ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಮೌಲ್ಯದ ಶಿಕ್ಷಣವನ್ನು ಜಾರಿಗೊಳಿಸುವ ಬಗ್ಗೆ.....

varthajala
0

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಅಳವಡಿಸುವ ವಿಷಯ ಕುರಿತು ಕೆಲವು ಅಭಿಪ್ರಾಯಗಳು ದಿನಾಂಕ 9/1/2023 ರಂದು ವಿಧಾನಸೌಧದಲ್ಲಿ ನಡೆದ ನೈತಿಕ ಶಿಕ್ಷಣ ಜಾರಿ ಕುರಿತು ಮಠಾಧೀಶರು, ಚಿಂತಕರು, ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಗೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಮೌಲ್ಯದ ಶಿಕ್ಷಣವನ್ನು ಜಾರಿಗೊಳಿಸುವ ಬಗ್ಗೆ ಪ್ರಕಟವಾದ ಅಭಿಪ್ರಾಯಗಳು ಸ್ವಾಗತಾರ್ಹ. 


ಮೇಲ್ಕಂಡ ವಿಚಾರಕ್ಕೆ ಸಂಬ0ಧಿಸಿದ0ತೆ ಈಗಾಗಲೇ ಎನ್.ಸಿ.ಆರ್.ಟಿ.ಸಿ, ಡಿ.ಎಸ್.ಆರ್.ಟಿ.ಸಿ ಮೌಲ್ಯ ಶಿಕ್ಷಣದ ಬಗ್ಗೆ ಪುಸ್ತಕವನ್ನು 2020-21 ರಲ್ಲಿ ಪ್ರಕಟಿಸಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವದ ತಾಯಿಯಾದ ಸಂವಿಧಾನದ ಮೂಲ ಉದ್ದೇಶಗಳು ನಾಗರೀಕರ ಹಕ್ಕು ಮತ್ತು ಕರ್ತವ್ಯಗಳ ಅಡಿಯಲ್ಲಿ ಈಗಾಗಲೇ ಆಲಾ ಕಾಲೇಜಿನಲ್ಲಿ ಅಳವಡಿಸಿಕೊಂಡಿರುತ್ತಾರೆ. ಈಗ ಮೌಲ್ಯಶಿಕ್ಷಣವನ್ನು ಅನೇಕ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಿದೆ. ಭಾರತವು ಕೂಡ 75 ವರ್ಷಗಳ ಶಿಕ್ಷಣ ನೀತಿಯನ್ನು ಬದಲಾಯಿಸಿ `ರಾಷ್ಟಿಯ ಶಿಕ್ಷಣ ನೀತಿ-2020' ಅನುಷ್ಠಾನಗೊಳಿಸುತ್ತಿದೆ. ದೇಶದ ಏಕೈಕ ಕರ್ನಾಟಕ ರಾಜ್ಯವು ರಾಷ್ಟಿಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಶಾಲೆಗಳಲ್ಲಿ ಸರ್ವಧರ್ಮ ಬೋಧನೆಯ ಅಂಶಗಳನ್ನು ಮತ್ತು ಸಂವಿಧಾನದ ಅಡಿಯಲ್ಲಿ ಬರುವ ನೈತಿಕ ಶಿಕ್ಷಣದ ಪ್ರಚಾರ, ಪ್ರಸಾರವನ್ನು ಈಗಾಗಲೇ ಶಾಲೆಗಳಲ್ಲಿ ಅನುಸರಿಸುತ್ತಿದೆ. ವಿಶೇಷ ಸಭೆ ಸಮಾರಂಭಗಳಲ್ಲಿ ಶಾಲಾ ವಾರ್ಷಿಕೋತ್ಸವಗಳಲ್ಲಿ ರಾಷ್ಟಿಯ ಹಬ್ಬಗಳಲ್ಲಿ ನಾನಾ ಜಾತಿ, ಧರ್ಮ, ಭೇದಭಾವವಿಲ್ಲದೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 

