ಮತ ಅಮೂಲ್ಯವಾದದ್ದು:'ಕಡ್ಡಾಯ ಮತದಾನ ಮಾಡಿ' ಜನಜಾಗೃತಿ ಅಭಿಯಾನ

varthajala
0

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಡ್ಡಾಯ ಮತದಾನ ಮಾಡಲು ಮತದಾರರಿಗೆ ಜಾಗೃತಿ ಮೂಡಿಸಲು ಬಿಬಿಎಂಪಿ ವತಿಯಿಂದ  ಸತ್ವಾ ಅಪಾರ್ಟ್ ಮೆಂಟ್ ಮತ್ತು ರಹೇಜ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆಯಲ್ಲಿ ಮತದಾನ ಜಾಗೃತಿ ಸಭೆ ಮತ್ತು ಪಟ್ಟೇಗಾರಪಾಳ್ಯದಲ್ಲಿ ಸೆಂಟ್ ಪಾಲ್ಸ್ ಬಿಎಡ್ ಕಾಲೇಜು ವಿದ್ಯಾರ್ಥಿಗಳ ಜೊತೆಯಲ್ಲಿ ಜಾಥ ಕಾರ್ಯಕ್ರಮ.



*ವಲಯ ಆಯುಕ್ತರಾದ ಡಾ.ಆರ್.ಎಲ್.ದೀಪಕ್, ಜಂಟಿ ಆಯುಕ್ತರಾದ ಲೋಕನಾಥ್, ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ಆರೋಗ್ಯ ವೈದ್ಯಧಿಕಾರಿ ರಾಜೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ,ನೋಡಲ್ ಅಧಿಕಾರಿ ಉಮೇಶ್ ರವರು, ಸಹಾಯಕ ಅಭಿಯಂತರಾದ ವಿಜಯಕುಮಾರ್*, ಕಂದಾಯಧಿಕಾರಿ ರಾಜೇಂದ್ರನ್ ಬಿಬಿಎಂಪಿ ಅಧಿಕಾರಿಗಳಾದ ಮಮತ, ಪ್ರಶಾಂಶ್ ರವರು ಅಪಾರ್ಟ್ ಮೆಂಟ್ ನಿವಾಸಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

*ವಲಯ ಆಯುಕ್ತರಾದ ಡಾ.ಆರ್.ಎಲ್.ದೀಪಕ್* ರವರು ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಮತದಾನ ಹಕ್ಕು ಸಂವಿಧಾನ ನೀಡಿದೆ.

ಮತದಾನ ಅಮೂಲ್ಯ , ಮತದಾರರು ತಪ್ಪದೇ ಮತದಾನ ಮಾಡಿ.ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.

*ಜಂಟಿ ಆಯುಕ್ತರಾದ ಲೋಕನಾಥ್ ರವರು ಮಾತನಾಡಿ* ಭಾರತ ದೇಶದ ಪ್ರಜೆಗಳಾದ ತಮಗೆ ಚುನಾವಣೆ ಆಯೋಗ ತಾವುಗಳು ಮತದಾನ ಮಾಡಲು ಬೇಕಾದ ಮತದಾರ ಪಟ್ಟಿ, ಮತದಾನ ಮಾಡಲು ಬೂತ್ ವ್ಯವಸ್ಥೆ ಹಾಗೂ ನಿರ್ಭಿತಿಯಿಂದ ಮತದಾನ ಮಾಡಲು ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರುನಗರ ಶೇಕಡ 50ರಷ್ಟು ಮತದಾನವಾಗುತ್ತಿದೆ ಇದರ ಬಗ್ಗೆ ಗಮನಬರಿಸಿದ ಚುನಾವಣೆ ಆಯೋಗ ನಗರದಲ್ಲಿ ಹೆಚ್ಚು ಮತದಾನವಾಗಲು ಜನಜಾಗೃತಿ ಮತ್ತು ಸಭೆಗಳನ್ನು ಆಯೋಜಿಸಲಾಗುತ್ತಿದೆ.

ಒಂದು ಮತ ಬದಲಾವಣೆ ತರಲು ಸಾಧ್ಯ . ಸಂವಿಧಾನ ನೀಡಿರುವ ಮತದಾನ ಹಕ್ಕುನ್ನು  ಚಲಾಯಿಸಿ.

80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದ ಮತದಾನ ನೀಡಲು ಅವಕಾಶ ನೀಡಲಾಗಿದೆ.


ಮೇ 10ರಂದು ಪ್ರತಿಯೊಬ್ಬ ಮತದಾರರು ವೋಟ್ ಮಾಡಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಿರಿ ಎಂದು ಹೇಳಿದರು.

*ನೋಡಲ್ ಅಧಿಕಾರಿ ಉಮೇಶ್* ರವರು ಮಾತನಾಡಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆಯಲ್ಲಿ ಸಂವಿಧಾನದಲ್ಲಿ ನೀಡಿರುವ  ಮತದಾನ ಹಕ್ಕು ಪ್ರಯೋಜನ ಮತ್ತು ಉಪಯೋಗ ಉತ್ತಮ ಜನಪ್ರತಿನಿಧಿ ಆಯ್ಕೆ ರಾಜ್ಯದ ಅಭಿವೃದ್ದಿಗೆ ಸಹಕಾರಿ ಕುರಿತು ಮಾಹಿತಿ ನೀಡಲಾಗುತ್ತಿದೆ.

ದೇಶದ ಮತ್ತು ರಾಜ್ಯದ ಅಭಿವೃದ್ದಿ ಯುವ ಶಕ್ತಿ ಮುಖ್ಯ. ಮತದಾನ ಹಕ್ಕು ಮತ್ತು ಮತ ಚಲಾವಣೆ ಕುರಿತು ಯುವ ಸಮೂಹಕ್ಕೆ ನೀಡಲು ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮತದಾನ ಮತ್ತು ಬೂತ್ ಎಲ್ಲಿ ಬರುತ್ತದೆ, ನೋಟ ಮತದಾನ ಹಾಗೂ ಚುನಾವಣೆಗೆ ನಿಂತ ಅಭ್ಯರ್ಥಿ ಕುರಿತು ಮಾಹಿತಿ ಪಡೆಯುವ ಕುರಿತು ಮತದಾರರಿಗೆ ಅರಿವು ಮೂಡಿಸಲಾಯಿತು.

Post a Comment

0Comments

Post a Comment (0)