MAHA SHIVARATHRI - ವಿಶ್ವ ಪರಿವರ್ತನೆಗೆ ಆಧಾರಸ್ತಂಭ ಶಿವರಾತ್ರಿ

varthajala
0

ಪರಿವರ್ತನೆ ಪ್ರಕೃತಿಯ ಸ್ವಾಭಾವಿಕ ನಿಯಮವಾದರೂ ಮಾನವ ಪರಿವರ್ತನೆಗೋಸ್ಕರ ತನ್ನ ಪ್ರಯತ್ನವನ್ನು ಮಾಡುತ್ತಿದ್ದಾನೆ. ನಾವು ಇಂದು ಕರೋನ, ಡೆಲ್ಟಾಪ್ಲಸ್, ಕರೋನ 3ನೇ ಅಲೆ, ಓಮಿಕ್ರಾನ್, ದಂತಹ ಜಾಗಿತಿಕ ಮಟ್ಟದ ಕಾಯಲೆಗಳಿಂದ ಭಯದ ಪರಿಸ್ಢತಿಯ ಮೂಲಕ ಸಾಗುತ್ತಿದ್ತೇವೆ. ಪ್ರತಿಯೊಬ್ಬರ ಅಂತರಾತ್ಮವು ಬೇಗನೆ ಪರಿವರ್ತನೆ ಆಗಲಿ ಎಂದು ಬಯಸುತ್ತಿದೆ. ಏಕಂದರೆ ಇಂದು ಧರ್ಮಸತ್ತೆ ಹಾಗೂ ರಾಜ್ಯಸತ್ತೆ ಎರಡು ಶಕ್ತಿಯನ್ನೂ ಕಳೆದುಕೊಂಡಿದೆ. ಮಾನವರು ದು:ಖವನ್ನು ಸುಖದಲ್ಲಿ, ಅಶಾಂತಿಯನ್ನು ಶಾಂತಿಯಲ್ಲಿ, ತಿರಸ್ಕಾರವನ್ನು ಪ್ರೇಮದಲ್ಲಿ, ಅಜ್ಞಾನವನ್ನು ಜ್ಞಾನದಲ್ಲಿ, ಪರಿವರ್ತನೆ ಮಾಡಿ ಒಬ್ಬ ಪರಮಪಿತ ಪರಮಾತ್ಮನ ಅವತರಣೆಯ ನೆನಪಿಗಾಗಿ ಪ್ರತಿ ವರ್ಷ ಶಿವರಾತ್ರಿಯನ್ನು ಆಚರಿಸುತ್ತಾರೆ.

