ವಿವಿಧ ಕೌಶಲ್ಯಗಳ ಯುವ ಸಬಲೀಕರಣ : ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದ ಉಪವಿಭಾಗಧಿಕಾರಿ

varthajala
0

 ಮಧುಗಿರಿ: ಉಪ ವಿಭಾಗ ಅಧಿಕಾರಿ ಕಚೇರಿಯಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದಿಂದ MSYEP ( ವಿವಿಧ ಕೌಶಲ್ಯಗಳ ಯುವ ಸಬಲೀಕರಣ ಕಾರ್ಯಕ್ರಮ)

ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವ ವಿಕಾಸನ ಜೀವನ ಕೌಶಲ್ಯ ಹಾಗೂ ವೃತ್ತಿ ಪರ ತರಬೇತಿಗಳನ್ನು ಮುಗಿಸಿರುವ ವಿದ್ಯಾರ್ಥಿಗಳಿಗೆ ಉಪವಿಭಾಗಧಿಕಾರಿ ಗಳಾದ ಸೋಮಪ್ಪ ಕಡಕೋಳ ಪ್ರಮಾಣಪತ್ರಗಳನ್ನು ವಿತರಿಸಿದರು


 ಯುಕ್ತ  ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲೀಷ್ ಕಲಿತು ಮುಗಿಸಿ ರುವಂತಹ ವಿದ್ಯಾರ್ಥಿಗಳಿಗೆ ಮಧುಗಿರಿ ಉಪವಿಭಾಗ ಅಧಿಕಾರಿ ಸೋಮಪ್ಪ ಕಡಕೋಳ ಪ್ರಮಾಣಪತ್ರ ವಿತರಿಸಿದರು ಈ ಸಂದರ್ಭದಲ್ಲಿ ಮಾತನಾಡಿ ನಾನು ಇದೇ ತರ ಒಂದು ಚಿಕ್ಕ ಬಡ ಕುಟುಂಬದಿಂದ ಬಂದವನು ನನಗೆ ವಿದ್ಯಾರ್ಥಿಯ ಕಷ್ಟ ಏನಂತ ಗೊತ್ತು ಅದಕ್ಕೆ ಹೇಳುತ್ತೇನೆ ನೀವು ಇದೇ ತರ ಕಷ್ಟ ಬೀಳದಂತೆ ನಿಮ್ಮ ತಂದೆ ತಾಯಿಯ ಆಸೆಯಂತೆ ಚೆನ್ನಾಗಿ ಕಲಿಕೆಯನ್ನು ಕಲಿತು ನನ್ನಂತಹ ಇನ್ನೂ ಒಳ್ಳೆಯ ಅಧಿಕಾರಿಯಾಗಿ ಬರಬೇಕು ನಾವು ಹುಟ್ಟಿದ ಊರಿಗೂ ತಂದೆ-ತಾಯಿಗೂ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು ಹಾಗೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರದಿಂದMSYEP ( ವಿವಿಧ ಕೌಶಲ್ಯಗಳ ಯುವ ಸಬಲೀಕರಣ ಕಾರ್ಯಕ್ರಮ)

ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವ ವಿಕಾಸನ ಜೀವನ ಕೌಶಲ್ಯ ಹಾಗೂ ವೃತ್ತಿ ಪರ ತರಬೇತಿಗಳನ್ನು ಉತ್ತಮವಾಗಿ ಕೊಡುತ್ತಿದ್ದಾರೆ ಹಾಗೂ ಇಂದು ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಮುಗಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣ ಕಾರ್ಯಕ್ರಮವನ್ನು ಆಯೋಜಿಸಿರುವ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ  ನಿರ್ದೇಶಕರಾದ ದಿಲೀಪ್ ಕುಮಾರ್ ರವರು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಈ ಕೆಲಸ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂತಹ ಕಲಿಕೆಯನ್ನು ಕಲಿಸುವುದರ ಮೂಲಕ ಉನ್ನತ ಅಧಿಕಾರಕ್ಕೆ ಬರಲೆಂದು ಶ್ರಮಿಸುತ್ತಿರುವ ನಿಮ್ಮ ಎಲ್ಲರಿಗೂ   ಧನ್ಯವಾದಗಳು ತಿಳಿಸಿದರು

 ಈ ಸಂದರ್ಭದಲ್ಲಿ ಮಾತನಾಡಿದ ದಿಲೀಪ್ ಕುಮಾರ್ ನಾವು ಮೊದಲಿಗೆ ಕೋಟೆ ಪ್ರೇಮರಿ ಸ್ಕೂಲ್ನಲ್ಲಿ ಒಂದು ಚಿಕ್ಕ ಕೊಠಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭ ಮಾಡಿ ತದನಂತರ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ವಿದ್ಯಾರ್ಥಿಗಳಿಗೆ  MSYEP ( ವಿವಿಧ ಕೌಶಲ್ಯಗಳ ಯುವ ಸಬಲೀಕರಣ ಕಾರ್ಯಕ್ರಮ)

ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವ ವಿಕಾಸನ ಜೀವನ ಕೌಶಲ್ಯ ಹಾಗೂ ವೃತ್ತಿ ಪರ ತರಬೇತಿಗಳನ್ನು ಆನ್ಲೈನ್ ಕ್ಲಾಸ್ ಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗಿದೆ

ಈ ಸಂದರ್ಭದಲ್ಲಿ ರಮಾಮಣಿ ಜಿಲ್ಲಾ ಮುಖ್ಯ  ಶಿಕ್ಷಕರ ಆಯೋಜಕರು ದೀಪಿಕಾ ವೆಂಕಟೇಶ್. ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರು ತನುಜ.ಉಪವಿಭಾಗ ಕಾರ್ಯಕ್ರಮ ಆಯೋಜಕರು  ಧನಂಜ್ಯೋತಿ, ವಿದ್ಯಾರ್ಥಿಗಳ ಆಯೋಜಕರು. ಮಂಜುನಾಥ್  ಮಾಧ್ಯಮದ ವಿಶ್ಲೇಷಕರು ಅನ್ನಪೂರ್ಣಮ್ಮ ಸೃಷ್ಟಿ ಸಂಸ್ಥೆಯ ಕಾರ್ಯದರ್ಶಿಗಳು ಮತ್ತಿತರರಿದ್ದರು.

Post a Comment

0Comments

Post a Comment (0)