ವಿದ್ಯಾರ್ಥಿಗಳಿಗೆ ಸೂಚನೆಗಳು #

varthajala
0

 2020-21 ನೇ ಸಾಲಿನ ಎಸ್.ಎಸ್. ಎಲ್. ಸಿ.ಪರೀಕ್ಷೆಗೆ ಹಾಜರಾಗುವ  ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು.


 # ವಿದ್ಯಾರ್ಥಿಗಳಿಗೆ ಸೂಚನೆಗಳು # 

* ಬೆಳಿಗ್ಗೆ 8.30 ಕ್ಕೆ ಶಾಲೆಗೆ  ಹಾಜರಿರುವುದು.

* ಪರೀಕ್ಷಾ ಕೇಂದ್ರ ಕ್ಕೆ ಸಮವಸ್ತ್ರದೊಂದಿಗೆ ಬರುವುದು.

* ಮಾಸ್ಕ್ ಧರಿಸುವುದು ಕಡ್ಡಾಯ.

* ಸಾಮಾಜಿಕ ಅಂತರ ಕಾಪಾಡುವುದು.

* ಪ್ರತಿಯೊಬ್ಬರು ಸ್ಯಾನಿಟೈಸರ್ ಗೆ ಒಳಗಾಗುವುದು.

* Thermal scan ಮಾಡಿಸಿಕೊಳ್ಳುವುದು.

* HALL TICKET ನೊಂದಿಗೆ ಪರೀಕ್ಷಾ ಕೊಠಡಿಗೆ ಬರುವುದು.

* ರೋಗಲಕ್ಷಣಗಳಿದ್ದರೆ ಮುಂಚಿತವಾಗಿ ತಿಳಿಸುವುದು. ಅಂತಹ ಲಕ್ಷಣಗಳಿದ್ದವರಿಗೆ ಪ್ರತ್ಯೇಕ ರೂಮಿನಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಇರುತ್ತದೆ.

* ಪ್ರತೀ ವಿದ್ಯಾರ್ಥಿಯೂ ತನ್ನದೇ ನೀಲಿ/ಕಪ್ಪು ಬಾಲ್ ಪಾಯಿಂಟ್ ಪೆನ್ ತರುವುದು.

* ಯಾವುದೇ ಕಾರಣಕ್ಕೆ ಬೇರೆಯವರ ವಸ್ತುವನ್ನು ಉಪಯೋಗಿಸಬಾರದು.

* ಮನೆಯಿಂದ ಲಘು ಉಪಹಾರ ತರುವುದು.

* ಮನೆಯಿಂದಲೇ ಬಿಸಿ ನೀರನ್ನು ತರುವುದು.

*ಪ್ರತೀ ವಿದ್ಯಾರ್ಥಿಯೂ ತಮ್ಮ ತಮ್ಮ ಸ್ಥಳದಲ್ಲಿ ಕುಳಿತು ಕೊಂಡಾಗ OMR SHEET ಬಳಸಲು ಇಟ್ಟುಕೊಳ್ಳುವ ಬೆಂಚ್ ನ ತೇವಾಂಶವನ್ನು ಒರೆಸಿಕೊಳ್ಳಲು ಕರ್ಚೀಫ್ ನಂತಹ ಬಟ್ಟೆ ತುಂಡನ್ನು ಸ್ವತಃ ತರುವುದು. (ಈಗಾಗಲೇ ಬೆಂಚ್ ಗಳನ್ನು ಸ್ವಚ್ಛಗೊಳಿಸಿದ್ದರೂ ಮಳೆಗಾಲವಾಗಿರುವುದರಿಂದ ಬೆಂಚ್ ನ ಮೇಲೆ ದಿನವೂ ತೇವಾಂಶ ಉಂಟಾಗುತ್ತಿದೆ)


* *ಬೆಲ್ ವ್ಯವಸ್ಥೆ :* 

 #ಪ್ರಥಮ ಬೆಲ್ ಬೆಳಿಗ್ಗೆ 10.15~ ಪರೀಕ್ಷಾರ್ಥಿಗಳು ಕೊಠಡಿಗೆ.

# ಎರಡನೇ ಬೆಲ್  10.25~ ಗೌಪ್ಯ ಪ್ರಶ್ನೆ ಪ್ರತಿಕೆ ಲಕೋಟೆ ಪರೀಕ್ಷಾ ಕೊಠಡಿಗೆ.

# ಮೂರನೇ ಬೆಲ್  10.30~ ಪ್ರಶ್ನೆ ಪತ್ರಿಕೆ ವಿತರಣೆ.

# ನಾಲ್ಕನೇ ಬೆಲ್  11.30~ ಪರೀಕ್ಷಾ ಅವಧಿ ಒಂದು ಗಂಟೆ ಮುಕ್ತಾಯ.

# ಐದನೇ ಬೆಲ್ 12.30~ ಪರೀಕ್ಷಾ ಅವಧಿ ಎರಡು ಗಂಟೆ ಮುಕ್ತಾಯ.

# 6ನೇ ಬೆಲ್  1.25 ~ ವಿದ್ಯಾರ್ಥಿಗಳು OMR  ಪರಿಶೀಲನೆ.

# ಏಳನೇ ಬೆಲ್ 1.30~OMR ನ್ನು ಅಭ್ಯರ್ಥಿಗಳಿಂದ ವಾಪಸು ಪಡೆಯುವುದು.

* ಪರೀಕ್ಷಾ ದಿನಾಂಕ :

