ವಿನಾಯಕ ಸದ್ಭಕ್ತಿ ತಾಣ ಸ್ವಾನಂದಾಶ್ರಮದಲ್ಲಿ ಸದಿಲ್ಲದ ಅಕ್ಷರ ಕ್ರಾಂತಿ ವಿದ್ಯಾಚೇತನ - SHIKSHANA RATNA

Breaking

Post Top Ad

Responsive Ads Here

Friday, 24 June 2022

ವಿನಾಯಕ ಸದ್ಭಕ್ತಿ ತಾಣ ಸ್ವಾನಂದಾಶ್ರಮದಲ್ಲಿ ಸದಿಲ್ಲದ ಅಕ್ಷರ ಕ್ರಾಂತಿ ವಿದ್ಯಾಚೇತನ

ಬೆಂಗಳೂರು ಕನಕಪುರ ರಸ್ತೆಯ ಮೆಟ್ರೋ ನಂತರ ನೈಸ್ ರಸ್ತೆ ದಾಟಿ ಕೊಂಚದೂರ ಪಯಣಸಿದರೆ ಕುಂಬಳಗೋಡು ಕಡೆಗೆ ಸಾಗುವ ಅಗರ-ತಾತಗುಣಿ ರಸ್ತೆಯಲ್ಲಿ ಆಧ್ಯಾತ್ಮ ಆಸಕ್ತರನ್ನು ತನ್ನೆಡೆಗೆ ಸೆಳೆಯುತ್ತ ಸಾಮಾಜಿಕ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಪರೂಪದ ಸಂಘಟನೆ - ಗಣೇಶೋಪಾಸನೆಯ ಕೇಂದ್ರ ಸ್ವಾನಂದಾಶ್ರಮವಿದೆ . ಈ ದೇವಾಲಯಕ್ಕೆ ದೈವೀಕ ಹಿನ್ನೆಲೆಯಿದೆ, ಇದರ ಮೂಲದಲ್ಲಿ ತಪಸ್ಸು ಇದೆ. ಸಕಲ ಆಶೋತ್ತರ ಸಿದ್ದಿಯ ನೀಡುವ ಸ್ವಾನಂದ ಬಾಲ ಗಣಪತಿ ನೆಲೆನಿಂತಿದ್ದಾನೆ. ಆಧುನಿಕತೆಯಲ್ಲೆ ಮಿಂಚಿದ್ದರು ಗ್ರಾಮೀಣ ಸಂಸ್ಕೃತಿಯಿAದ ಬೇರ್ಪಡದ ವಿನಾಯಕೋಪಾಸನೆಯ ವೈವಿಧ್ಯಗಳು ಭಕ್ತರನ್ನು ನಿಬ್ಬೆರಗಾಗಿಸುತ್ತದೆ .

ಪುರೋಗಾಮಿ ಸಮಾಜಚಿಂತಕರು ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇAದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾ ಗಣಪತಿ ಪಂಚಾಯತನ ದೇಗುಲ ನಿರ್ಮಾಣಗೊಂಡಿದ್ದು ಮುದ್ಗಲ ಪುರಾಣೋಕ್ತ 32 ಗಣೇಶ ಸಹಿತ ಕೃತಯುಗಾದಿ ಗಣೇಶ ಮೂರ್ತಿ ಹಾಗೂ ಗಣೇಶ ಪುರಾಣದಲ್ಲಿನ ವರ್ಣಿತ ಗಣೇಶನ ಸ್ವ ನಿವಾಸವಾದ “ಸ್ವಾನಂದ ಭವನ”ದ ಪರಿಕಲ್ಪನೆಯ ವಿಶ್ವರೂಪಿ ವಿನಾಯಕ ಮಂಟಪ ಪ್ರೇಕ್ಷಣೀಯ.


ಮಾನವ ಸೇವೆಯೆ ಮೂಲ ಮಂತ್ರವಾಗಿರಿಸಿಕೊ0ಡಿರುವ ಆಶ್ರಮ, ಆಶ್ರಮದ ಸುತ್ತಲಿನ 12 ಗ್ರಾಮದ 24 ಸರ್ಕಾರಿ ಶಾಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವ ಒಂದು ವಿಶಿಷ್ಟ ಸೇವಾ ಕಾರ್ಯಕ್ರಮ – ವಿದ್ಯಾಚೇತನ ; ಅಲ್ಪಪ್ರಮಾಣದಲ್ಲಿ ಆರಂಭವಾದ ಈ ಯೋಜನೆಯು ಇದೀಗ 1667 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ , ಶೈಕ್ಷಣಿಕ ಸೌಲಭ್ಯವನ್ನು ನೀಡುವ ಗುರಿ ತಲುಪಿ ತನ್ಮೂಲಕ ಸಾಮಾಜಿಕ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ. 

ಜೂನ್ 25 , ಶನಿವಾರ ಬೆಳಿಗ್ಗೆ 11ಕ್ಕೆ ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇ0ದ್ರ ಸರಸ್ವತಿ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿದ್ಯಾಚೇತನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ . ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಹಕಾರ ಸಚಿವ ಎಸ್.ಟಿ.ಸೋಶೇಖರ್, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ತೇಜಸ್ವಿ ಸೂರ್ಯ ವಿಶೇಷ ಆಹ್ವಾನಿತರಾಗಿ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

No comments:

Post a Comment

Post Bottom Ad

Responsive Ads Here

Pages