ಶಿವರಾತ್ರಿಯ ಹಿನ್ನೆಲೆಯಲ್ಲಿ ಅಡಗಿರುವ ಅಧ್ಯಾತ್ಮಿಕ ರಹಸ್ಯವನ್ನು ನಾವು ಸಂಪೂರ್ಣ ರೀತಿಯಲ್ಲಿ ತಿಳಿದುಕೊಂಡರೆ ವಿಶ್ವ ಪರಿವರ್ತನೆಯ ಕಾರ್ಯ ಸರಳವಾಗುತ್ತದೆ. ಏಕಂದರೆ ಶಿವರಾತ್ರಿಯು ಶೈವ ಸಂಪ್ರದಾಯದ ಭಕ್ತರ ಹಬ್ಬ ಮಾತ್ರವಲ್ಲದೆ ಇಡಿ ಜಗತ್ತಿನ ಪ್ರಮುಖ ಧರ್ಮ, ಪ್ರಾಚೀನ ಸಭ್ಯತೆ ಹಾಗೂ ಸಂಸ್ಕೃತಿಯನ್ನು ನೋಡಿದಾಗ ಇದು ವಿಶ್ವದ ಸರ್ವ ಆತ್ಮರ ಪಾವನ ಪರ್ವವಾಗಿದೆಯೆಂದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಮಹಾಭಾರತದ ಆರಂಭದಲ್ಲಿ ಈ ಸೃಷ್ಟಿಯು ತಮೊಗುಣ ಹಾಗೂ ಅಂಧಕಾರದಿ0ದ ಕೂಡಿದ್ದು ತದನಂತರ ಒಂದು ಅಂಡಾಕಾರ ಜ್ಯೋತಿಯು ಪ್ರಕಟನಾಯಿತು ಮತ್ತು ಆ ಜ್ಯೋರ್ತಿಲಿಂಗದಿ0ದ ಹೊಸ ಯುಗದ ಸ್ಢಾಪನೆ ಆಯಿತು. ಆ ಜ್ಯೋತಿಯ ಕೆಲ ಶಬ್ದಗಳಿಂದ ಅಲೌಕಿಕ ರೀತಿಯಲ್ಲಿ ಪ್ರಜಾಪಿತ ಬ್ರಹ್ಮಾರವರ ಜನ್ಮವಾಯಿತು ಎಂದು ಬರೆಯಲಾಗಿದೆ. ಮನುಸ್ಮೃತಿಯಲ್ಲಿ "ಸೃಷ್ಟಿಯ ಆರಂಭದಲ್ಲಿ ಒಂದು ಅಂಡಾಕಾರ ಪ್ರಕಟವಾಯಿತು ಮತ್ತು ಅದು ಸಾವಿರ ಸೂರ್ಯ ಸಮಾನ ತೇಜೋಮಯ ಹಾಗೂ ಪ್ರಕಾಶಮಯವಾಗಿತ್ತು" ಎಂದು ಬರೆಯಲ್ಲಟ್ಟಿದೆ. ಇದೆ ರೀತಿ ಶಿವಪುರಾಣದ ಧರ್ಮಸಂಹಿತೆಯಲ್ಲಿಯೂ ಬರೆಯಲಾಗಿದೆ ಏನಂದರೆ "ಕಲಿಯುಗದ ಅಂತಿಮ ಸಮಯದಲ್ಲಿ ಒಂದು ಅದ್ಭುತ ಜ್ಯೋರ್ತಿಲಿಂಗವು ಪ್ರಕಟವಾಯಿತು, ಅದು ಕಾಲಾಗ್ನಿಸಮಾನ ಜ್ವಾಲಾಮಯವಾಗಿತ್ತು. ಅದು ಬೆಳೆಯುತ್ತಿರಲಿಲ್ಲ. ಅದು ಸುಂದರವಾಗಿತ್ತು. ಅದರಿಂದಲೆ ಸೃಷ್ಟಿಯ ಪ್ರಾರಂಭವಾಯಿತು."

ಹಾಗೆ ನೋಡಿದರೆ ಭಾರತದ ಧರ್ಮ ಗ್ರಂಥದಲ್ಲಿ ಮಾತ್ರವಲ್ಲದೆ ಯಹೂದಿ, ಇಸಾಯಿ ಹಾಗೂ ಮುಸಲ್ಮಾನರ ಹಳೆಯ ಧರ್ಮಗ್ರಂಥನಾದ `ತೊರೆತ್' ದಲ್ಲಿಯೂಸಹ ಸೃಷ್ಟಿಯ ರಚನೆಯ ಬಗ್ಗೆ ಬರೆದಿದೆ `ಏನಂದರೆ ಸೃಷ್ಟಿಯ ಆರಂಭದಲ್ಲಿ ಈಶ್ವರನ ಆತ್ಮವು ನೀರಿನ ಮೇಲೆ ತೇಲಾಡುತ್ತಿತ್ತು. ಆದಿ ಕಾಲದಲ್ಲಿ ಪರಮಾತ್ಮನು ಆದಮ ಮತ್ತು ಹವ್ವಾ ಅವರ ರಚನೆ ಮಾಡಿ ಸ್ವರ್ಗವನ್ನು ಸ್ಥಾಪನೆ ಮಾಡಿದನು'. ಭಗವಂತನ ಹೆಸರು `ಜಹೊವಾ' ಎಂದು ಹೇಳುತ್ತಾರೆ. ಅದು ಶಿವನ ಪರ್ಯಾಯವಾಚಕ ಶಬ್ದವಾಗಿದೆ. ಭಾರತದ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯಲ್ಲಿ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜೈನಲ್ಲಿ ಮಹಾಕಾಳೆಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೆಶ್ವರ ಮುಂತಾದವು ಕೇವಲ ಬಾರತದಲ್ಲಿ ಮಾತ್ರವಲ್ಲದೆ ಹೊರರಾಷ್ಟçಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ಸೇಪಾಳದಲ್ಲಿ ಪಶುಪತಿನಾಥ, ಬೆಬಿಲೋನನಲ್ಲಿ ಶಿವನಿಗೆ `ಶಿವೂನ' ಎಂದು ಹೇಳಲಾಗುತ್ತದೆ. ಮಿಶ್ರದಲ್ಲಿ `ಸೇವಾ' ನಾಮದಿಂದ ಪೂಜೆಯು ನಡೆಯುತ್ತದೆ. ರೊಮದಲ್ಲಿ `ಪ್ರಿಯಪ್ಸ್' ಎಂದು ಹೇಳಲಾಗುತ್ತದೆ. ಇಟಲಿಯ ಚರ್ಚಗಳಲ್ಲಿ ಇಂದಿಗೂ ಶಿವನ ಪ್ರತಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ `ಹೂವೆಡ್ ಹಿಪೂಹ' ಎಂದು ಕರೆಯಲಾಗುತ್ತದೆ. ಯುನಾನದಲ್ಲಿ `ಫಲ್ಲೂಸ', ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ `ಶಿವೂ' ಎಂದು ಹೇಳುತ್ತಾರೆ. ಕಾಬಾದಲ್ಲಿ ಶಿವನ ಪ್ರತಿಮೆ ಇತ್ತು ಆದರಿಂದಲೆ ಸಂಶೋಧಕರು `ಕಾಬಾ'ನುಸಹ ಶಿವಾಲಯ ಇತ್ತು ಎಂದು ನಂಬುತ್ತಾರೆ. ಇದರಿಂದಲೆ ಶಿವಪರಮಾತ್ಮನು ವಿಶ್ವ ಪರಿವರ್ತ್ನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂದು ಸ್ಪಷ್ಟವಾಗುತ್ತದೆ.


