ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

varthajala
0

ಬೆಂಗಳೂರು, ನವೆಂಬರ್ 24 (ಕರ್ನಾಟಕ ವಾರ್ತೆ): ಕರ್ನಾಟಕ ನಾಟಕ ಅಕಾಡೆಮಿಯು 2020ನೇ ಸಾಲಿನಲ್ಲಿ ಪ್ರಕಟವಾಗಿರುವ ರಂಗಭೂಮಿಗೆ ಸಂಬಂಧಿಸಿದ ಕೃತಿಗಳಿಗೆ ಪುಸ್ತಕ ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

       
ಕೃತಿಗಳು ಜನವರಿ 2020ರಿಂದ ಡಿಸೆಂಬರ್ 2020ರೊಳಗೆ ಮುದ್ರಣವಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು.  ಕೃತಿಗಳು ಸಂಶೋಧನಾ ಪ್ರಬಂಧವಾಗಿರಬಾರದು.  ಪುಸ್ತಕಗಳು ಯಾವುದೇ ಪದವಿ ಪಿಹೆಚ್‍ಡಿ ಮತ್ತು ಪಠ್ಯಪುಸ್ತಕಕ್ಕೆ ಸಿದ್ಧಪಡಿಸಿದ ವಿಷಯವಾಗಿರಬಾರದು.  ಕಳುಹಿಸಲ್ಪಡುವ ಕೃತಿ ನಾಟಕವಾಗಿರಬಾರದು, ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು. ಬಹುಮಾನವನ್ನು ಲೇಖಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು.

ಆಸಕ್ತ ಲೇಖಕರು ತಮ್ಮ ಹೆಸರು, ವಿಳಾಸ, ಕೃತಿಗಳ ಪ್ರಕಟಣೆ ವರ್ಷ, ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಡಿಸೆಂಬರ್ 15, 2021 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08022237484 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Tags

Post a Comment

0Comments

Post a Comment (0)