ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ನೀಡುವ ಬಗ್ಗೆ

varthajala
0

 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕø ಮಾರ್ಗಸೂಚಿಗಳು ಮೇ 2014 ರಿಂದ ಸರಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಯೋಇ 77 ಯೋವಿವಿ 2013, ದಿನಾಂಕ: 17-05-2014 ರಿಂದ ಜಾರಿಗೆ ಬಂದಿದ್ದು ಅದರ ಅನುಬಂಧ-3 ಕಂಡಿಕೆ (1)ರಲ್ಲಿ 

ಪ್ರಾಥಮಿಕ  ಮಾಧ್ಯಮಿಕಪ್ರೌಢ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ವಿವರಣೆ ನೀಡಲಾಗಿದೆ.

ಅದರಂತೆ “ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳು ಉಪಶೀರ್ಷಿಕೆಯಡಿ ಕೈಗೊಳ್ಳಬಹುದಾದಂತಹ ಕಾಮಗಾರಿಗಳ ವಿಸ್ತø ಪಟ್ಟಿಯನ್ನು ಕೊಡಲಾಗಿದೆಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳುಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳುಸರ್ಕಾರಿ ಇಂಜನೀಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಔದ್ಯೋಗಿಕ ಸಂಸ್ಥೆಗಳಿಗೆ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ವಿವರಣೆ ಕೊಡಲಾಗಿದೆ.

2014ಕ್ಕಿಂತ ಮೊದಲು ರಾಜ್ಯದ ಶಿಕ್ಷಣ ವ್ಯವಸ್ಥೆಗೆ ತನ್ನದೇ ಆದ ಕೊಡುಗೆಯನ್ನು ನೀಡುವದರಲ್ಲಿ ಅಪಾರ ಬಂಡವಾಳ ಹೂಡಿ ಶಿಕ್ಷಣ ಪ್ರಸಾರ ಮಾಡುತ್ತಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಒದಗಿಸಲು ಅವಕಾಶವಿತ್ತುಈಗ  ಅವಕಾಶವನ್ನು ಹಿಂಪಡೆದಿದ್ದರಿಂದ ಹಲವಾರು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತೀವ್ರವಾದ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವುದನ್ನು ನಾನು ಸ್ವತಃ ಮನಗಂಡಿದ್ದೇನೆಕನ್ನಡ ಭಾಷೆಯ ಕಲಿಕೆಗೆ ಸಂಪೂರ್ಣವಾಗಿ ಸರಕಾರದೊಂದಿಗೆ ಕೈಜೋಡಿಸಿ ವಿದ್ಯಾದಾನ ಮಾಡುತ್ತಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಒದಗಿಸಲು ಮೇ 2014 ಮಾರ್ಗಸೂಚಿಗಳಿಗೆ ಬದಲಾವಣೆ ತರುವದು ತುರ್ತು ಅಗತ್ಯವಾಗಿದೆ ಎಂಬುದು ನನ್ನ ಭಾವನೆಕೂಡಲೇ ತಿದ್ದುಪಡಿ ಆದೇಶ ಹೊರಡಿಸಲು ಕೋರುತ್ತೇನೆ.ಎಂದು ಬಸವರಾಜ್ ಹೊರಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


Tags

Post a Comment

0Comments

Post a Comment (0)