ಪ್ರೇಕ್ಷಕರ ಮನಸೆಳೆದ ಆವನಿ ಗಾಯನ

varthajala
0


ಬೆಂಗಳೂರು : ಮಲ್ಲೇಶ್ವರದ  ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕು|| ಅವನಿ ಭಟ್ "ಹರಿದಾಸ ವೈಭವ" ಶೀರ್ಷಿಕೆಯಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಳು. 

ಶ್ರೀ ಪುರಂದರದಾಸರ "ವಂದಿಸುವುದಾದಿಯಲಿ ಗಣನಾಥನ" ಎಂಬ ಗಣೇಶನ ಕೃತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವನಿ "ಗುರು ಪುರಂದರದಾಸರೆ", "ತುಂಗಾ ತೀರದಿ", "ಶಿವ ದರುಶನಕೆ", "ಪವಮಾನ", "ಭಾಗ್ಯದ ಲಕ್ಷ್ಮಿ ಬಾರಮ್ಮ", "ಅಂಬಿಗಾ ನಾ ನಿನ್ನ ನಂಬಿದೆ", "ತೋಳು ತೋಳು ತೋಳು ರಂಗ" ಹೀಗೆ ಒಂದರ ನಂತರ ಒಂದು ಬಿಡುವಿಲ್ಲದೆ ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಹಾಡಿದಳು. ಶ್ರೀ ಪ್ರಸನ್ನವೆಂಕಟದಾಸರ "ಎಂಥಾ ಶ್ರೀಮಂತನಂತನೋ" ಹಾಗೂ ಶ್ರೀ ವಾದಿರಾಜರ ತುಳು ಭಾಷೆಯ "ಲೇ ಲೇ ಲೇ ಲೇ ಲೇಗ" ಎಂಬ ಎರಡೂ ಕ್ಲಿಷ್ಟಕರವಾದ ಹಾಡುಗಳನ್ನು ಸುಲಲಿತವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಳು.

ಜಿಗಣಿಯ ನಿವಾಸಿ ಶ್ರೀ ಕಾರ್ತಿಕ್ ಮತ್ತು ಶ್ರೀಮತಿ ಚೇತನರವರ ಜೇಷ್ಠ ಪುತ್ರಿ ಕು|| ಅವನಿ ಭಟ್ ಅಚೀವರ್ಸ್ ಅಕಾಡೆಮಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸಂಗೀತವನ್ನು ವಿದ್ವಾನ್ ಶ್ರೀ ಈಶ್ವರ ಭಟ್ ಕಾಂಚನ ಅವರ ಹತ್ತಿರ ಕಲಿಯುತ್ತಿದ್ದಾಳೆ. ಸಂಗೀತವಷ್ಟೇ ಅಲ್ಲದೆ ಭರತನಾಟ್ಯವನ್ನೂ ಕಲಿಯುತ್ತಿರುವ ಅವನಿ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜೂನಿಯರ್ ಪರೀಕ್ಷೆ ಬರೆಯಲಿದ್ದಾಳೆ. ಪ್ರಸ್ತುತ ಕೀಬೋರ್ಡ್ ವಾದನದಲ್ಲಿ ಕೂಡಾ ಆಸಕ್ತಿಹೊಂದಿದ್ದು ಅದನ್ನೂ ಅಭ್ಯಾಸ ಮಾಡುತ್ತಿದ್ದಾಳೆ.

Post a Comment

0Comments

Post a Comment (0)