14 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಬೆಳಗಾವಿಯಲ್ಲಿ ನಡೆಯಲಿ.

varthajala
0

ಕರ್ನಾಟಕ ಸರಕಾರದ ಚಲನಚಿತ್ರ ಅಕಾಡೆಮಿಯಿಂದ ಇದುವರೆಗೂ ನಡೆಸಿರುವ 12 ಅಂತರರಾಷ್ಟ್ರೀಯ . ಚ.ಚಿತ್ರೋತ್ಸವ ಬೆಂಗಳೂರಿನಲ್ಲೇ ನಡೆದಿದ್ದು.  ಹಾಲಿವುಡ್ಡ್, ಬಾಲಿವುಡ್ ಸ್ಯಾಂಡಲ್ ವುಡ್ ಹಾಗೂ ಭಾರತೀಯ ಚಿತ್ರರಂಗದ ನಟ, ನಿರ್ದೇಶಕ ದಿಗ್ಗಜರು ಬೆಂಗಳೂರಿಗೆ ಆಗಮಿಸಿ ಹತ್ತು ದಿನಗಳ ಕಾಲ ಬೆಂಗಳೂರಿಗೆ ರಂಗು ತರುತ್ತಾರೆ. ಪ್ರಪಂಚದ ಅನೇಕ ಅತ್ಯುತ್ತಮ ಚಿತ್ರಗಳನ್ನ ನೋಡುವ ಭಾಗ್ಯ ದೊರೆಯುತ್ತದೆ. ಚಲನಚಿತ್ರ ಕ್ಷೆತ್ರದ ಅನೇಕ ಚಟುವಟಿಕೆಗಳು ತುಂಬಿರುತ್ತವೆ. ಈ ಎಲ್ಲದರಲ್ಲೂ ಭಾಗವಹಿಸುವ ರಸದೌತಣ 

 ಸವಿಯುವ ಭಾಗ್ಯ ಕರ್ನಾಟಕದ ಎರಡನೇ ರಾಜಧಾನಿಯಾಗಿರುವ ಬೆಳಗಾವಿ ನಗರದ ಚಿತ್ರ ರಸಿಕರಿಗೆ ಏಕಿಲ್ಲ.  ಈ ಅವಕಾಶ ಬೆಳಗಾವಿಯಂತಹ ನಗರಕ್ಕೂ ಸಿಗಬೇಕು. ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಎಲ್ಲಾ ಸೌಲಭ್ಯಗಳು ಬೆಳಗಾವಿಯಲ್ಲಿವೆ. ಆಡಳಿತ ಕರ್ನಾಟಕ ಸರ್ಕಾರವೇ ಬೆಳಗಾವಿಗೆ ಬಂದು ಅಧಿವೇಶನ ಆಡಳಿತ ಮಾಡುತ್ತಿದೆ.  ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡದಿದೆ, ಪ್ರತಿಷ್ಠಿತ 3 ವಿಶ್ವಾವಿದ್ಯಾಲಯಗಳು ಬೆಳಗಾವಿಯಲ್ಲಿವೆ, ಕುಂದಾನಗರಿ ಉತ್ತಮ ತಂಪಾದ ಹವಾಗುಣ ಹೊಂದಿ ಎಲ್ಲರನ್ನು ಆಕರ್ಷಸುತ್ತಿದೆ. ಚಿತ್ರ ಪ್ರದರ್ಶನಕ್ಕೆ ಸುಸಜ್ಜಿತವಾಗಿರುವ ಕೆ ಎಲ್ ಐಇ ಸಂಸ್ಥೆಯ ಮೂರು ಥೀಯೇಟರ್, ಇನೊಕ್ಸ್  ಮೂರು, ಕಪಿಲ್ ನ್ಯೂಕ್ಲಿಯಸ್ ಮಾಲ್ನಲ್ಲಿ ಎರಡು, ಚಿಂತಾಮಣಿರಾವ್ ಸ್ಕೂಲಿನ 5 ಕೋಟಿ ವೆಚ್ಚದಲ್ಲಿ ನಿರ್ಮಾನವಾಗಿರುವ ಒಂದು ಥಿಯೇಟರ್ ಹಾಲ್ ಗಳಿವೆ ಹಾಗೂ ಒಂದೇ ಸ್ಥಳದಲ್ಲಿರುವ ಸ್ವರೋಪ್, ನರ್ತಕಿ ಚಿತ್ರ ಮಂದಿರಗಳಿವೆ ಒಟ್ಟು 12 ಸುಸಜ್ಜಿತ ಚಿತ್ರಮಂದಿರದಲ್ಲಿ ಉತ್ತಮ ಮಟ್ಟದಲ್ಲಿ ಚಿತ್ರಪ್ರದರ್ಶನ ಮಾಡಬಹುದು.
ಮುಖ್ಯವಾಗಿ ಮೂರು ರಾಜ್ಯಗಳ ಗಡಿಹೊಂದಿದ್ದು ರಾಷ್ಟ್ರೀಯ ಹೆದ್ದಾರಿ, ಭಾರತದ ಪ್ರತಿಷ್ಠಿತ ನಾಗರಗಳಿಗೆ ವಿಮಾನಯಾನ, ರೈಲ್ವೆ  ಹಾಗೂ ರೈಲ್ವೆ ಸಂಪರ್ಕವನ್ನ ಹೊಂದಿದೆ,  ಕಿತ್ತೂರು ಕರ್ನಾಟಕದ ಅದರಲ್ಲೊ ಬೆಳಗಾವಿಯ ಜನ ಎಲ್ಲದಕ್ಕೂ ಸ್ಪಂದಿಸುವ ಸಹಕಾರಿಗಳು. ಪಕ್ಷತೀತವಾಗಿ ಸ್ಪಂದಿಸಿ ಎಲ್ಲವನ್ನು ಯಶಸ್ವೀಗೊಳಿಸುವ ಉತ್ಸಾಹಿ ರಾಜಕಾರಣಿಗಳು,

