ಮನೆಪಾಠ ಮಾಡುವವರಿಗೆ ಸಹಜವಾಗಿ ಇರಬೇಕಾದ ಹತ್ತು ಅತ್ಯುತ್ತಮ ಗುಣಗಳು

varthajala
0

1=ಅತ್ಯತ್ತಮವಾದ ಕೇಳುಗ; ಪ್ರತಿಯೊಬ್ಬ ಬೋಧಕರು ಒಳ್ಳೆಯ ಕೇಳುಗರಾಗಿರಬೇಕು. ಈ ವಿಷಯಕ್ಕ ಬಂದಾಗ ಬಹುಮುಖ್ಯವಾಗುತ್ತದೆ ಏಕೆಂದರೆ ಎದುರುಬದುರಾಗಿ ಸಂವಹನ ಮಾಡುವಾಗ ಇದು ಅತಿ ಅವಶ್ಯಕ. ಮನೆಪಾಠದವರು ಬರೀ ಉತ್ತಮ ಕೇಳುಗರು ಆಗಿರುವುದು ಮಾತ್ರವಲ್ಲದೆ,ಅತ್ಯತ್ತಮ ಕೇಳುಗರು ಆಗಿರುವಂತೆ ನಿರೀಕ್ಷಿಸುತ್ತಾರೆ, ಆಗ ವಿದ್ಯಾರ್ಥಿಯ ಮಾತನ್ನು ತುಂಬಾ ಹುಷಾರಾಗಿ ಕೇಳಿಸಿಕೊಂಡು. ಅವರು ಏನು ಹೇಳುತ್ತಿದ್ದಾರೆ, ಮತು ್ತಅವರ ಕಷ್ಟವನ್ನು ತಿಳಿದುಕೊಂಡು ವಿಷಯವನ್ನು ಸುಲಭವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ಅವರಿಗೆ ತಿಳಿಸಬೇಕು. ಮನೆಪಾಠದವರು ಶಾಲೆಯ ತರಗತಿಯಲ್ಲಿರುವ ಅಧ್ಯಾಪಕರಿಗಿಂತ ಭಿನ್ನವಾಗಿರುತ್ತಾರೆ. ತರಗತಿಯಲ್ಲಿರುವ ಅಧ್ಯಾಪಕರು ವರ್ಷಗಳಿಂದ ಒಂದೇ ಕಲಿಕಾ ವಿಧಾನವನ್ನು ಮುಂದುವರಿಸುತ್ತಿರುತ್ತಾರೆ, ಆದರೆ ಮನೆಪಾಠದವರು ಏನು ಕೇಳುತ್ತಾರೆ/ಹೇಳುತ್ತಾರೆ ಮತ್ತು ಅವರ ಕಲಿಕಾ ಶೈಲಿಯನ್ನು, ವಿದ್ಯಾರ್ಥಿಯ ಶಕ್ತಿ ಮತ್ತು ಗ್ರಹಣಶಕ್ತಿಗೆ ಬದಲಿಸಿಕೊಳ್ಳುತ್ತಾ ಹೋಗುತ್ತಾರೆ.


2=ಪರಿಕಲ್ಪನೆಯಲ್ಲಿ ಶ್ರೀಮಂತಿಕೆ; ಮನೆಪಾಠದ ಬೋಧನೆಯಲ್ಲಿ ವಿಷಯದಲ್ಲಿ ಹೆಚ್ಚಿನ ಜ್ಞಾನ ಇರಬೇಕು.


3=ಕಲಿಕೆಯತ್ತ ಪ್ಯಾಷನ್(ಒಲವು): ಮನೆಪಾಠದವರು ಕಲಿಕೆಯ ಬಗ್ಗೆ ಪ್ಯಾಷನೇಟ(ಒಲವುಳ್ಳವರು) ಆಗಿರಬೇಕು ಮತ್ತು ಮಕ್ಕಳ ಜೊತೆ ಕೆಲಸ ಮಾಡಲು ಆಸಕ್ತಿಯಿರಬೇಕು. ಅವರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಭಾವ ಬೀರಬೇಕು ಮತ್ತು ಅವರ ಕನಸುಗಳನ್ನು ಅರ್ಥ ಮಾಡಿಸಲು ಸಹಾಯ ಮಾಡಬೇಕು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಲು ಪ್ಯಾಷನೇಟ್ ಬೋಧಕರು ತಮ್ಮಲ್ಲಾ ಶಕ್ತಿ ಮತ್ತು ಸ್ಫೂರ್ತಿಯನ್ನು ಧಾರೆಯೆರೆಯುತ್ತಾರೆ.


