KANNADA - KARNATAKA LANGUAGE - ಮಾತೃಭಾಷೆಗೆ ಮಾತೃಸ್ಥಾನ ಕೊಡದಿದ್ದರೆ ಹೇಗೆ?

varthajala
0

ಮಾತೃಭಾಷೆ ಈ ಪದವನ್ನು ಬೇರೆ ಬೇರೆ ಮಾಡಿದಾಗ ಮಾತೃ ಮತ್ತು ಭಾಷೆ ಆಗಿ ನೋಡಿದಾಗ ನಾವು ಆಡುವ ಭಾಷೆಗೆ ಅಮ್ಮನ ಸ್ಥಾನ ಕಲ್ಪಿಸಿ ಈ ಪದ ಉಗಮ ವಾಗಿರಬಹುದು ಅನ್ನುವಂತಿದೆ. ಅಮ್ಮನು ತನ್ನ ಕರುಳ ಕುಡಿಯಲ್ಲಿ ಮಾತನಾಡುವ ಮೊದಲ ಭಾಷೆ ಎಂಬ ಅರ್ಥದಲ್ಲಿಯೂ ಇರ ಬಹುದು. ಒಟ್ಟಾರೆ ನಾವು ಹುಟ್ಟಿ ದಾಗಿನಿಂದ ಮೊದಲ ತೊದಲು ನುಡಿಗಳು ಇದರಲ್ಲಿರುತ್ತದೆ ಎಂಬುದು ಸತ್ಯ.



ದಕ್ಷಿಣ ಆಫ್ರಿಕದ ಅಧ್ಯಕ್ಷರಾ ಗಿದ್ದ ನೆಲ್ಸನ್ ಮಂಡೇಲಾ ಅವರು ಹೇಳುವಂತೆ ನಾವು ಒಬ್ಬರಲ್ಲಿ ಅವರಿಗೆ ತಿಳಿದಿರುವ ಭಾಷೆಯಲ್ಲಿ ಮಾತನಾಡಿದಾಗ ಅದು ತಲೆಗೆ ತಲುಪುತ್ತದೆ. ಮಾತೃಭಾಷೆಯಲ್ಲಿ ಮಾತನಾಡಿ ದಾಗ ಅದು ಹೃದಯಕ್ಕೆ ತಲಪುತ್ತದೆ. ಅಂದರೆ ಹೆಚ್ಚು ಹೃದ್ಯವಾಗುತ್ತದೆ. ನಮ್ಮಲ್ಲಿರುವ ಭಾವನೆಗಳನ್ನು ಹೊರಹಾಕಿ ಮತ್ತೊಬ್ಬರಿಗೆ ಮನದಟ್ಟು ಮಾಡಲು ಹಾಗೂ ಅವರು ಅದ ನ್ಜು ಹೃದಯದಿಂದ ಸ್ವೀಕರಿಸಲು ಇದು ಪ್ರಬಲ ಮಾಧ್ಯಮ ವೆನ್ನಬಹುದು.ಈಗ ನೋಡಿ, ನಾವು ಯಾವುದೇ ವಿಚಾರದ ಬಗ್ಗೆ ಬೇರೆ ಭಾಷೆಯಲ್ಲಿ ವಿವರಿಸುವುದಕ್ಕಿಂತ ನಮ್ಮ ಮಾತೃಭಾಷೆಯಲ್ಲಿ ವಿವರಿಸಿದರೆ ಅದನ್ನು ಅರ್ಥೈಸುವವರಿಗೆ ಮನದಟ್ಟಾಗುವ ತೀವ್ರತೆ ಹೆಚ್ಚು.

 ಒಬ್ಬ ವ್ಯಕ್ತಿಯು ಚಿಂತಿಸು ವುದು ತನ್ನ ತಾಯಿಭಾಷೆಯಲ್ಲಿ. ಈಗ ಒಬ್ಬರು ಸಿನಿಮಾ ನೋಡುತ್ತಾರೆ ಅಂತ ಇಟ್ಟು ಕೊಳ್ಳಿ, ಅದು ಬೇರೆ ಭಾಷೆಯ ದಿದ್ದರೂ ಅವರ ತಲೆಯಲ್ಲಿ ಅದರ ಚಿತ್ರಗಳು ಓಡುವುದು, ಅದರ ಜತೆ ಮಾತನಾಡುವುದು ಎಲ್ಲವೂ ಅವರ ಮಾತೃಭಾಷೆ ಯಲ್ಲಿ. ಆಸ್ವಾದಿಸುವುದು ಮಾತೃಭಾಷೆಯಲ್ಲಿ. ಹೌದು ಆಸ್ವಾದಿಸಲೂ ಭಾಷೆಯಿದೆ!

