ರಾಣಿಚೆನ್ನಮ್ಮ ಬ್ರೀಟೀಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆ

varthajala
0

ಬಳ್ಳಾರಿ.ಅ.29: ಕನ್ನಡಿಗರ ಸ್ವಾಭಿಮಾನ ಸ್ವಾತಂತ್ರö್ಯ ಹೋರಾಟದ ಸಾಕಾರ ಮೂರ್ತಿ ಕಿತ್ತೂರು ರಾಣಿ ಚೆನ್ನಮ್ಮ, ತನ್ನ ಚಿಕ್ಕ ರಾಜ್ಯದ ರಕ್ಷಣೆಗೆ ಬ್ರೀಟೀಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಧೈರ್ಯ ಸಾಹಸಗಳು ಇಂದಿನ ತಲೆ ಮಾರಿಗೆ ಪ್ರೇರಣೆಯಾಗಬೇಕು ಎಂದು ಶರಣ ಸಾಹಿತ್ಯ  ಪರಿಷತ್ ಅಧ್ಯಕ್ಷ ಕೆ ಬಿ ಸಿದ್ಧಲಿಂಗಪ್ಪ ಹೇಳಿದರು. 

ಅವರು ನಗರದ ಕಪ್ಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಥಮ ಸ್ವಾತಂತ್ರö್ಯ ಸಂಗ್ರಾಮ ಪರಿಚಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಸ್ವಾಭಿಮಾನದ ಪ್ರತೀಕವಾದ ರಾಣಿ ಚೆನ್ನಮ್ಮ ಎಳೆ ವಯಸ್ಸಿನಲ್ಲಿ ಕುದುರೆ ಸವಾರಿ, ಬಿಲ್ಲು ಮತ್ತು ಕತ್ತಿ ವಿದ್ಯೆಗಳನ್ನು ಕರಗತ ಮಾಡಿಕೊಂಡು ತನ್ನ ರಾಜನಿಷ್ಠ ಭಂಟರಾದ ಗುರುಸಿದ್ಧಪ್ಪ, ಹಿಮ್ಮತ್‌ಸಿಂಗ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಇತರೆ ಬೆಂಬಲಿಗರ ನೆರವಿನಿಂದ ದತ್ತು ಪುತ್ರನಿಗೆ ಪಟ್ಟಕಟ್ಟಿ ಕಿತ್ತೂರು ಸಂಸ್ಥಾನದ ಉಳಿವಿಗೆ ಕಂಕಣ ಕಟ್ಟಿ ಬ್ರೀಟೀಷರ ವಿರುದ್ಧ ಹೊರಾಡಿದ ಭಾರತದ ಪ್ರಪ್ರಥಮ ಸ್ವಾತಂತ್ರö್ಯ ಹೋರಾಟಗಾರ್ತಿಯಾಗಿದ್ದಾಳೆ. ಚೆನ್ನಮ್ಮನ ಕೆಚ್ಚೆದೆಯ ಹೋರಾಟದಿಂದ ಕಿತ್ತೂರು ಇತಿಹಾಸÀದಲ್ಲಿ ಪ್ರಖ್ಯಾತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ಧರಾಮ ಕಲ್ಮಠ ಮಾತನಾಡಿ, ರಾಣಿಚೆನ್ನಮ್ಮ ಬ್ರೀಟೀಷರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆ, ತನ್ನ ರಾಜ್ಯದ ಜನತೆಯ ರಕ್ಷಣೆಗಾಗಿ, ಸ್ವಾತಂತ್ರö್ಯಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಚೆನ್ನಮ್ಮನ ಆದರ್ಶಗಳು ನಿರಂತರವಾಗಿ ನಮಗೆ ಸ್ಪೂರ್ತಿ ಯಾಗಬೇಕೆಂದರು. ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕುಮುದಿನಿ ಮತ್ತು ಕಟ್ಟೆಮ್ಮ  ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೆರುದ್ರಪ್ಪ ಉಪಸ್ಥಿತರಿದ್ದರು. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸ್ವಾತಂತ್ರö್ಯ ಹೋರಾಟದ ಕಿರು ನಾಟಕವನ್ನು ಮತ್ತು ಲಾವಣಿ ಪದವನ್ನು ಪ್ರಸ್ತುತಪಡಿಸಿದರು. ರಾಣಿಚೆನ್ನಮ್ಮ ಜೀವನದ ಕುರಿತು ಭಾಷಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

Tags

Post a Comment

0Comments

Post a Comment (0)