ಆನ್ಲೈನ್ ಉಪನ್ಯಾಸ ಸರಣಿ

varthajala
0
ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅಂತಾರಾಷ್ಟ್ರೀಯ ಹಣ್ಣು ಮತ್ತು ತರಕಾರಿ ವರ್ಷಾಚರಣೆಯ ಪ್ರಯುಕ್ತ ಆನ್ಲೈನ್ ಉಪನ್ಯಾಸ ಸರಣಿಯನ್ನು ಜುಲೈ ನಿಂದ ಅಕ್ಟೋಬರ್ ರವರೆಗೆ ಪ್ರತಿ ತಿಂಗಳ 20 ರಂದು ಭಾರತ ಸರ್ಕಾರದ ವಿಗ್ಯಾನ್ ಪ್ರಸಾರ್, ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

 ಈ ಹಿನ್ನೆಲೆಯಲ್ಲಿ 2021ರ ಜುಲೈ ನಿಂದ ಅಕ್ಟೋಬರ್ ರವರೆಗೆ ಪ್ರತಿ ತಿಂಗಳ 20 ರಂದು ಒಂದೊಂದು ಉಪನ್ಯಾಸವನ್ನು ಒಬ್ಬೊಬ್ಬ ತೋಟಗಾರಿಕಾ ಸಂಪನ್ಮೂಲ ತಜ್ಞರಿಂದ ಏರ್ಪಡಿಸುತ್ತಿದ್ದು, ಒಟ್ಟು ನಾಲ್ಕು ಉಪನ್ಯಾಸಗಳನ್ನು ವಿವಿಧ ತೋಟಗಾರಿಕಾ ವಿಷಯಗಳ ಮೇಲೆ ಆಯೋಜಿಸಲಾಗುವುದು.

ಈ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಲು ಆಸಕ್ತರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಅಕಾಡೆಮಿ ಜಾಲತಾಣ:  https//kstacademy.in  ನಲ್ಲಿ ಪಡೆಯಬಹುದಾಗಿದೆ.

ಆನಂತರ  ನವೆಂಬರ್ 15 ರಿಂದ 17, 2021ರವರೆಗೆ ಮೂರು ದಿನಗಳ ಕಾಲ ಸಮ್ಮೇಳನವನ್ನು “ಆರೋಗ್ಯ ಮತ್ತು ಪೋಷಣೆಗಾಗಿ ಹಣ್ಣು ಮತ್ತು ತರಕಾರಿಗಳು” ಎಂಬ ವಿಷಯದ ಮೇಲೆ ಆಯೋಜಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Tags

Post a Comment

0Comments

Post a Comment (0)