4=ವಿದ್ಯಾರ್ಥಿಗಳ ಜೊತೆ ಉತ್ತಮ  ಬಾಂಧವ್ಯವನ್ನು ಹೊಂದಿರಬೇಕು; ಮನೆಪಾಠದವರು ವಿದ್ಯಾರ್ಥಿಯ ಜೊತೆ ಉತ್ತಮ 

ಬಾಂಧವ್ಯವನ್ನು ಹೊಂದಿರಬೇಕು. ಒಬ್ಬ ಮನೆಪಾಠದವರು ವಿದ್ಯಾರ್ಥಿಯ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು ಒಬ್ಬ

ಮನೆಪಾಠದವರು ತನ್ನ ವಿದ್ಯಾರ್ಥಿಯೊಂದಿಗೆ ನಂಬಿಕೆ ಹಾಗೂ ಒಳ್ಳೆ ಬಾಂಧವ್ಯ ಹೊಂದಿರಬೇಕು. ಏಕೆಂದರೆ ಯಾರೇ ಒಬ್ಬ ವಿದ್ಯಾರ್ಥಿ   2 ಗಂಟೆಗಿಂತಲೂ ಹೆಚ್ಚಿನ ಅವಧಿ ಒಬ್ಬನೇ ಶಿಕ್ಷಕನ ಬಳಿ ಕುಳಿತು ಓದಲು ಇಚ್ಚಿಸುವುದಿಲ್ಲ. ಇದೊಂದು ರೀತಿಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಇಬ್ಬರಿಗೂ ಒತ್ತಡ ಅಥವಾ ಏಕತಾನತೆಯ ಅನುಭವ ನೀಡುತ್ತದೆ, ಹಾಗಾಗಿ ಮನೆಪಾಠದ ಶಿಕ್ಷಕ ಸಾಕಷ್ಟು ಪರಿಪಕ್ಪವಾದ ಮÀನಸ್ಸು ಹಾಗೂ ಯೋಚನೆಯನ್ನು ಹೊಂದಿರಬೇಕು, ವಿದ್ಯಾರ್ಥಿಗೆ ಪಾಠ ಶುರು ಮಾಡುವ ಮುಂಚೆ ಅನುಕೂಲಕರ ವಾತಾವರಣ ನಿರ್ಮಿಸಬೇಕು ಹಾಗೂ ವಿದ್ಯಾರ್ಥಿಯನ್ನು ಉತ್ತೇಜಿಸಬೇಕು.


5=ತಾಳ್ಮೆ ಹಾಗೂ ಶಾಂತಿಯ ನಿರ್ವಹಣೆ; ತಾಳ್ಮೆ ಶಾಂತರೀತಿಯ ಕಾರ್ಯನಿರ್ವಹಣೆ ಒಬ್ಬ ಮನೆಪಾಠದ ಶಿಕ್ಷಕನಿಗೆ ಅಧಿಕವಾಗಿ ಇರಬೇಕಾದಂತಹ ಗುಣ. ತಾಳ್ಮೆಯಿಲ್ಲದ ಶಿಕ್ಷಕ ಹೆಚ್ಚು ದಿನ ಈ ವೃತ್ತಿಯಲ್ಲಿ ಮುಂದುವರಿಯಲಾರ. ಹಾಗೆ ಶಿಕ್ಷಕ ಒಂದೇ ಪಠ್ಯವನ್ನು ಬೇರೆ ಬೇರೆ ಸುಲಭದ ಕ್ರಮಗಳಲ್ಲಿ  ಹೇಳಿಕೊಡುವುದನ್ನು ಒಟ್ಟಾರೆ ವಿದ್ಯಾರ್ಥಿಯು ಸುಲಭವಾಗಿ ಹಾಗೂ ಬಹಳ ಕಾಲ ನೆನಪಿನಲ್ಲಿಡುವಂತೆ, ಗ್ರಹಿಸುವಂತೆ ಕಲಿಸಬೇಕು, ಇದಕ್ಕೆ ತಾಳ್ಮೆ ಹಾಗೂ ಶಾಂತ ಮನೋಭಾವ ಅವಶ್ಯಕ.6=ವೃತ್ತಿಪರತೆ; ಒಬ್ಬ ಒಳ್ಳೆಯ ಮನೆಪಾಠದ ಶಿಕ್ಷಕ ವೃತ್ತಿವರನಾಗಿರಬೇಕು. ಅಂದರೆ ತನ್ನ ವೃತ್ತಿಗೆ ಅನುಗುಣವಾಗಿ ವೇಷಭೊಷಣ, ಶಿಸ್ತು,          ಸಮಯಪರಿಪಾಲನೆ ಹಾಗೂ ಅಂಗಿಕಅಭಿನಯ ಇವುಗಳನ್ನು ಪಾಲಿಸಬೇಕು. ಅವನು ತನ್ನ ವೃತ್ತಿಗೆ ಪೂರಕವಾದ ಹಾಗೂ ಸಹಾಯಕವೆನಿಸುವ ಎಲ್ಲ ಪ್ರಯೋಗಗಳನ್ನು ಮಾಡಬೇಕು.