1) 19/07/2021 -> ಕೋರ್ ವಿಷಯ: ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪ್ರತ್ಯೇಕ ಪ್ರಶ್ನೆಪತ್ರಿಕೆ

ಪ್ರತಿಯೊಬ್ಬ ವಿದ್ಯಾರ್ಥಿ ಮೂರು ಪ್ರಶ್ನೆಪತ್ರಿಕೆಗೆ 3 ಪ್ರತ್ಯೇಕ OMR ಪಡೆಯಬೇಕು.

2) 22/07/2021-> ಭಾಷಾ ವಿಷಯ : ಕನ್ನಡ, ಇಂಗ್ಲಿಷ್, ಸಂಸ್ಕ್ರತ ಭಾಷೆಗಳ ಪ್ರತ್ಯೇಕ ಪ್ರಶ್ನೆಪತ್ರಿಕೆ

ಪ್ರತಿಯೊಬ್ಬ ವಿದ್ಯಾರ್ಥಿ ಮೂರು ಪ್ರಶ್ನೆಪತ್ರಿಕೆಗೆ 3 ಪ್ರತ್ಯೇಕ OMR ಪಡೆಯಬೇಕು.

* ವಿದ್ಯಾರ್ಥಿಗಳಿಗೆ ಉತ್ತರಿಸಲು ವಿಷಯವಾರು ಪ್ರತ್ಯೇಕ ಬಣ್ಣದ OMR ನೀಡಲಾಗುವುದು.

 ವಿಷಯ                               OMR ಬಣ್ಣ

 ಗಣಿತ/ ಕನ್ನಡ                       Pink

 ವಿಜ್ಞಾನ /ಇಂಗ್ಲಿಷ್                Orange

 ಸಮಾಜ ವಿಜ್ಞಾನ/ಸಂಸ್ಕ್ರತ    Green

* ಪರೀಕ್ಷಾ ಸಮಯ ಬೆಳಿಗ್ಗೆ10.30 ರಿಂದ ಮಧ್ಯಾಹ್ನ 1.30. ಒಟ್ಟು ಅವಧಿ 3 ಗಂಟೆ 

* OMR SHEET  ನಿಮ್ಮದೇ ಹೌದೆಂದು ಖಾತ್ರಿಪಡಿಸಿಕೊಂಡು ಅದರಲ್ಲಿನ ನಿಮ್ಮ ಮಾಹಿತಿಗಳು ಸರಿಯಾಗಿವೆಯೇ ? ಎಂದು ಪರೀಕ್ಷಿಸಿಕೊಳ್ಳಬೇಕು.

ವ್ಯತ್ಯಾಸವಿದ್ದಲ್ಲಿ ತಕ್ಷಣ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತರಬೇಕು.

* OMR ನಲ್ಲಿ ಉತ್ತರಿಸಲು ನೀಲಿ/ ಕಪ್ಪು ಬಾಲ್ ಪಾಯಿಂಟ್ ಪೆನ್ ಬಳಸಬೇಕು.

*OMR ನಲ್ಲಿ ಯಾವುದೇ ಕಾರಣಕ್ಕೂ  ವೈಟ್ನರ್ ಬಳಸಬಾರದು/ OMR SHEET ನ್ನು ಮಡಚುವುದು/ಗೀಚುವುದು/ಚಿತ್ತು ಮಾಡುವುದು/ಹರಿಯುವುದು ಮಾಡಕೂಡದು. ಅಂತಹಾ OMR SHEET ಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.

* ಪ್ರತಿ ಪ್ರಶ್ನೆಗೆ 4 ಆಯ್ದ  ಉತ್ತರಗಳನ್ನು ನೀಡಲಾಗಿದ್ದು ಸರಿಯಾದ ಒಂದು ಉತ್ತರಕ್ಕೆ ಮಾತ್ರ ಶೇಡ್ ಮಾಡಬೇಕಾಗುತ್ತದೆ.

* ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಆಯ್ಕೆಯ ಉತ್ತರವನ್ನು ಶೇಡ್ ಮಾಡಿ ಪರೀಕ್ಷಾ ಸಮಯದೊಳಗೆ ಶೀಟ್ ನ ಕೊನೆಯಲ್ಲಿ ನಿಮ್ಮ ಸಹಿ ಮಾಡಿ ಜಾಗ್ರತೆಯಿಂದ ಕೊಠಡಿ ಮೇಲ್ವಿಚಾರಕರಿಗೆ ನೀಡುವುದು.


# ಎಲ್ಲಾ ವಿದ್ಯಾರ್ಥಿಗಳಿಗೆ 

ಶುಭವಾಗಲಿ #

Post a Comment

0Comments

Post a Comment (0)