ಮುಖ್ಯವಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಕಿತ್ತೂರು ಕರ್ನಾಟಕದವರೇ ಆಗಿದ್ದು ಇವರು ಮನಸ್ಸು ಮಾಡಿದರೆ ಉತ್ತರ ಕರ್ನಾಟಕ ಮತ್ತೊಂದು ಹೊಸ ಹೆಜ್ಜೆ ಇಡುವುದು ಬಹು ಸುಲಭ.
ಈ ಕುರಿತು ಸರಕಾರವನ್ನೇ ಬದಲಾಯಿಸುವ ಶಕ್ತಿ  ಹೊಂದಿರುವ ಉತ್ತರ ಕರ್ನಾಟಕದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಇಂದಿನಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರವನ್ನ ಗಮನಸೆಳೆಯಬೇಕು, ಈ ಭಾಗದ ಎಲ್ಲಾ  ರಾಜಕೀಯ ಮುಖಂಡರು ಸರ್ಕಾರದ ಮೇಲೆ ಒತ್ತಡ ತರಬೇಕು. ಬೆಳಗಾವಿಯಲ್ಲಿ ಮುಂದಿನ 2022 ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಂತಾರಾರಾಷ್ಟ್ರೀಯ ಚಾಲನಚಿತ್ರೋತ್ಸವ ನೆಡೆಸುವುದನ್ನ ಘೋಸಿಸಬೇಕೆಂದು ಒತ್ತಾಸುತ್ತೇನೆ.

ಎನ್ ನಟರಾಜ್ ಹಂಜಾಗಿಮಠ, ಚಲನಚಿತ್ರ ನಟ
ಅಜೀವ ಸದಸ್ಯ -ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ.
ಸದಸ್ಯ - ಕರ್ನಾಟಕ ಚಲನಚಿತ್ರ ಅಕಾಡೆಮಿ ಗಡಿಭಾಗಗಳ ಚಲನಚಿತ್ರ ಮೇಳ ಸಮಿತಿ
ಮಾಜಿ ಮಾಧ್ಯಮ ಕಾರ್ಯದರ್ಶಿ - ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್.
ಆತ್ಮೀಯ ಮಾಧ್ಯಮ ಮಿತ್ರರಲ್ಲಿ ವಿನಂತಿ

Post a Comment

0Comments

Post a Comment (0)