ಅಕ್ಬರನ ಆಸ್ಥಾನಕ್ಕೆ ಒಬ್ಬ ಬ್ರಾಹ್ಮಣ ಬರುತ್ತಾನೆ. ಅವನು ಬಹುಭಾಷಾ ಪಾರಂಗತ. ಮಾತೃಭಾಷೆ ಯಾವುದೆಂದು ಕಂಡುಹಿಡಿಯಲು ಬಹಳ ಕಷ್ಟವಾಗುತ್ತದೆ. ಅಷ್ಟು ತನಗೆ ಎಲ್ಲಾ ಭಾಷೆಗಳು ಜ್ಞಾನವಿದೆ ಆಳವಾದ ಪಾಂಡಿತ್ಯವಿದೆ ಅನ್ನು ತ್ತಾನೆ. ಅಕ್ಬರನು ಅವನ ಭಾಷಾ ಜ್ಞಾನವನ್ನು ಅರಿಯಲು ಹಾಗು ಮಾತೃಭಾಷೆ ಯಾವುದೆಂದು ಕಂಡುಹಿಡಿಯಲು ಮಂತ್ರಿಗಳಲ್ಲಿ ಆಜ್ಞೆ ಮಾಡುತ್ತಾನೆ. ದರ್ಬಾರಿನ ಎಲ್ಲಾ ಭಾಷಾ ಜ್ಞಾನಿಗಳು ಅವ ನೆದುರು ಸೋತಾಗ ಬೀರಬ ಲ್ನನ್ನು ಕರೆಯುತ್ತಾನೆ. ಬ್ರಾಹ್ಮ ಣನು ರಾತ್ರಿ ಒಳ್ಳೆ ನಿದ್ದೆಯಲಿ ್ಲದ್ದಾಗ ಅವನ ಕಾಲಿಗೆ, ಕಿವಿಗೆ ಕಚಗುಳಿ ಇಟ್ಟು ನಿದ್ದೆಗೆ ಭಂಗ ತರುತ್ತಾನೆ. ನಿದ್ರಾಭಂಗ ಉಂಟಾ ದಾಗ ಬ್ರಾಹ್ಮಣನು ತಮಿಳಿನಲ್ಲಿ ನನ್ನನ್ನು ಏಳಿಸಿದ್ದು ' ಎಂದು ಕೇಳುತ್ತಾನೆ. ಮರುದಿನ ಆಸ್ಥಾ£ Àದಲ್ಲಿ ಬೀರಬಲ್ಲನು ನಡೆದಿದನ್ನು ಹೇಳಿದಾಗ ಬ್ರಾಹ್ಮಣನು ಒಪ್ಪಿಕೊಳ್ಳುತ್ತಾನೆ ಹಾಗೂ ಬೀರ ಬಲ್ಲನ ಜಾಣ್ಮೆಯನ್ನು ಮೆಚ್ಚು ತ್ತಾನೆ. ಅಂದರೆ ಹೆದರಿಕೆಯಾದಾ ಗಲೂ, ಬೈಯುವಾಗಲೂ ನಮಗೆ ಬಾಯಿಗೆ ಬರುವ ಭಾಷೆ ಮಾತೃಭಾಷೆ.

ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಪ್ರಾಥಮಿಕ ಹಂತದ ಶಿಕ್ಷಣ ಯಾವತ್ತಿದ್ದರೂ ಮಾತೃ ಭಾಷೆಯಲ್ಲಿಯೇ ಕಲಿಯುವುದು ಉತ್ತಮ. ಅದಕ್ಕಾಗಿಯೇ ಅಲ್ಲವೇ ಶಿಕ್ಷಣ ತಜ್ಞರು ವಾದಿಸು ವುದು ಮಾತೃಭಾಷಾ ಶಿಕ್ಷಣ ಕಡ್ಡಾಯ ಮಾಡಬೇಕೆಂದು. ಇಂಗ್ಲಿಷ್ ಪರ ಧೋರಣೆ ಬೇಡ ವೆಂದಲ್ಲ. ಪ್ರಾಥಮಿಕ ಮಕ್ಕಳ ಕಲಿಕಾ ಸಾಮಥ್ರ್ಯ ಅವರು ಪಡೆದ ಮಾತೃಭಾಷೆಯಲ್ಲಿ ಇದ್ದರೆ, ಬೇರೆ ಭಾಷೆಯಲ್ಲಿ ಕಲಿವ ಸಾಮಥ್ರ್ಯಕ್ಕಿಂತ ಏಳು ಪಟ್ಟು ಹೆಚ್ಚಾಗಿರುತ್ತದೆ ಎನ್ನಲಾಗುತ್ತದೆ.

