ಭ್ರಷ್ಟ ಪಿ.ಡಿ.ಓ ಮತ್ತು ಭ್ರಷ್ಟಅಧಿಕಾರಿಗಳ ವಿರುದ್ಧ : ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಉಪವಾಸ ಸತ್ಯಾಗ್ರಹ.

varthajala
0

ಮಧುಗಿರಿ: ತಾಲೂಕಿನ  ಕೊಡಿಗೇನಹಳ್ಳಿ ಗ್ರಾಮ  ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರದ     ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ಸಲ್ಲಿಸಲಾಗಿದ್ದು, ದೂರು ದಾಖಲಿಸಿಕೊಂಡು  ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ   ಬೇಸತ್ತು

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ  (ರೀ)ತುಮಕೂರು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ವತಿಯಿಂದ ತಾಲೂಕು ಪಂಚಾಯತಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು,

ಪಂಚಾಯತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ವಿರುದ್ಧ ಈ ದಿನ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ರಮೇಶ್ ರವರು ಮಾತನಾಡಿ, ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ನಮ್ಮಗಳಿಗೆ ದಾಖಲಾತಿಗಳನ್ನು ನೀಡಿದರೆ ಮಾತ್ರ ನಾವು ಇಲ್ಲಿಂದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುತ್ತೇವೆ ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಾವು ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ,

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಯಪ್ಪ ನವರು ಮಾತನಾಡಿ ಕೊಡಿಗೇನಹಳ್ಳಿ  ಗ್ರಾಮ ಪಂಚಾಯಿತಿ ಯಲ್ಲಿ ನಡೆದಿರುವ    ಕೋಟ್ಯಾಂತರ ರೂಗಳ ಭ್ರಷ್ಟಾಚಾರವನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರು  ಸಹ ಹಾಗೂ ಪಂಚಾಯತ್ ರಾಜ್ ಇಲಾಖೆಯ  ಆಯುಕ್ತರಿಗೆ ಸಹ ದೂರು ಸಲ್ಲಿಸಿದರೂ ಸಹ ಪ್ರಯೋಜನವಾಗದೆ ಇರುವುದರಿಂದ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ ನಾವುಗಳು ಈ ದಿನ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ  ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ,ಸ್ಥಳಕ್ಕೆ ಮಾನ್ಯ ಸಿ. ಇ.  ಓ  ಅವರು ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ದಲ್ಲಿ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ತಿಳಿಸಿದರು,

ಈ ಸಂದರ್ಭದಲ್ಲಿ ಸಿ.ಇ.ಓ ಅವರ ಆದೇಶದಂತೆ  ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಯೋಜನಾ ಅಧಿಕಾರಿಗಳಾದ ಕೆ ನರಸಿಮೂರ್ತಿ ರವರು ನಿಮ್ಮ ಮನವಿಗೆ ಈಗಾಗಲೇ ಕಾರ್ಯನಿರ್ವಹಣ ಅಧಿಕಾರಿಗಳು ಭ್ರಷ್ಟ ಪಿ.ಡಿ.ಓ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟವರಿಗೆ ಆದೇಶ  ಮಾಡಿದ್ದಾರೆ ಮತ್ತು ನಾನು ಈ ಕೂಡಲೇ ಜಿಲ್ಲಾ ಪಂಚಾಯತಿಗೆ  ಸಹ ಈ ವರದಿಯನ್ನು ತಿಳಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ  ಕೈಗೊಳ್ಳುವಂತೆ   ನಿರ್ದೇಶಿಸುತ್ತೇನೆ ಎಂದು ತಿಳಿಸಿದರು,

ತುಮಕೂರು ಜಿಲ್ಲಾ ಘಟಕದ ಅಧ್ಯಾಕ್ಷರಾದ ಕುಣಿಹಳ್ಳಿ ಆರ್ ಮಂಜುನಾಥ್ ರವರು ಮತ್ತು ರಾಜ್ಯ ಉಪಾಧ್ಯಕ್ಷರು ಬಿ‌.ಶಿವಶಂಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಚಂದ್ರಶೇಖರ್.ಡಿ, ದಾರವಾಡ ಜಿಲ್ಲಾಧ್ಯಾಕ್ಷರು ವಿ.ಎಸ್.ಕುಲಕಣಿ೯,ಬೆಳಗಾವಿ ಶ್ರೀನೀವಾಸ್ ಗೌಡ ಪಾಟೀಲ್,ನೇರಳೇಕೆರೆ ಈಶ್ವರ ಪ್ರಸಾದ್, ಪುರವಾರದ ರಾಮಚಂದ್ರ, ಪ್ರಸನ್ನಕುಮಾರ್, ಬಾಲ್ಯದ ಭೀಮಣ್ಣ, ಹಾಗೂ ವೇದಿಕೆಯಲ್ಲಿ   ರಾಜ್ಯದ ವಿವಿದ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು‌.


Tags

Post a Comment

0Comments

Post a Comment (0)