`ಶಿವ' ಶಬ್ದವು ಪರಮಾತ್ಮನು ಕಲ್ಯಾಣಕಾರಿ ಎಂಬುದನ್ನು ಸೂಚಿಸುತ್ತದೆ. 10-12 ಘಂಟೆಗಳ ರಾತ್ರಿಯಲ್ಲಿ ವಿಶ್ವಪರಿವರ್ತನೆಯು ಸಾಧ್ಯವಾಗುವದಿಲ್ಲ. ಇಲ್ಲಿ ರಾತ್ರಿ ಶಬ್ದವು ಅe್ಞ0ನ, ತಮೋಗುಣ, ಆಲಸ್ಯ, ಎಂಬ ಅಂಧಕಾರದ ಪ್ರತೀಕವಾಗಿದೆ. `ಮಹಾರಾತ್ರಿ' ಎಂದರೆ ಸೃಷ್ಟಿಯಲ್ಲಿ ಕರ್ಮಭ್ರಷ್ಟತೆ, ಧರ್ಮಭ್ರಷ್ಟತೆ, ಮತ್ತು ವಿಕಾರಗಳ ಪ್ರಧಾನತೇಯ ಪ್ರತಿಕವಾಗಿದೆ. ಇದಕ್ಕೆ ಕಲಿಯುಗದ ಅಂತಿಮ ಸಮಯ ಎಂದು ಕರೆಯಲಾಗುತ್ತದೆ. ಇಂತಹ ಸಮಯದಲ್ಲಿ ಪರಮಪಿತ ಶಿವ ಪರಮಾತ್ಮನ ಅವತರಣೆ ಆಗಿ ಅವರು ವಿಶ್ವಕಲ್ಯಾಣದ ಕರ್ತವ್ಯವನ್ನು ಮಾಡುತ್ತಾರೆ. ಈ ಕಾರಣಕ್ಕೆ `ಶಿವರಾತ್ರಿ' ಎಂದು ಹೇಳುತ್ತಾರೆ.

