ಕ್ರೀಡಾ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೂತನ, ಅತ್ಯಾಧುನಿಕ ಸುಧಾರಿತ ವ್ಯವಸ್ಥೆಯುಳ್ಳ 'ಡಾ. ನಿವ್ಸ್ ಸ್ಪೋರ್ಟ್ಸ್ ಫಿಸಿಯೋಥೆರಪಿ ಕ್ಲಿನಿಕ್' ಉದ್ಘಾಟನಾ ಸಮಾರಂಭಕ್ಕೆ ನಿಮ್ಮನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆ.
ಮುಖ್ಯ ಅತಿಥಿ: ಕುಮಾರಿ ರಾಜೇಶ್ವರಿ ಗಾಯಕ್ವಾಡ್
(ಭಾರತೀಯ ಮಹಿಳಾ ಕ್ರಿಕೆಟ್ ತಂಡ – ಎಡಗೈ ಸ್ಪಿನ್ನರ್)
ದಿನಾಂಕ: ನವೆಂಬರ್ 10,2025, ಸೋಮವಾರ
ಸಮಯ: ಸಂಜೆ 5 ಗಂಟೆಗೆ
ಸ್ಥಳ: M.C.E.C.H.S ಲೇಔಟ್, 1ನೇ ಹಂತ, ಸಂಪಿಗೆಹಳ್ಳಿ, ಬೆಂಗಳೂರು – 560064
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 6364409651, 6364466240.
ಬೆಂಗಳೂರು, ನವೆಂಬರ್ 2025: ಕ್ರೀಡಾ ಗಾಯಾಳುಗಳ ಚಿಕಿತ್ಸೆಗಾಗಿ ಅತ್ಯಾಧುನಿಕ ವ್ಯವಸ್ಥೆಯುಳ್ಳ
'ಡಾ. ನಿವ್ಸ್ ಸ್ಪೋರ್ಟ್ಸ್ ಫಿಸಿಯೋಥೆರಪಿ ಕ್ಲಿನಿಕ್' ಉದ್ಘಾಟನಾ ಸಮಾರಂಭವು ಇದೇ ನವೆಂಬರ್ 10 ಸೋಮವಾರದಂದು ಸಂಜೆ 5.00 ಗಂಟೆಗೆ MCECHS ಲೇಔಟ್ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲು ಮತ್ತು ಕ್ಲಿನಿಕ್‌ನ ಸೌಲಭ್ಯಗಳನ್ನು ವೀಕ್ಷಿಸಲು ನಿವಾಸಿಗಳು, ಕ್ರೀಡಾಪಟುಗಳು, ಫಿಟ್‌ನೆಸ್ ಉತ್ಸಾಹಿಗಳು ಹಾಗೂ ಮಾಧ್ಯಮ ಮಿತ್ರರನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆ.
ಡಾ. ನಿವೇದಾ ದಿಲೀಪ್ (ಡಾ. ನಿವ್) ಅವರು ಈ ಕ್ಲಿನಿಕ್ ಅನ್ನು ಸ್ಥಾಪಿಸಿದ್ದಾರೆ. ನಿವೇದಾ ಅವರು ಭಾರತೀಯ ರೈಲ್ವೇ ಮಹಿಳಾ ಕ್ರಿಕೆಟ್ ತಂಡ ಮತ್ತು ಬಿಸಿಸಿಐ ಮಟ್ಟದಲ್ಲಿ ರಣಜಿ ಟ್ರೋಫಿಯಲ್ಲಿ ಅಸ್ಸಾಂ ಮಹಿಳಾ ಕ್ರಿಕೆಟ್ ತಂಡ ಸೇರಿದಂತೆ ಗಣ್ಯ ತಂಡಗಳೊಂದಿಗೆ ಕೆಲಸ ಮಾಡಿದ ಅನುಭವಿ ಕ್ರೀಡಾ ಫಿಸಿಯೋಥೆರಪಿಸ್ಟ್ ಆಗಿದ್ದಾರೆ.
ಕ್ರೀಡಾಳುಗಳಿಗೆ ಪುನರ್ವಸತಿ ಮತ್ತು ಕಾರ್ಯಕ್ಷಮತೆಯಲ್ಲಿ ಚೇತರಿಕೆ ಕಂಡುಕೊಳ್ಳುವ ಕಾರ್ಯಕ್ರಮಗಳನ್ನು ನೀಡುವುದು ಕ್ಲಿನಿಕ್‌ನ ಗುರಿಯಾಗಿದೆ. ನಮ್ಮ ಗುರಿ ಕೇವಲ ನೋವು ನಿವಾರಣೆಯಲ್ಲ, ಬದಲಿಗೆ ಕ್ರೀಡಾಪಟುಗಳು ಇನ್ನಷ್ಟು ಬಲಿಷ್ಠವಾಗಿ ಚೇತರಿಸಿಕೊಳ್ಳಲು ಮತ್ತು ಅವರ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದು ಎಂದು ಡಾ. ನಿವ್ ಹೇಳಿದ್ದಾರೆ.
ಈ ಕ್ಲಿನಿಕ್ ಪ್ರತಿ ಕ್ರೀಡಾಪಟುವಿನ ಅಗತ್ಯಗಳಿಗೆ ಅನುಗುಣವಾಗಿ ಡ್ರೈ ನೀಡ್ಲಿಂಗ್, ಕಪ್ಪಿಂಗ್ ಥೆರಪಿ, ಮ್ಯಾನುಯಲ್ ಥೆರಪಿ, ಮಯೋಫೇಶಿಯಲ್ ರಿಲೀಸ್, ಕಿನಿಸಿಯಾಲಜಿ ಟೇಪಿಂಗ್ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಪುನರ್ವಸತಿ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ಒದಗಿಸುತ್ತದೆ. ಪವರ್‌ಲಿಫ್ಟರ್, ಕ್ರಿಕೆಟಿಗರು, ಓಟಗಾರರು ಚೇತರಿಕೆ ಜೊತೆಗೆ ಕಾರ್ಯಕ್ಷಮತೆಯಲ್ಲಿ ಅಭಿವೃದ್ಧಿ ಹೊಂದಲು ವೃತ್ತಿಪರ ಮಾರ್ಗದರ್ಶನವನ್ನು ಬಯಸುವ ವ್ಯಕ್ತಿಗಳಿಗೆ ಸೇವೆ ಸಲ್ಲಿಸಲು ಸಿದ್ಧವಿದೆ ಎನ್ನುತ್ತಾರೆ ಕ್ಲಿನಿಕ್ ನ ಸ್ಥಾಪಕರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651
