‘ಸಂಸ್ಕತಾಧ್ಯಾಪಕರಿಗಾಗಿ ಓರಿಯಂಟೇಶನ್ ಕೋರ್ಸ್’

varthajala
0

 ಕರ್ನಾಟಕ ಸಂಸ್ಕತ ವಿಶ್ವವಿದ್ಯಾಲಯವು ಸಂಸ್ಕøತ ಅಧ್ಯಾಪಕರಿಗಾಗಿ ಓರಿಯಂಟೇಶನ್ ಕೋರ್ಸ್‍ಅನ್ನು ಆನ್‍ಲೈನ್ ಮೂಲಕ ಹಮ್ಮಿಕೊಂಡಿತ್ತು. ದಿನಾಂಕ: 02.06.2021ರಿಂದ 11.06.2021ರ ವರೆಗೆ ಹತ್ತು ದಿನಗಳ ಕಾಲ ನಡೆದ ಈ ಕೋರ್ಸ್‍ನಲ್ಲಿ ದೇಶದ ಪ್ರಖ್ಯಾತ ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸಗಳನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಂದ ಸುಮಾರು 400ಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು.



ಓರಿಯಂಟೇಶನ್ ಕೋರ್ಸ್‍ನ ‘ಸಮಾರೋಪ ಸಮಾರಂಭ’ವು ದಿನಾಂಕ: 11.06.2021ರ ಶುಕ್ರವಾರ ಸಂಜೆ 4.00 ಗಂಟೆಗೆ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು ಭಾಗವಹಿಸಿದ್ದರು. ವೇದವಿಜ್ಞಾನ ಗುರುಕುಲದ ಅಧ್ಯಕ್ಷರಾದ ಪ್ರೊ. ರಾಮಚಂದ್ರ ಭಟ್ ಕೋಟೆಮನೆ ಅವರು ಸಮಾರಂಭದಲ್ಲಿ ಭಾಗವಹಿಸಿ ಸಮಾರೋಪ ಭಾಷಣವನ್ನು ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಇ. ದೇವನಾಥನ್ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು ಮಾತನಾಡಿ, ‘ಭಾರತದ ಅತ್ಯಂತ ಪ್ರಾಚೀನ ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಯಾವ ಭಾಷೆಗೆ ಆರ್ಥಿಕ ಮತ್ತು ಶೈಕ್ಷಣಿಕ ಅನುಕೂಲತೆಗಳು ಇರುತ್ತವೆಯೋ ಅವುಗಳು ಮಾತ್ರ ಉಳಿಯುತ್ತವೆ. ಆದರೆ ಭಾಷೆಗಳು ಸಂಸ್ಕøತಿಯ ವಾಹಕಗಳು. ಅವುಗಳು ಅಳಿದರೆ ಸಂಸ್ಕøತಿಯೇ ಅಳಿಯುತ್ತದೆ. ಸಂಸ್ಕøತವು ಒಂದು ಕಾಲದಲ್ಲಿ ಅನೇಕ ದೇಶಗಳಲ್ಲಿ ವ್ಯಾಪಿಸಿತ್ತು. ಆದರೆ ಈಗ ಸರ್ಕಾರಗಳು ಸಂಸ್ಕøತದ ಅವನತಿಗೆ ಕಾರಣವಾಗಿವೆ. ವಿದ್ವಾಂಸರಿಗೆ ಆರ್ಥಿಕ ಅನುಕೂಲತೆಗಳನ್ನು ಮಾಡಿಕೊಡಬೇಕು. ಆಧುನಿಕ ಕಾಲದಲ್ಲಿ ನಮ್ಮ ಸಂಸ್ಕøತಿಯ ಪ್ರಚಾರಕ್ಕೆ ಅನೇಕ ಅನುಕೂಲತೆಗಳಿವೆ. ಇಂಟರ್‍ನೆಟ್, ಟೆಲಿವಿಷನ್ ಮುಂತಾದವುಗಳ ಉಪಯೋಗದಿಂದ ಸಂಸ್ಕøತ ಹಾಗೂ ಸಂಸ್ಕøತಿಯನ್ನು ಉಳಿಸುವ ಕಾರ್ಯವನ್ನು ಮಾಡಬೇಕು’ ಎಂದು ತಿಳಿಸಿದರು.

‘ಶಾಸ್ತ್ರಗಳ ಸಂರಕ್ಷಣೆಯು ಹಿಂದಿಗಿಂತಲೂ ಪ್ರಸ್ತುತ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಶಾಸ್ತ್ರಗಳ ಸಂರಕ್ಷಣೆಗಾಗಿ ಈಗಿನ ವಿದ್ಯಾರ್ಥಿಗಳು ಹೆಚ್ಚು ಒತ್ತನ್ನು ನೀಡಬೇಕಿದೆ. ಆ ಮೂಲಕ ವಿವಿಧ ಶಾಸ್ತ್ರಗಳ ಸಮಗ್ರ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹೊಸ ಹೊಸ ಸಂಶೋಧನೆಗಳನ್ನು ಹೊರತರಬೇಕಿದೆ’ ಎಂದು ಪ್ರೊ. ರಾಮಚಂದ್ರ ಭಟ್ ಕೋಟೆಮನೆ ಅವರು ತಮ್ಮ ಸಮಾರೋಪ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಂ. ಕೊಟ್ರೇಶ್, ಕೋರ್ಸ್‍ನ ನಿರ್ದೇಶಕರಾದ ಪ್ರೊ. ವಿ. ಗಿರೀಶ್‍ಚಂದ್ರ, ಪ್ರೊ. ವೀರನಾರಾಯಣ ಎನ್.ಕೆ. ಪಾಂಡುರಂಗಿ, ಸಂಯೋಜಕರಾದ ಡಾ. ಭಾಸ್ಕರ ಭಟ್ಟ ಜೋಶಿ, ಡಾ. ಮೂರ್ತಿ ವಿ.ಎಚ್., ಡಾ. ಶ್ರುತಿ ಎಚ್.ಕೆ. ಮತ್ತು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Tags

Post a Comment

0Comments

Post a Comment (0)