ಸರ್ಟಿಫಿಕೇಟ್ ಇನ್ ಲೈಬ್ರರಿ ಸೈನ್ಸ್ ತರಬೇತಿಗಾಗಿ ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಮೇ 07  (ಕರ್ನಾಟಕ ವಾರ್ತೆ) : ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಬೆಂಗಳೂರು, ಮಂಗಳೂರು, ಧಾರವಾಡ ಹಾಗೂ ಕಲಬುರಗಿ ಕೇಂದ್ರಗಳ  ಗ್ರಂಥಾಲಯ ವಿಜ್ಞಾನ  ತರಬೇತಿ ಶಾಲೆಗಳಲ್ಲಿ ಕ್ರಮವಾಗಿ 25ನೇ ತಂಡ, 18ನೇ ತಂಡ   ಹಾಗೂ  16ನೇ (ಮಂಗಳೂರು ಮತ್ತು ಕಲಬುರಗಿ) ತಂಡಗಳಿಗೆ 04 ತಿಂಗಳ “ ಸರ್ಟಿಫಿಕೇಟ್  ಇನ್ ಲೈಬ್ರರಿ ಸೈನ್ಸ್” ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಕೇಂದ್ರಗಳ ಕಂದಾಯ ವಿಭಾಗಗಳಿಗೆ ಒಳಪಡುವ ಜಿಲ್ಲೆಗಳ ಅಭ್ಯರ್ಥಿಗಳು ಆಯಾ ತರಬೇತಿ ಕೇಂದ್ರಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅರ್ಜಿಗಳನ್ನು ಎಲ್ಲಾ ಅವಶ್ಯಕ ದಾಖಲಾತಿಗಳೊಂದಿಗೆ ಮೇ 25, 2022 ರೊಳಗೆ ಸಲ್ಲಿಸಬೇಕು.

ತರಬೇತಿಗಾಗಿ ಅಜಿ ಸಲ್ಲಿಸಲು ಇಚ್ಛಿಸುವ ಇಲಾಖೆಯ ‘ಡಿ’ ದರ್ಜೆಯ ಗ್ರಂಥಾಲಯ ಸಹವರ್ತಿಗಳು ಗ್ರಾಮ ಪಂಚಾಯತಿ ಗ್ರಂಥಾಲಯದ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿರುವ ಸಂಬಂಧಪಟ್ಟ ಉಪ ನಿರ್ದೇಶಕರು, ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಯಿಂದ ಬರುವ ಅಭ್ಯರ್ಥಿಗಳು ಸಂಸ್ಥೆಯ ಮುಖ್ಯಸ್ಥರ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸುವವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು, ವಯಸ್ಸು ಸರ್ಕಾರದ ನಿಯಮಾವಳಿಯಲ್ಲಿ ನಿಗದಿಪಡಿಸಿದಂತೆ ನಿರ್ಧರಿಸಲಾಗುವುದು.

ಅಸಕ್ತ ಅಭ್ಯರ್ಥಿಗಳು ಅರ್ಜಿ ಪಡೆಯಲು ಮತ್ತು ಅರ್ಜಿಯ ಜೊತೆಗೆ ಲಗತ್ತಿಸಬೇಕಾದ ದಾಖಲಾತಿಗಳ ಬಗ್ಗೆ ತರಬೇತಿ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ಬಗ್ಗೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ  ಉಪ ನಿರ್ದೇಶಕರು ಪ್ರಾಂಶುಪಾಲರು, ರಾಜ್ಯ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ, ಕಬ್ಬನ್ ಉದ್ಯಾನವನ, ಬೆಂಗಳೂರು-01 (ದೂರವಾಣಿ ಸಂ. 080-22212128), ಉಪ ನಿರ್ದೇಶಕರು, ಪ್ರಾಂಶುಪಾಲರು, ನಗರ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ, ಡಿ.ಸಿ ಕಛೇರಿಯ ಅವರಣ, ಧಾರವಾಡ-580 001 (ದೂರವಾಣಿ ಸಂ. 0836-2442465), ಉಪ ನಿರ್ದೇಶಕರು / ಪ್ರಾಂಶುಪಾಲರು, ನಗರ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ, ಬಾವುಟಗುಡ್ಡೆ, ಶಂಕರಮಠ ರಸ್ತೆ, ಮಂಗಳೂರು-575 003 (ದೂರವಾಣಿ ಸಂ. 0824-2425873),  ಹಾಗೂ ಉಪ ನಿರ್ದೇಶಕರು / ಪ್ರಾಂಶುಪಾಲರು, ನಗರ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆ, ಎಂ.ಎಚ್.ಎಸ್. ಶಾಲೆ ಆವರಣ, ಸೂಪರ್ ಮಾರ್ಕೆಟ್, ಜಗತ್ ಸರ್ಕಲ್, ಕಲಬುರಗಿ-585 101 (ದೂರವಾಣಿ ಸಂಖ್ಯೆ: 08472-221543) ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Tags

Post a Comment

0Comments

Post a Comment (0)