ಸ್ನೇಹ, ಪ್ರೀತಿ, ಸಹಕಾರ, ಸಹಯೋಗ ಇವುಗಳಿಗೆ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಲಾಗಿದೆ. ಶಾಲಾ ಶಿಕ್ಷಣದಲ್ಲಿ, ಫಲಿತಾಂಶಗಳಲ್ಲಿ ಗುಂಪುಚರ್ಚೆಗಳ ಮೂಲಕ, ಸಹಭೋಜನದಲ್ಲಿ, ರಾಷ್ಟಗೀತೆ, ನಾಡಗೀತೆ ಹಾಡುವ ಮೂಲಕ ದೇಶದ ಸಮಗ್ರತೆ, ಐಕ್ಯತೆಯ ಮಹತ್ವವನ್ನು ತಿಳಿದಿರುತ್ತಾರೆ. ಅಪಘಾತ ಸಂದರ್ಭಗಳಲ್ಲಿ ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣಗಳನ್ನು ಮಕ್ಕಳು ಅರಿತಿರುತ್ತಾರೆ. ರಾಷ್ಟಿಯ ಶಿಕ್ಷಣ ನೀತಿಯಲ್ಲಿ ನೈತಿಕ ಮೌಲ್ಯಗಳನ್ನು ಇನ್ನೂ ಹೆಚ್ಚು ಅಳವಡಿಸಲು ಸಾಧ್ಯವಿದೆ. ಈಗಾಗಲೇ ದೇಶವಿದೇಶಗಳ ವಿಶ್ವವಿದ್ಯಾಲಯಗಳೊಂದಿಗೆ ನಮ್ಮ ಶಿಕ್ಷಣ ನೀತಿಯ ಆಗುಹೋಗುಗಳ ಒಪ್ಪಂದಗಳನ್ನು ಸರ್ಕಾರ ಮಾಡಿಕೊಂಡಿದೆ. 

ಸರ್ವರಿಗೂ ಸಮಪಾಲು ಎಂಬ ಪ್ರಕೃತಿಯ ಗಾಳಿ, ನೀರು, ಬೆಳಕು ಇತ್ಯಾದಿಗಳ ಬಳಕೆ, ಸದ್ವಿನಿಯೋಗ ಇವುಗಳ ಗುಣಗಳನ್ನು ಸರ್ವರೂ ಅನುಭವಿಸುವ ಹಾಗೆ ಎಲ್ಲಾ ಧರ್ಮಗಳ ವಚನ ಸಾಹಿತ್ಯ, ಸುಭಾಷಿತ, ದಾಸಸಾಹಿತ್ಯ ಮೂಲಕ ನೈತಿಕ ಮೌಲ್ಯಗಳ ಶಿಕ್ಷಣವನ್ನು ವಯಸ್ಸಿಗೆ ಅನುಗುಣವಾಗಿ, ತರಗತಿಗೆ ಅನುಗುಣವಾಗಿ, ನಾವು ಮಕ್ಕಳಿಗೆ ನೀಡಬಹುದು. ನೈತಿಕ ಶಿಕ್ಷಣದ ಹೊಣೆಯನ್ನು ದೈಹಿಕ ಶಿಕ್ಷಣದ ಜೊತೆಗೆ ಶಿಕ್ಷಕರಿಗೆ ಮತ್ತು ಭಾಷಾ ಶಿಕ್ಷಕರಿಗೆ ಎರಡು ಪಿರಿಯಡ್ ಕಾಲಾವಧಿಯನ್ನು ನೀಡುವ ಮೂಲಕ ಸದ್ಗುಣ ಸಜ್ಜನರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಯಾವ ಆರ್ಥಿಕ ಹೊರೆಯೂ ಸರ್ಕಾರಕ್ಕೆ ಆಗುವುದಿಲ್ಲ. ಭವಿಷ್ಯದ, ಸಮಾಜದ ಅಭಿವೃದ್ಧಿಗೆ ಇಂದು ಶಾಲಾ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳು ಅಗತ್ಯವಿದೆ. ಮೌಲ್ಯಾಧಾರಿತ ಶಿಕ್ಷಣ ಜವಾಬ್ದಾರಿ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಮತ್ತು ಸರ್ಕಾರದ ಹೊಣೆಯಾಗಿದೆ. ಇವರುಗಳು ಇಬ್ಬಗೆ ನೀತಿಯನ್ನು ಬಿಟ್ಟು ಕಾಮಾಲೆ ದೃಷ್ಠಿಯಿಂದ ನೋಡದೆ ಸರ್ಕಾರದ ನಿರ್ಧಾರಕ್ಕೆ ಮುಂದಿನ ಜನಾಂಗದ ಭದ್ರ ಅಡಿಪಾಯಕ್ಕೆ ಜಾತಿಧರ್ಮಗಳನ್ನು ಸೀಮಿತ ಮಾಡದೆ ನೈತಿಕ ಮೌಲ್ಯದ ಶಿಕ್ಷಣ ಅಳವಡಿಸಲು ಅವಕಾಶ ಮಾಡಿಕೊಡಬೇಕು.