ಶಿವರಾತ್ರಿಯ ಸಮಯದಲ್ಲಿ ಎಲ್ಲರಿಗೂ ಶಿವನ ಸತ್ಯ ಪರಿಚಯವನ್ನು ನೀಡಿದರೆ ಸರ್ವ ಸಂಪ್ರದಾಯರವರನ್ನು ಒಂದೇ ಸೂತ್ರದಲ್ಲಿ ಕಟ್ಟಬಹುದು. ಏಕಂದರೆ ಪರಮಪಿತ ಶಿವನ ಸ್ಮೃತಿ ಸ್ವರೂಪನಾದ ಶಿವಲಿಂಗವು ಸರ್ವತ್ರ ಸರ್ವ ಧರ್ಮಗಳಿಂದ ಮಾನ್ಯತೆಯನ್ನು ಪಡೆದಿದೆ. ಮಕ್ಕಾದಲ್ಲಿ ಇರುವ `ಸಂಗ ಎ ಅಸ್ವದ' ನಿಗೆ ಮುಸಲ್ಮಾನರು ಪ್ರೀತಿ ಹಾಗೂ ಗೌರವ ತೋರಿಸುತ್ತಾರೆ. ಏಕಂದರೆ ಅದು ಭಗವಂತ ಕಳಿಸಿರುವದು ಎಂದು ನಂಬುತ್ತಾರೆ. ಅವರಿಗೆ ಭಾರತೀಯರು ಮಾನ್ಯತೆಕೊಡುವ `ಖುದಾ' ಅಥವಾ `ಭಗವಾನ' ಶಿವನೆ ಎಂದು ತಿಳಿದರೆ, ಎರಡು ಧರ್ಮಗಳಲ್ಲಿ ಭಾವನಾತ್ಮಕ ಐಕ್ಯತೆ ಕಾಣಬಹುದು. ಅದೇ ರೀತಿ `ಓಲ್ಡ ಟೆಸ್ಟಾಮೆಂಟ' ನಲ್ಲಿ ಮುಸಾ ಅವರು ಮಾಡಿರುವ ಜಹೋವಾನ ವರ್ಣನೆಯ ಜ್ಯೋತಿರ್ಬಿಂದುವೇ ಪರಮಾತ್ಮ ಆಗಿದ್ದಾನೆ ಎಂದು ತಿಳಿದುಕೊಂಡರೆ ಎಲ್ಲಾ ರಾಷ್ಡçಗಳಲ್ಲಿ ಭ್ರಾತೃತ್ವದ ಭಾವನೆ ಬೆಳೆದು ಅಂತರಾಷ್ಟಿçÃಯ ಮಟ್ಟದಲ್ಲಿ ಏಕತೆಯನ್ನು ಕಾಣಬಹುದು. 

ಭಾರತೀಯರಲ್ಲಿ ಶಿವಲಿಂಗವು ಪರಮಪಿತ ಶಿವನ ಕುರುಹಾಗಿದೆ ಎಂದು ತಿಳಿದರೆ ವೈಷ್ಣವ ಹಾಗೂ ಶೈವರಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಬಹುದು. ರಾಮೇಶ್ವರದಲ್ಲಿ ಇರುವ ರಾಮನಿಗೆ ಈಶ್ವರ ಶಿವ, ಬೃಂದಾವನದಲ್ಲಿ ಇರುವ ಗೋಪೇಶ್ವರ ಕೃಷ್ಣನಿಗೂ ಈಶ್ವರ, ಶಿವ ಹಾಗೂ ಎಲಿಫೆಂಟಾದಲ್ಲಿ ಇರುವ ತ್ರಿಮೂರ್ತಿ ಶಿವನ ಮೂರ್ತಿಗಳಿಂದ ಸರ್ವ ಧರ್ಮಗಳ ಸೂತ್ರವನ್ನು ಬೋಧಿಸುವನು ಪರಮಪಿತ ಶಿವನೇ ಆಗಿದ್ದಾನೆ ಎಂದು ಸ್ಪಷ್ಟವಾಗುತ್ತದೆ. 

ಶಿವರಾತ್ರಿಯಲ್ಲಿ ಉಪವಾಸದ ಅರ್ಥ `ಉಪ' ಎಂದರೆ `ಸಮೀಪ' ವಾಸ ಎಂದರೆ `ಇರುವುದು'. ವಾಸ್ತವಿಕವಾಗಿ ಬುದ್ದಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಥೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಒಂದು ರಾತ್ರಿ ನಿದ್ರೆಕೆಟ್ಟು ಜಾಗರಣೆ ಮಾಡಿದರೆ ಸಾಲದು. ಈ ಅಜ್ಞಾನದ  ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಎಚ್ಚರವಾಗಿದ್ದು ಮಾಯೆಯ ರೂಪವಾದ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.

ಹೀಗೆ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದುಕೊಂಡು ನಿಜವಾದ ರೀತಿಯಲ್ಲಿ ಜಾಗರಣೆ ಹಾಗೂ ಉಪವಾಸ ಮಾಡಿದರೆ ವಿಶ್ವ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ್ಲ.

--ವಿಶ್ವಾಸ. ಸೋಹೋನಿ.

 ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,

9483937106.

Post a Comment

0Comments

Post a Comment (0)