SIHI KAHI CHANDRU : ಆಹಾರ ಆರೋಗ್ಯವಾಗಿರಬೇಕು,ಮಕ್ಕಳ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶ ಆಹಾರ ಮುಖ್ಯ-ಸಿಹಿ ಕಹಿ ಚಂದ್ರು

varthajala
0

 ಗ್ಲೋಬಲ್ ಮಾಲ್ಸ್ ಮತ್ತು ಲುಲು ಫನ್ ಟೂರಾ ಸಹಯೋಗದಲ್ಲಿ ಲುಲು ಫುಡ್ ಕಾರ್ನಿವಲ್ ಮತ್ತು ಲಿಟ್ಟಲ್ ಶೆಫ್ ಮಕ್ಕಳ ಕೈ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು ಉದ್ಘಾಟನೆಯನ್ನು ಖ್ಯಾತ ಬಾಣಸಿಗ,ಹಾಸ್ಯನಟ ಸಿಹಿ ಕಹಿ ಚಂದ್ರುರವರು ,ರೀಜಿನಲ್ ಮ್ಯಾನೇಜರ್ ಫಹಾಜ್ ಆಶ್ರಫ್ ಅಲಿ ಮತ್ತು ಖ್ಯಾತ ಬಾಣಸಿಗ ವಿಕಾಸ್ ಪಾಠಕ್ ರವರು  ಉದ್ಘಾಟಿಸಿದರು. ಲುಲು ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ದಕ್ಷಿಣ ಭಾರತ,ಉತ್ತರ ಭಾರತ ದೇಶ,ವಿದೇಶಿ ಖಾದ್ಯಗಳ ಆಹಾರ ಮೇಳದಲ್ಲಿ ಉತ್ತಮ ಬಾಣಸಿಗರಿಂದ  ಖಾದ್ಯಗಳ ತಯಾರಿಸಲಾಗುತ್ತಿದೆ .  ಅತಿ ಉತ್ಸಹದಿಂದ ಸಾರ್ವಜನಿಕರು ತಮಗೆ ಇಷ್ಟವಾದ ತಿಂಡಿಗಳನ್ನು ಸವಿದರು.


 10ದಿನಗಳ ಕಾಲ ಸ್ಪರ್ಧೆ ನಡೆಯಲಿದೆ ವಿಜೇತ ಮಕ್ಕಳಿಗೆ ಪ್ರಥಮ ಬಹುಮಾನ 25ಸಾವಿರ,ದ್ವಿತೀಯ ಬಹುಮಾನ10ಸಾವಿರ ,ತೃತೀಯ ಬಹುಮಾನ5ಸಾವಿರ ಮತ್ತು ಸಮಾಧಾನಕರ ಬಹುಮಾನವಿದೆ.

ಲುಲು ಫನ್ ಟೂರಾ ಕಾರ್ಯಕ್ರಮಕ್ಕೆ ಆಗಮಿಸಿವ ಪೋಷಕರು ಮತ್ತು ಮಕ್ಕಳಿಗೆ ಪ್ರವಾಸ ತೆರಳಿದಂತೆ ಅನುಭವವಾಗುತ್ತದೆ. 

ಮಕ್ಕಳಿಗೆ ಇಂದಿನ ಅಡುಗೆ ಸ್ಪರ್ಧೆಯಲ್ಲಿ 350ಮಕ್ಕಳು ಪಾಲ್ಗೊಂಡಿದ್ದರು.


ಉಚಿತವಾಗಿ ಮಕ್ಕಳಿಗೆ ಅಡುಗೆ ಸ್ಪರ್ಧೆ 5ರಿಂದ 15ವರ್ಷದ ಒಳಗಿನ ಮಕ್ಕಳಿಗೆ ಏರ್ಪಡಿಸಲಾಗಿದೆ ,ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಈ ಮೊಬೈಲ್ ನಂಬರಗೆ ಕರೆ ಮಾಡಿ 9538204176 ನೋಂದಣೆ ಮಾಡಿಸಬಹುದು.

ಇದೇ ಸಂದರ್ಭದಲ್ಲಿ ಸಿಹಿಕಹಿ ಚಂದ್ರುರವರು ಮಾತನಾಡಿ ಖುಷಿ,ಸಂತೋಷ ಮತ್ತು ಪ್ರೀತಿಯಿಂದ ಅಡುಗೆ ಮಾಡಬೇಕು ಮತ್ತು ಪೌಷ್ಟಿಕಾಂಶ ಆಹಾರ ತಿಂಡಿಗಳನ್ನು ಮಾಡಬೇಕು .ನಾವು ಮಾಡಿದ ಅಡುಗೆ ಆಸ್ವಾದಿಸಿ ತಿನ್ನಬೇಕು .

ಮನುಷ್ಯ ಜೀವನದಲ್ಲಿ ಕಷ್ಟಪಡುವುದು ಹೊಟ್ಟೆಗಾಗಿ ಅದನ್ನ ಸಮರ್ಪಕವಾಗಿ,ಸಮತೋಲನಆಹಾರ ಸೇವಿಸಿದರೆ ಮಾತ್ರ ನಾವು ಜೀವನ ,ಶ್ರಮಪಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ.

ಆಹಾರ ಮನುಷ್ಯನಿಗೆ ಬಹಳ ಮುಖ್ಯ ಆಹಾರದಿಂದ ಆರೋಗ್ಯ ಕಾಪಾಡುವುದು ಹೇಗೆ ಎಂಬುದು ಮಕ್ಕಳಿಗೆ ತಿಳಿಯಬೇಕು ಎಂದು ಸ್ಪರ್ಧೆ ಏರ್ಪಡಿಸಲಾಗಿದೆ. ಉತ್ತಮ ಪೌಷ್ಟಿಕಾಂಶ ಆಹಾರಗಳು ಸೇವನೆಯಿಂದ ಮಾನಸಿಕ,ದೃಹಿಕವಾಗಿ ಬಾಳಬಹುದು.

ಮೇ 27ರಿಂ ಜೂನ್ 5ತಾರೀಖಿನವರಗೆ 10ದಿನಗಳ ಕಾಲ ಆಹಾರ ಮೇಳ ಜರುಗಲಿದೆ ಸಾರ್ವಜನಿಕರು ಬಂದು ತಮಗಿಷ್ಟವಾದ ಆಹಾರ ಸೇವಿಸಬೇಕು ಎಂದು ಹೇಳಿದರು.

Post a Comment

0Comments

Post a Comment (0)