RYME ಕಾಲೇಜಿನಲ್ಲಿ ವಿನೂತನ ಪರಿಸರ ಸಂರಕ್ಷಣ-“ರೈಮೆಕ್‍ನ ನಡೆ ಶೂನ್ಯ ತ್ಯಾಜ್ಯದ ಕಡೆ” - ಡಾ.ಟಿ.ಹನುಮಂತರೆಡ್ಡಿ

varthajala
0

 ಬಳ್ಳಾರಿ ಜೂನ್ 23. ಆರ್.ವೈ.ಎಮ್ ಇಂಜಿನಿಯರಿಂಗ್ ಕಾಲೇಜಿನ ,ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ವಿನೂತನ ರೀತಿಯ 2 ದಿನಗಳ ಪರಿಸರ ಸಂರಕ್ಷಣಾ ಕಾರ್ಯಕ್ರಮವನ್ನು  “ರೈಮೆಕ್ ನ ನಡೆ ಶೂನ್ಯ ತ್ಯಾಜ್ಯದ ಕಡೆ” (RYMECs Race to zero waste) ಎನ್ನುವ ತಲೆ ಬರಹದಡಿ ದಿನಾಂಕ 22-06-2022 ರಂದು ಆರಂಭಿಸಲಾಯಿತು.


ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾದ ವಸ್ತುವಾಗಿ ಪರಿವರ್ತಿಸುವ ಕ್ರಿಯೆ ಅಥವಾ ಪ್ರಕ್ರಿಯೆಯಿಂದ ಹಾಗೂ ಅನಾವಶ್ಯಕವಾದ ವಸ್ತುಗಳನ್ನು ಖರೀದಿಸುವುದನ್ನು ಕಡಿಮೆ ಮಾಡುವುದರಿಂದ ಪರಿಸರದ ಆರೋಗ್ಯವನ್ನು ಕಾಪಾಡಬಹುದು ಎನ್ನುವ ಧ್ಯೇಯದೊಂದಿಗೆ ,ಕ್ಯಾಂಪಸ್ ನ ಸುತ್ತಮುತ್ತ ದೊರಕಿದ ಪ್ಲಾಸ್ಟಿಕ್ ,ಕಾಗದ ,ರಟ್ಟು ಹಾಗೂ ಲೋಹದ ತ್ಯಾಜ್ಯಗಳಿಂದ ಬಣ್ಣ ಬಣ್ಣದ ಮನೆ ಬಳಕೆಯ ವಸ್ತುಗಳನ್ನು ತಯಾರಿಸಿ ಪ್ರದರ್ಶನವನ್ನು ಏರ್ಪಡಿಸಿದ್ದರು.ವಸ್ತು ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯವರು ಕಂಪೂಟರ್ ಸೈನ್ಸ್ ವಿಭಾಗದ ವಿನೂತನ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಟಿ.ಹನುಮಂತ ರೆಡ್ಡಿ ಯವರು “ಇಂಥಹ ಕಾರ್ಯಕ್ರಮಗಳು ತಾಂತ್ರಿಕ ಶಿಕ್ಷಣದ ಭಾಗವಾಗವಾಗಬೇಕು ,ವಿದ್ಯಾರ್ಥಿಗಳ  ಕೌಶಲ್ಯ ಕಂಡು ಬೆರಗಾಗಿದ್ದೇನೆ  ಹಾಗೂ ಇವರು ಪಟ್ಟಿರುವ ಶ್ರಮ  ಅತ್ಯಂತ ಶ್ಲಾಘನೀಯ ಇಂಥ ಕಾರ್ಯಗಳಿಗೆ ನನ್ನ ಹಾಗೂ ಸಂಸ್ಥೆಯ ಸಹಯೋಗ ನಿರಂತರವಾಗಿ ಇರಲಿದೆ” ಎಂದು ಶುಭ ಹಾರೈಸಿದರು.ಉಪ ಪ್ರಾಂಶುಪಾಲರಾದ ಡಾ.ಸವಿತಾ ಸೊನೋಳಿ  ಅವರು “ ನಿಮ್ಮ ಈ ಕುಸುರಿ ಕಲೆ ನನಗೆ ಸೋಜುಗವನ್ನುಂಟು ಮಾಡಿದೆ ,ಕಸದಿಂದ ರಸ ತೆಗೆಯುವ ನಿಮ್ಮ ಕಾರ್ಯ ಮೆಚ್ಚುವಂಥದ್ದು“ಎಂದರು. ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಗಿರೀಶ್ ಹೆಚ್ ವಿದ್ಯಾರ್ಥಿಗಳ ಉತ್ಸಾಹಕ್ಕೆ ಮೆಚ್ಚುಗೆ ಸೂಚಿಸಿದರು .ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ್ ,ಡಾ.ತಿಮ್ಮನಗೌಡ ,ಡಾ .ಸವಿತಾ ಸೊನೋಳಿ ಸ್ಫರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ವಿ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ಧಸ್ವಾಮಿ, ವಿ.ವಿ.ಸಂಘದ ಉಪಾಧ್ಯಕ್ಷರು ಹಾಗೂ ರೈಮೆಕ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚೆನ್ನಪ್ಪನವರು ,ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಸಹ ಕಾರ್ಯದರ್ಶಿಗಳಾದ ದರೂರು ಶಾಂತವೀರನ ಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು. ಆರ್.ವೈ.ಎಮ್, ಇ.ಸಿ .ಆಡಳಿತ ಮಂಡಳಿಯ ಸದಸ್ಯರಾದ ಜಿ.ಎ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನಕುಂಟೆ ಪಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ.ಸುನೀತ .ಎಸ್ , ಮತ್ತು ಪ್ರಾಧ್ಯಾಪಕರಾದ ಡಾ.ಸಾಯಿ ಮಾಧವಿ ,ಸಂಘಟನಾ ಸಮಿತಿಯ ಸದಸ್ಯರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಆರ್.ಪಿ.ರಾಜೇಶ್ವರಿ,ಸರ್ವರ್ ಬೇಗಮ್ ,ಶಿವಕೇಶಿ ಚೌಪಿರಿ,ಬಿಲ್ವಶ್ರೀ,ನಾಗಶ್ವಿನಿ ,ಪ್ರಾಧ್ಯಾಪಕರಾದ ಡಾ.ಗಂಗಾಧರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.2ನೇ ದಿನವಾದ ಇಂದು ವಸ್ತು ಪ್ರದರ್ಶನ ಮುಂದುವರೆದಿದ್ದು ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ  ಪ್ರಶಂಸನಾ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.ಸಾಕಷ್ಟು ಸಂಖ್ಯೆಯಲ್ಲಿ  ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 



 



Tags

Post a Comment

0Comments

Post a Comment (0)