ಬೆಥನಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ

varthajala
0

ಮಂಗಳೂರಿನ ಬೆಥನಿ ಶಿಕ್ಷಣ ಸಂಸ್ಥೆಯು ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅದರ ಅಂಗವಾಗಿ ಬೆಥನಿ ಕಾಂಗ್ರಿಗೇಶನ್  ಸುಪೀರಿಯರ್ ಜನರಲ್ ಪ್ರತಿನಿಧಿಯಾಗಿ ಸಿಸ್ಟರ್ ಮಾರಿಯಟ್  ಸರ್ವಜ್ಞನಗರ ಕ್ಷೇತ್ರದಲ್ಲಿರುವ ಕಾಚರಕನಹಳ್ಳಿ ಬೆಂಗಳೂರು ಪ್ರೋವಿನಸಿಯಲ್ ಹೌಸ್ಆಡಳಿತ ವೀಕ್ಷಣೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಬೆಥನಿ ಶಿಕ್ಷಣ ಸಂಸ್ಥೆ ಅಮೃತ ಮಹೋತ್ಸವ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮ ನೆರವೇರಿತು


ಅದರಲ್ಲಿ ಮುಖ್ಯ ಅತಿಥಿಗಳಾಗಿ ಸಿಸ್ಟರ್ ಮಾರಿಯಟ್ ಪಾಲ್ಗೊಂಡಿದ್ದರು ಅವರನ್ನು ವಾದ್ಯಗೋಷ್ಠಿ ಹಾಗೂ ವಿದ್ಯಾರ್ಥಿಗಳು ಕಳಸ ಹೊತ್ತು ಮೆರವಣಿಗೆಯಲ್ಲಿ ಸುಸ್ವಾಗತಿಸಿದರು. ಸಿಸ್ಟರ್ ಮಾರಿಯಾಟ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಉದಾಹರಣೆ ಸಹಿತ ವಿವರಿಸಿದರು. ಭವಿಷ್ಯದ ಹೊಂಗನಸುಗಳನ್ನು ಕಾಣಬೇಕು. ಗುರು ಹಿರಿಯರಿಗೆ ಗೌರವಿಸುವುದನ್ನು ಕಲಿಯಬೇಕೆಂದು ತಿಳಿಸಿದರು. ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮನ್ನು ನಂಬಿ ಬಂದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.

ಸಿಸ್ಟರ್ ವೈಲೆಟ್ ಡಿಸೋಜಾ ಪ್ರಕ್ಯೂಲೇಟರ್ ಜನರಲ್, ಸಿಸ್ಟರ್ ಸಹನಾ ಪ್ರವೀನಿಸಿಯಲ್ ಸುಪೀರಿಯರ್, ಸಿಸ್ಟರ್ ಸೈಮನ್ ಮುಖ್ಯೋಪಾಧ್ಯಾಯನಿ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಿಸ್ಟರ್ ಬೆಟ್ಟಿ ಪ್ರಾಂಶುಪಾಲರು ಜ್ಯೋತಿ ಪದವಿ ಪೂರ್ವ ಕಾಲೇಜು, ಸಿಸ್ಟರ್ ಸುಜನ್ ಸುಪೀರಿಯರ್ ಜ್ಯೋತಿ ನಿಲಯ, ಸಿಸ್ಟರ್ ಶಾರ್ಲೆಟ್ ಮುಖ್ಯೋಪಾಧ್ಯಾಯನಿ, ಜ್ಯೋತಿ ಪ್ರಾಥಮಿಕ ಶಾಲೆ. ಕೋಲಂದೈರಾಜು ಮುಖ್ಯೋಪಾಧ್ಯಾಯರು ಜ್ಯೋತಿ ಕನ್ನಡ ಪ್ರೌಢಶಾಲೆ. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಥನಿ ಸಂಸ್ಥೆಯ ಪ್ರಾರ್ಥನೆ ಮತ್ತು ಅಮೃತ ಮಹೋತ್ಸವದ ಪ್ರಾರ್ಥನೆಯನ್ನು ಜ್ಯೋತಿ ಶಾಲೆಯ ಮಕ್ಕಳು ಹಾಡಿದರು. ಅಮೃತ ಮಹೋತ್ಸವದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. 

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಪ್ರೇಮಲತಾ ಸರ್ವರನ್ನು ಸ್ವಾಗತಿಸಿದರು. ಸಿಸ್ಟರ್ ಸೈಮನ್ ಪ್ರಸ್ತಾವಿಕ ನುಡಿಯನ್ನು ಹೇಳಿದರು. ಶ್ರೀಮತಿ  ಲಿನೆಟ್ ವಂದನಾರ್ಪಣೆ ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕ ಸಗಾಯರಾಜ್ ನಿರ್ವಹಿಸಿದರು. 

ವರದಿ:  ವರ್ಧಮಾನ ಕಳಸೂರು

Post a Comment

0Comments

Post a Comment (0)