7=ಸಂವಹನ ಕೌಶಲ್ಯ; ಸಂವಹನ ಕ್ರಿಯಯು ಶಿಕ್ಷಕ ವೃತ್ತಿಗೆ ಬೇರಿದ್ದಂತೆ. ಆದ್ದರಿಂದ ಶಿಕ್ಷಕ ತಾನು ಹೇಳಿಕೊಡಬೇಕೆಂದಿರುವ ವಿಷಯವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಯಪಡಿಸುವಲ್ಲಿ ಸಿದ್ದಹಸ್ತನಿರಬೇಕು. ವಿದ್ಯಾರ್ಥಿಗಳು ಪಠ್ಯದ ಹೊರತಾದ ಪ್ರಶ್ನೆಗಳನ್ನು ಕೇಳಿದಾಗ ಅದನ್ನು ಉತ್ತರಿಸುವಲ್ಲಿ ಸಿದ್ದನಿರಬೇಕು. ಒಟ್ಟಿನಲ್ಲಿ ಪಾಠಪ್ರವಚನದ ವಿವರಣೆಗೆ ಸಂವಹನಕೌಶಲ್ಯ ಶಿಕ್ಷಕನಿಗೆ ಇರಬೇಕು.


8=ಗುರಿ ಹಾಗೂ ಉದ್ದೇಶ: ಒಬ್ಬ ಉತ್ತಮ ಮನೆಪಾಠದ ಶಿಕ್ಷಕನು ಒಳ್ಳೆಯ ಗುರಿ ಹಾಗೂ ಉದ್ದೇಶವನ್ನು ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳ ಮನಸ್ಸಲ್ಲಿ  ತುಂಬುತ್ತಾನೆ. ಶಿಕ್ಷಣದ ಗುರಿ, ಉದ್ದೇಶ, ಅವಕಾಶಗಳು, ಭವಿಷ್ಯ ಇವುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿವರಿಸುತ್ತಾನೆ ಹಾಗೂ ಅವರನ್ನು ಕುತೂಹಲಿಗಳಾಗಿರುವಂತೆ ನಡೆಸಿಕೊಳ್ಳುತ್ತಾನೆ. 


9=ಪರಿಪಕ್ವತೆ; ಪರಿಪಕ್ವತೆ ಹಾಗೂ ಶಿಕ್ಷಣ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬ ಉತ್ತಮ ಶಿಕ್ಷಕ ಪಾಠ ಮಾಡುವುದರ ಜೊತೆಗೆ ಆಪ್ತ ಸಮಾಲೋಚನೆ ಮಾಡುವಂತಿರಬೇಕು ಹಾಗೂ ಅವನು ವಿದ್ಯಾರ್ಥಿಗಳ ಭಾವನಾತ್ಮಕ ಸಂಬಂಧಗಳಿಗೆ ಸರಿಯಾಗಿ ಪ್ರತಿಕ್ರಿಯಿಸುವಂತಿರಬೇಕು. ಯಾವುದೇ ರೀತಿಯ ಏರಿಳಿತ ವಿದ್ಯಾರ್ಥಿಗಳಲ್ಲಿ ಕಂಡುಬಂದರೂ, ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳಿಗೆ ಭದ್ರ ಬುನಾದಿಯನ್ನು ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಹಾಕಿಕೊಡಬೇಕು.


10=ದೂರದರ್ಶನತ್ವ; ಪಠ್ಯಕ್ರಮದ ಬಗ್ಗೆ ಒಳ್ಳೆಯ ಲೆಸನ್ ಪ್ಲಾನ್ ಬರೆದು ಅದಕ್ಕೆ ಅಂಟಿಕೊಂಡಿರುವಂಥದ್ದು ಹಾಗೂ ವಿದ್ಯಾರ್ಥಿಗಳು ಕಲಿಯುವ ಗ್ರಹಣಶಕ್ತಿ ಹಾಗೂ ವೇಗಕ್ಕೆ ಅನುಗಣವಾಗಿ ಪಠ್ಯಕ್ರಮಕ್ಕೆ ಸಿದ್ದನಾಗಿದ್ದು ಪೂರ್ವನಿಯೋಜಿತನಾಗಿರುವುದಕ್ಕೆ ಲೆಸನ್‍ಪ್ಲಾನ್ ತುಂಬಾ ಸಹಾಯವಾಗುತ್ತದೆ ಪುನರಾವರ್ತನೆಗಳೂ ಕೂಡ ಇದಕ್ಕೆ ಸಹಕಾರಿ.Tags

Post a Comment

0Comments

Post a Comment (0)