ಹಿರಿಯ ಸಂಶೋಧಕ ಡಾ. ಎ.ವಿ. ನಾವಡ ಅವರಿಗೆ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿ

varthajala
0

ದಿನಾಂಕ 12-3-2021 ರಂದು ನಾಡೋಜ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು, ಹಿರಿಯ ಸಂಶೋಧಕರೂ, ಸಾಹಿತಿಗಳೂ ಆದ ಡಾ. ಎ.ವಿ. ನಾವಡ ಅವರನ್ನು 2020ನೇ ಸಾಲಿನ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿತು. 


ಪ್ರೊ. ಎ.ವಿ. ನಾವಡರು ಕನ್ನಡ, ತುಳು ಭಾಷಾ ವಿದ್ವಾಂಸರಾಗಿ ಕಳೆದ ಐದು ದಶಕಗಳಿಂದ ಸಾಹಿತ್ಯ ಸಂಶೋಧನ ಲೋಕದಲ್ಲಿ ತೊಡಗಿಸಿಕೊಂಡ ಹಿರಿಯ ವಿದ್ವಾಂಸರು. ಹಸ್ತಪ್ರತಿ ಶಾಸ್ತ್ರ, ಭಾಷಾ ವಿಜ್ಞಾನ, ನಿಘಂಟು ವಿಜ್ಞಾನ, ಜಾನಪದ ವಿಜ್ಞಾನ, ಅನುಭಾವ ಸಾಹಿತ್ಯ, ಮಿಷನರಿ ಸಾಹಿತ್ಯ ನಾವಡರ ಬಹುಮುಖಿ ಅಧ್ಯಯನದ ಪ್ರಧಾನ ನೆಲೆಗಳು.

ಇದುವರೆಗೆ ನಾವಡರು ಎಂಬತ್ತೈದಕ್ಕೂ ಮಿಕ್ಕು ಸಂಶೋಧನೆ, ವಿಮರ್ಶನ, ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದು ಕರ್ನಾಟಕ ಸರ್ಕಾರದ ಕನಕಶ್ರೀ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ನಾಡು ಗೌರವಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಡೀನ್ ಆಗಿ ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನಪೀಠದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿಯು ರೂ. 10,000/- ನಗದು  ಪುರಸ್ಕಾರವನ್ನೊಳಗೊಂಡಿದ್ದು, ಪ್ರಶಸ್ತಿ ಫಲಕ ನೀಡಿ ಪ್ರದಾನ ಮಾಡಲಾಗುವುದು.

ಈ ಆಯ್ಕೆ ಸಮಿತಿಯಲ್ಲಿ ಸದಸ್ಯರಾದ ಶ್ರೀ ಟಿ.ವಿ. ವಿದ್ಯಾಶಂಕರ್, ಶ್ರೀ ಎಲ್.ಎಸ್. ಶಿವಮೂರ್ತಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಶ್ರೀ ಕೆ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಅವರುಗಳು ಉಪಸ್ಥಿತರಿದ್ದರು. 

www.shikshanarathna.com
Tags

Post a Comment

0Comments

Post a Comment (0)