ಸಾಮಾಜಿಕ ಮುಖಂಡರು, ರಾಜಕಾರಣಿಗಳು ಇದಕ್ಕೆ ಮುನ್ನುಡಿ ಬರೆದು ದೇಶದ, ಪೋಷಕರ, ವಿದ್ಯಾರ್ಥಿಗಳ, ಶಾಲೆಗಳ ಮುಖ್ಯಸ್ಥರ ಮುಕ್ತ ಅಭಿಪ್ರಾಯಗಳನ್ನು ಸಂಗ್ರಹಿಸಿ ಜಾರಿಗೆ ತರಲಿ. ನೈತಿಕ ಶಿಕ್ಷಣದ ಲಾಭ ರಾಜಕೀಯಕ್ಕಾಗಿ, ರಾಜಕಾರಣಿಗಳ ಪ್ರತಿಷ್ಠೆಗಾಗಿ, ವೋಟ್ ಬ್ಯಾಂಕ್‌ಗಾಗಿ ಆಗಬಾರದು. ಭಾರತೀಯರ ಬಗ್ಗೆ ವಿದೇಶಗಳಲ್ಲಿ ಹೆಚ್ಚು ಗೌರವವಿದೆ. ಅನಿವಾಸಿ ಭಾರತೀಯರು ಉನ್ನತ ಹುದ್ದೆಗಳಲ್ಲಿ ಅಲಂಕರಿಸಿ ತಮ್ಮ ಜ್ಞಾನದ ಅನುಭವದ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಮೌಲ್ಯದ ಶಿಕ್ಷಣ ಬರಲಿ, ಧರ್ಮಾಧಾರಿತ ಶಿಕ್ಷಣ ಬೇಕಾಗಿಲ್ಲ. ಮೌಢ್ಯಗಳ, ಮೂಢನಂಬಿಕೆಗಳ, ಅನಾಗರೀಕರ ಪದ್ಧತಿಗಳ ದೂರವಾಗಲು ಜನಜಾಗೃತಿಗೆ ನೈತಿಕ ಶಿಕ್ಷಣ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಸರ್ಕಾರವು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯವಾಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಸಹಾಯ ಪಡೆದುಕೊಂಡು ಜಾರಿಗೆ ತಂದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದರಲ್ಲಿ ಧರ್ಮ, ಜಾತಿ, ವರ್ಗ, ಬೇಧಗಳ ಅನುಕರಣೆ ಆಗಬಾರದು. ದೇಶಪ್ರೇಮ, ರಾಷ್ಟಿಯತೆ, ಭಾವೈಕ್ಯತೆ, ವಿಶ್ವಬಂಧುತ್ವ ಅಡಕವಾದರೆ ನಮ್ಮ ಪ್ರಗತಿ ಸಾಧ್ಯವಿದೆ. ಸರ್ಕಾರವು ಸಾಧಕ, ಬಾಧಕಗಳನ್ನು ವಿಶ್ಲೇಷಿಸಿ ಶಿಕ್ಷಕರಿಗೆ ಕ್ಲಸ್ಟರ್ ಮಟ್ಟದಲ್ಲಿ ತರಬೇತಿ ನೀಡಿ ನೈತಿಕ ಶಿಕ್ಷಣದ ಜಾರಿಗೆ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಿಕ್ಷಕ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು ಸಮಾಜದ ಮುಖಂಡರ ಅಭಿಪ್ರಾಯಗಳನ್ನು ಪಡೆದು ಮುಂದುವರೆಯುವುದು ಸೂಕ್ತ. 


ದೈಹಿಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ವಿಷಯಗಳನ್ನು ಅಳವಡಿಸುವುದು ಸಮಂಜಸವಾಗಿದೆ. ಈಗಾಗಲೇ ಯೋಗಶಿಕ್ಷಣ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಭಾರತವನ್ನು ಇತರ ದೇಶಗಳು ಅನುಸರಿಸುತ್ತಿದೆ. ನೈತಿಕ ಶಿಕ್ಷಣದಿಂದ ವಿಶ್ವವೇ ಒಂದು ಕುಟುಂಬ ಪರಿಕಲ್ಪನೆ ಆಗುವುದರಲ್ಲಿ ಸಂಶಯವಿಲ್ಲ. 

ಡಾ. ಕೆ. ಎಸ್. ವಿಜಯಕುಮಾರ್ ಎಂ.ಎ, ಬಿ.ಇಡಿ, ಪಿ.ಹೆಚ್.ಡಿ 

ನಂ. 178, 12ನೇ ಬ್ಲಾಕ್, 1ನೇ ಮುಖ್ಯರಸ್ತೆ,

ಎಸ್.ಎಂ.ಐ.ಜಿ.-ಬಿ, 6ನೇ ಅಡ್ಡರಸ್ತೆ, ಯಲಹಂಕ ಉಪನಗರ, 

ಬೆಂಗಳೂರು-64. ಮೊ: 9243192802

E-Mail: gnanagangapublications@gmail.com

             vijayakumar.kshamanna@gmail.com 

Tags

Post a Comment

0Comments

Post a Comment (0)