ಮಾನವನ ವಿಕಾಸದ ಬೆಳವಣಿಗೆಯಲ್ಲಿ ಭಾಷೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ನಿರಂತರ ನಡೆಯುವ ಪ್ರಕ್ರಿಯೆ. ಸಂವಹನ ಸಾಧನವಾಗಿ ಅದು ಬೆಳೆದು ಬಂದ ರೀತಿ ಅಮೋಘ. ಜಗತ್ತಿನ ಆಯಾ ನಾಗರಿಕತೆಗಳು ಬೆಳೆದಂತೆ ವಿವಿಧ ದೇಶ ರಾಜ್ಯ ಪ್ರಾಂತ್ಯ ಗಳಿಗೆ ಹೊಂದಿಕೊಂಡು ವಿವಿಧ ಭಾಷೆಗಳು ಜನ್ಮ ತಾಳಿ ವಿಕಸನ ಗೊಂಡವು. ವಿಶ್ವಸಂಸ್ಥೆಯ 1900 ರಲ್ಲಿ ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಸುಮಾರು 10000 ಭಾಷೆಗಳು ಬಳಕೆಯಲ್ಲಿದ್ದವು. ಇಂದಿಗೆ ಅದು 6700 ಭಾಷೆ ಗಳು ಚಾಲ್ತಿಯಲ್ಲಿವೆ. ಉಳಿದ ಭಾಷೆಗಳು ಅಳಿವಿನ ಅಂಚಿನಲ್ಲಿವೆ. ನಾವು ಕನ್ನಡಿಗರು ನಮ್ಮ ಮಾತೃಭಾಷೆಯನ್ನು ತುಂಬಾ ಪ್ರೀತಿಸುತ್ತೇವೆ ನಿಜ. ಆದರೆ ನಮ್ಮದು ದೊಡ್ಡ ಮನಸ್ಸು. ಬೇರೆ ಭಾಷೆಗಳನ್ನು ಬೇಗ ಕಲಿಯು ತ್ತೇವೆ. ನಮ್ಮ ರಾಜ್ಯದಲ್ಲೇ ನೋಡಿ, ಅದರಲ್ಲೂ ಗಡಿಭಾ ಗಗಳಲ್ಲಿ, ನಗರಗಳಲ್ಲಿ ಕೆಲಸ ಮಾಡುವವರು ಮತ್ತೊಂದು ರಾಜ್ಯದಿಂದ ಬಂದವರು ಕನ್ನಡ ಮಾತನಾಡುವುದು ತುಂಬಾ ಕಡಿಮೆ. ಅವರು ಮಾತೃಭಾಷೆ ಮಾತನಾಡುತ್ತಾರೆ. ನಾವು ಅವರ ಭಾಷೆ ಕಲಿತು ಬಹುಭಾಷಾ ಪಾರಂಗತರಾಗುತ್ತೇವೆ. ಮಾತೃಭಾಷೆಯ ಬಗ್ಗೆ ಇರುವ ಧೋರಣೆ ನಾವು ಅವರಿಂದ ಕಲಿಯುವುದಿದೆ. ಒಮ್ಮೆ ಕೇರಳಕ್ಕೋ, ಚೆನ್ನೈಗೋ ಹೋಗಿ ನೋಡಿದಾಗ ತಿಳಿಯುತ್ತದೆ ಅಲ್ಲಿಯ ಮಾತೃಭಾಷಾ ಸ್ನೇಹ. ಅವರು ಅವರ ಮಾತೃಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಸಂವಹನ ನಡೆಸುವುದು ತೀರಾ ಕಡಿಮೆ. ಚೀನಾ, ಜಪಾನ್, ರಷ್ಯಾ ಮುಂತಾದ ದೇಶಗಳಲ್ಲಿ ಇಂಗ್ಲಿಷ್ ಉಪಯೋಗ ಬಲು ಕಡಿಮೆ ಹಾಗೂ ತಮ್ಮ ಮಾತೃಭಾಷೆ ಯಲ್ಲಿಯೇ ವ್ಯವಹರಿಸುವುದು ಹಾಗೂ ಕಲಿಯುವುದು. ಹಾಗೂ ಜಾಗತೀಕರಣದ ಪ್ರಭಾವದಿಂದ ಪ್ರಪಂಚದಲ್ಲಿ ಇಂದು ಸಣ್ಣ ಸಣ್ಣ ಪ್ರಾಂತೀಯ ಭಾಷೆಗಳು ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲ ಇಂಗ್ಲಿಷ್ ಭಾಷೆಯ ಪ್ರಬಲತೆ ಹಾಗೂ ವ್ಯಾಮೋಹವೇ ಕಾರಣ. ಯಾವುದೇ ರೀತಿಯ ಕ್ಷೇತ್ರದಲ್ಲಿ ಅದರಲ್ಲೂ ತಾಂತ್ರಿಕ-ವೈಜ್ಞಾನಿಕ ರಂಗದಲ್ಲಿ ಮಾತೃಭಾಷೆಯ ಮೂಲಕ ವಿವರಿಸುವ ಪುಸ್ತಕ, ಪಠ್ಯ ಲಭ್ಯವಿಲ್ಲದಿರುವುದು ಇಂಗ್ಲಿಷ್ ಭಾಷಾ ಕಲಿಕೆಗೆ ಬೇಡಿಕೆ ಹೆಚ್ಚಾಗಲು ಕಾರಣವಾ ಯಿತು. ಈ ಹಂತದಲ್ಲಿ ಯುನೆಸ್ಕೊ ರಾಷ್ಟ್ರಗಳ ಸದಸ್ಯರು ಒಟ್ಟುಗೂಡಿ ಮಾತೃಭಾಷೆಯನ್ನು ರಕ್ಷಿಸಲು ಪೆಬ್ರವರಿ 21 ರಂದು `ವಿಶ್ವ ಮಾತೃಭಾಷಾ ಜಾರಿಗೊಳಿ ಸಿದರು. ಭಾಷೆ ಉಳಿಯಬೇಕು, ಬೆಳೆಯಬೇಕು ಎಂದಿದ್ದರೆ ಅದು ಸಂವಹನ ಬಳಕೆಯ ಮೂಲಕವೇ ಸಾಧ್ಯ. ಮಾತೃ ಭಾಷೆ ನಮಗೆ ನಮ್ಮನ್ನು ಹಲವರಿಗೆ ಪರಿಚಯ ಮಾಡಿ ಕೊಟ್ಟಿದೆ ಎಂದರೆ ತಿರುಗಿ ಅದಕ್ಕೆ ನಾವು ಕೊಡಬೇಕಾದ ಕೊಡುಗೆ ಯೆಂದರೆ ಅದನ್ನು ಬೆಳೆಸುವುದು ಮತ್ತು ಬಳಸುವುದು. ಸಂವಹ ನದ ಮೂಲಕ ಮಾತ್ರ ಭಾಷೆ ಉಳಿಯಬಹುದು. ನಮ್ಮ ಮಕ್ಕಳಲ್ಲಿ ಮಾತೃಭಾಷೆಯ ಮೂಲಕವೇ ಮಾತನಾಡುವುದೇ ಅದರ ರಕ್ಷಣೆಗೆ ನಮ್ಮಿಂದಾಗ ಬಹುದಾದ ಉತ್ತಮ ಪ್ರಯತ್ನ. ಸರಕಾರವೂ ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾ ಯವಾಗಿ ಮಾಡಿರುವುದರಿಂದ ಒಂದು ಮಟ್ಟದಲ್ಲಿ ಉಳಿದಿದೆ ಎನ್ನುವುದೇನೋ ಸರಿ. ಇದು ಇಂಗ್ಲಿಷ್ ಬೇಡ ಎಂಬ ಧೋರ ಣೆಯಲ್ಲ. ಮಾತೃಭಾಷೆ 

Post a Comment

0Comments

Post a Comment (0)