್ಚಕ್ಶು, ನೃತ್ಯ, ಚಿತ್ರಕಲೆ, ಕರಾಟೆ, ಕ್ರೀಡೆ, ಶಿಕ್ಷಣ ಇತ್ಯಾದಿ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ವಿಶ್ವ ದಾಖಲೆಯಲ್ಲಿ ಪಾಲ್ಗೊಂಡ "ಬಹುಮುಖ ಪ್ರತಿಭೆ"ಯ ಮಕ್ಕಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ - ಶ್ರವಂತ್ ಜಿ ಆರ್, ಪರೀಕ್ಷಿತ್.ಎ.ಹೆಚ್ , ಸಿಂಚನ.ಬಿ.ಎ, ಸ್ಕಂದ ವಿನಿತ್.ಬಿ.ಎ , ಮಹತಿ. ಎಸ್.ಸ್ವಾಮಿ , ಶ್ರದ್ಧಾ ತಾರಕ್.ಪಿ.ನೀರಜ್.ಆರ್.ಆರ್ , ಕುಷಿಕ್.ಆರ್, ಮಹಿತ್.ಎಸ್.ಸ್ವಾಮಿ , ಸಚ್ಚಿತ್ ತಾರಕ್.ಪಿ , ಪ್ರಣೀತ್. ಎಸ್.ಡಿ ರವರುಗಳಿಗೆ "ಲಿಟಲ್ ಚಾಂಪಿಯನ್ "ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಮತ್ತು ವಿಶ್ವ ದಾಖಲೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಣ ಕಾರ್ಯಕ್ರಮವನ್ನು ದಿನಾಂಕ 09 ನವಂಬರ್ 2025 ರ ಭಾನುವಾರದಂದು, ಬೆಂಗಳೂರಿನ, ಜೆ ಸಿ ರಸ್ತೆಯ ನಯನ ಸಭಾಂಗಣದಲ್ಲಿ ಆಯೋಜಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ PTA ಗಳಂತಹ ಹೆಸರಾಂತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸಿದ್ದರಾಜು ರವರು, ಬಹುಮುಖ ಪ್ರತಿಭೆ,ವಿಶ್ವ ಒಕ್ಕಲಿಗ ಸಂಘದ ಡೈರೆಕ್ಟರಿ ಸಂಪಾದಕ ಕೆ ಟಿ ಚಂದ್ರು ಮತ್ತು ಖ್ಯಾತ ಇತಿಹಾಸ ತಜ್ಞ ಡಾಕ್ಟರ್ ತಲಕಾಡು ಚಿಕ್ಕ ರಂಗೇಗೌಡರು ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖಪಾತ್ರ ವಹಿಸಿದ ಶಿಕ್ಷಕರುಗಳಾದ ಕಿಶೋರ್ ಕುಮಾರ್, ರೂಪಶ್ರೀ ಎನ್ ಆರ್, ಲಕ್ಷ್ಮೀ ಶ್ರೀ ಸುಧಾಕರ್, ನೀತಾ ಎಸ್ ಶೆಟ್ಟಿ, ವಿದುಷಿ. ಶುಭ ಹೆಗ್ಡೆ ಮತ್ತು ಶರನ್ ರೋಜ್ ರವರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವು ವಿವಿಧ ಬಗೆಯ ನೃತ್ಯಗಳಾದ - ಕಂಗೀಲು, ಹುಲಿ ನೃತ್ಯ, ಮುನೇಶ್ವರ ನೃತ್ಯ,
ಜನಪದ, ಕಾಡು ಮನುಷ್ಯರ ನೃತ್ಯ,
ಭರತನಾಟ್ಯ ಮತ್ತು ವೆಸ್ಟರ್ನ್ ಡಾನ್ಸ್ ಗಳಂತಹ ನೃತ್ಯ ಶೈಲಿಗಳನ್ನು ಪ್ರತಿಬಿಂಬಿಸುವಂತಹ ಸಾಂಸ್ಕೃತಿಕ ನೃತ್ಯ ಪ್ರಕಾರಗಳ ವಿಶೇಷ ಪ್ರದರ್ಶನವಾಗಿತ್ತು. ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳೊಂದಿಗೆ ಶಿಕ್ಷಕರು, ಪೋಷಕರಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿ, ಸಂತೋಷವನ್ನು ವ್ಯಕ್ತಪಡಿಸಿದರು....


