Bengaluru : ಜಿಗಣಿಯಲ್ಲಿರುವ ಮುಳಬಾಗಿಲು ಶ್ರೀಪಾದರಾಜ ಮಠದ ಶಾಖೆಯ ಶ್ರೀ ರಾಯರ ಮಠದಲ್ಲಿ ಮದ್ವ ನವಮಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಇಂ ದಿನ ಕಾರ್ಯಕ್ರಮಗಳಲ್ಲಿ ಪಂಚಾಮೃತ ಅಭಿಷೇಕ ಅಲಂಕಾರ ಆರತಿ ಪವಮಾನ ಹೋಮ ಭಜನೆ ರಥೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಂತೆ ಬಹಳ ಅದ್ದೂರಿಯಾಗಿ ಶ್ರೀ ಮಧ್ವನವಮಿಯನ್ನು ವಿಶೇಷವಾಗಿ ಆಚರಿಸಲಾಯಿತು,
ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ತೀರ್ಥ ಪ್ರಸಾದ ಸೇವಿಸಿ ಶ್ರೀ ಮಧ್ವಚಾರ್ಯರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು,ಶ್ರೀಮಠದ ವ್ಯವಸ್ಥಾಪಕ ವಾದಿರಾಜ್ ಮುಖ್ಯಸ್ಥರಾದ ಹುಲಿಮಂಗಲ ನಾಗರಾಜರಾವ್, ಶ್ಯಾಮ್, ಡಾ, ಕಿರಣ್ ಎಸ್ ಮೂರ್ತಿ ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಜಂಟಿ ಕಾರ್ಯದರ್ಶಿ ಮಹೇಶ ಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

