ವಿದ್ಯಾಸಾಗರ್ ಶಾಲಾ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ

varthajala
0


ನಗರದ ಚಂದ್ರಲೇಔಟ್ ನಲ್ಲಿರುವ ವಿದ್ಯಾಸಾಗರ್ ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಸೇವೆ ಸಲ್ಲಿಸುತ್ತಾ ಬಂದಿದೆ. ಈ ಭಾಗದಲ್ಲಿ ಪ್ರಾಥಮಿಕ ತರಗತಿಯಿಂದ ಹೈಸ್ಕೂಲ್ ವರಗೆ ಬಡ-ಮಧ್ಯಮ ವರ್ಗದ ಕುಟುಂಬದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ವಿದ್ಯಾಸಾಗರ್ ಶಾಲೆಯು ಜಾತಿ, ಧರ್ಮ ಮತ್ತು ವರ್ಗ ಎಂಬ ಭೇದಭಾವಿಲ್ಲದೇ ಸರ್ವರಿಗೂ ಶಿಕ್ಷಣ ಸಿಗಬೇಕೆಂಬುದು ಆಶಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಪಠ್ಯಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಶಿಕ್ಷಣದಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ಶಿಕ್ಷಣ ಸಿಗಬೇಕೆಂಬುದು ವಿದ್ಯಾಸಾಗರ್ ಶಾಲೆಯ ಉದ್ದೇಶ.

ಅದರೆ, ದುರಾದೃಷ್ಟವಶಾತ್ ದಿನಾಂಕ: 12/02/2022 ರಂದು  ಶಿಕ್ಷಕಿಯಾದ ಶಶಿಕಲಾ ಮತ್ತು ವಿದ್ಯಾರ್ಥಿಗಳ ನಡುವೆ  ವಿದ್ಯಾಭ್ಯಾಸದ ಬಗ್ಗೆ ಮಾತುಕತೆಯಾಗಿದೆ, ನಂತರ ಶಿಕ್ಷಕಿಯ ವರ್ತನೆ ಬಗ್ಗೆ  ವಿದ್ಯಾರ್ಥಿಗಳ ಅಸಮಾಧಾನ ಹೊಂದಿ ,ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಪೋಷಕರ , ಮಧ್ಯೆ ತಪ್ಪುಗ್ರಹಿಕೆಯಿಂದ ವಿವಾದವಾಗಿ ರೂಪಗೊಂಡಿದೆ.
ಹಾಗೂ ಅನಗತ್ಯವಾಗಿ ವಿಚಾರಗಳು ಬೇರೆ,ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡಿದೆ.  ಯಾವುದೇ ರೀತಿಯಲ್ಲಿ ಹಿಜಬ್ ಮತ್ತು ಧಾರ್ಮಿಕ ವಿಚಾರಗಳ ಬಗ್ಗೆ ಮಾತುಕತೆಯಾಗಿಲ್ಲ ,ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ಸಣ್ಣ ವಿಚಾರವನ್ನ ಗೊಂದಲಗೀಡು ಮಾಡಿ ಸಮಾಜದ ಸಾಮರಸ್ಯ ಹಾಳು ಮಾಡಲು ಪ್ರಯತ್ನ ಪಟ್ಟಿದ್ದಾರೆ .ಶಾಲಾ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸುತ್ತದೆ.
ಈ ಸಂಬಂಧ *ವಿಚಾರಣೆಗಾಗಿ ಶಿಕ್ಷಕಿ ಶಶಿಕಲಾ ಹಾಗೂ ವಿದ್ಯಾರ್ಥಿಗಳ ನಡುವೆ ಸಮಾಲೋಚಿಸಿ  .*  ತನಿಖೆ ನಂತರ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ನಿದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.

         *ಡಾ||ಎಸ್.ರಾಜು*
         ಕಾರ್ಯದರ್ಶಿ
      ವಿದ್ಯಾಸಾಗರ್ ಶಾಲೆ
*ಮೊಬೈಲ್:9900047747*

Post a Comment

0Comments

Post a Comment (0)