ಶಯನೋತ್ಸವ ಸುಸಂಪನ್ನ

varthajala
0

ಬೆಂಗಳೂರು :- ವಸಂತಪುರದಲ್ಲಿ ಅನಾಧಿಕಾಲದಿಂದ ನೆಲಸಿರುವ ಸ್ವಯಂವ್ಯಕ್ತ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ಕಾರ್ಯವು ಸುಸಂಪನ್ನವಾಯಿತು.


ಕಳೆದ ಒಂಬತ್ತು ದಿನಗಳಿಂದ ನೆಡೆದ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವವು ವೈಭವಯುತವಾಗಿ ನೆಡೆದು ಅಂತಿಮ ಉತ್ಸವವಾಗಿ ಸ್ವಾಮಿಗೆ ವಿಶ್ರಾಂತಿ ನೀಡುವ ಶಯನೋತ್ಸವವು ಸುಗಂಧ ಪರಿಮಳಯುಕ್ತ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು, ಈ ಉತ್ಸವವನ್ನು ತಲಗೆಟ್ಟಪುರ ಮಾಜಿ ಶ್ಯಾನಭೋಗ ಟಿ ವಿ ನಾರಾಯಣಮೂರ್ತಿ ಯವರ ಕುಟುಂಬದವರು ನೆಡಸಿಕೊಂಡು ಬಂದಿದ್ದಾರೆ ಪ್ರಸ್ತುತ ತ. ನಾ. ಶಾಂತಕುಮಾರ್ ಅವರ ನೇತೃತ್ವದಲ್ಲಿ ಅವರ ಕುಟುಂಬದವರೊಂದಿಗೆ ನೆಡೆಯಿತು, ಪ್ರಧಾನ ಅರ್ಚಕ ರಘುರಾಮ್ ಭಟ್ ಅವರು ಸಕಲ ವಿಧಿವಿಧಾನ ಗಳೊಂದಿಗೆ ಪೂಜಾ ಕಾರ್ಯವನ್ನು ಮಾಡಿದರು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಎನ್. ಎಸ್. ಸುಧೀಂದ್ರ ರಾವ್, ಕಿರಣ್ ಕುಮಾರ್, ಎಸ್. ರಾಮರಾವ್, ಸುಧಾಕರ್ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)