About Us

 ಜಗತ್ತು ಚಿಕ್ಕದಾಗಿದೆ. ಸಂವಹನ ಮಾಧ್ಯಮಗಳು ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿರುವುದರಿಂದ ವಿಶ್ವದಲ್ಲಿ ನಡೆಯುವ ಘಟನೆಗಳು ಕ್ಷಣ ಮಾತ್ರದಲ್ಲಿ ಧುತ್ತೆಂದು ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಹಾಗೆಯೇ ದೃಶ್ಯಮಾಧ್ಯಮ ಇಂದು ಮುದ್ರಣ ಮಾಧ್ಯಮಕ್ಕಿಂತ ಬಹಳಷ್ಟು ಮುಂದುವರೆದಿದೆ.  ಅಂಗೈ ಅಗಲದ ಪುಟ್ಟ ಮೊಬೈಲ್ನಲ್ಲೇ ಇಡೀ ಪ್ರಪಂಚದ ಸುದ್ದಿಯನ್ನು ಜಾಲಾಡಿಸುವ ವ್ಯವಸ್ಥೆ ನಮ್ಮ ಕೈ ಬೆರಳುಗಳಲ್ಲಿಯೇ ಇದೆ. ಇದನ್ನು ಮನಗಂಡೇ ನಾವೂ ಸಹಾ ಕಾಲಚಕ್ರದೊಂದಿಗೆ ವೇಗವಾಗಿ ಹೆಜ್ಜೆಯನ್ನು ಹಾಕುತ್ತಿದ್ದೇವೆ. ಅಂತೆಯೇ ‘ವೀ ಕೇ ಪ್ರೋಸೆಸ್’ ಸಂಸ್ಥೆಯು ಪ್ರಸನ್ನ ಅವರ ನಾಯಕತ್ವದಲ್ಲಿ 1994ರಲ್ಲಿ ಆರಂಭಗೊಂಡಿತು. `ದಿನನಿತ್ಯದ ಆಗು-ಹೋಗುಗಳ ಸುದ್ದಿಗಳನ್ನು ತಿಳಿದುಕೊಳ್ಳುವುದು ಓದುಗನ ಹಕ್ಕು’ ಎಂಬ ಬದ್ಧತೆಯೊಂದಿಗೆ ಆರಂಭಗೊಂಡಿರುವ `ವಾರ್ತಾಜಾಲ’ ತಾಜಾ ಸುದ್ದಿಗಳನ್ನು ತಲುಪಿಸಲು ಅಹರ್ನಿಶಿ ಶ್ರಮಿಸುತ್ತಿದೆ.
1960ರ ದಶಕದ ಪತ್ರಕರ್ತ ಶ್ರೀ ಬಿ.ಎಸ್. ಕೃಷ್ಣರಾವ್ ಅವರ ಪುತ್ರ ಪ್ರಸನ್ನ ಅವರಿಗೆ ಪತ್ರಿಕೋದ್ಯಮ ರಕ್ತಗತವಾಗಿ ಬಂದಿದೆ. ಈಗಾಗಲೇ ರಾಜ್ಯದ ಸಾವಿರಾರು ಪತ್ರಿಕೆಗಳಿಗೆ ಧ್ವನಿಯಾಗಿರುವ ವೀ ಕೇ ಪ್ರೋಸೆಸ್ ಅನೇಕ ಉದಯೋನ್ಮುಖ ಪತ್ರಕರ್ತ ಮಿತ್ರರ ಆಶಾಕಿರಣವಾಗಿದ್ದಾರೆ. 

Post a Comment

0Comments

Post a Comment (0)