ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿದ ಪಟೇಲ್ ಟಿ ನಾರಾಯಣಸ್ವಾಮಿ.

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ

ರಾಜ್ಯ ಸರ್ಕಾರದಿಂದ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಶಿಕ್ಷಕರು ಜನನ ಹೊರಹೊಮ್ಮಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪಟೇಲ್ ಟಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.

 ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪಟೇಲ್ ಟಿ ನಾರಾಯಣಸ್ವಾಮಿ ಅವರು ತಾಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ಶ್ರೀಮತಿ ಪಿಳ್ಳಮ್ಮ ಹಾಗೂ ತಿಪ್ಪಣ್ಣನವರ ಎರಡನೇ ಸುಪುತ್ರನಾಗಿ ಜನಿಸಿರುವ ಹೆಮ್ಮೆ ಇವರದ್ದಾಗಿದೆ.


ಶಿಕ್ಷಣ ವೃತ್ತಿಪರರಾಗಿ 37 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ನಾರಾಯಣಸ್ವಾಮಿಯವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ, ಪ್ರಾಥಮಿಕ ಅನುದಾನಿತ ಶಾಲೆಗಳ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೀರ್ತಿಗೆ ಬಾಜನರಾಗಿದ್ದಾರೆ. ಸೇವಾ ಮನೋಭಾವ ಹೊಂದಿರುವ ಪಟೇಲ್ ನಾರಾಯಣಸ್ವಾಮಿ ಯವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವದಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಅಪಾರ ಅಭಿಮಾನಿಗಳು ಶುಭ ಆರೈಸಿದ್ದಾರೆ.


ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸೆ.09 ಶನಿವಾರದಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಸಚಿವರು, ಶಾಸಕರು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಫಲ ಪುಷ್ಪ ದೊಂದಿಗೆ ರಾಜ್ಯ ಪ್ರಶಸ್ತಿಪದಕವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

 ರಾಜ್ಯಮಟ್ಟದ ಗಣಿತ ಶಿಕ್ಷಕ ಪ್ರಶಸ್ತಿ ಜೊತೆಗೆ

 ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಸ್ಕೌಟ್ಸ್ ಅಂಡ್ ಗೈಡ್ಸ್ ಕ್ಯಾಂಪೇನ್ ಲೀಡರ್ ಪ್ರಶಸ್ತಿ, ಜಿಲ್ಲಾ ಇಸ್ಪೈರ್ ಪ್ರಶಸ್ತಿ, ಶರಣ ಬಂಧು ಪ್ರಶಸ್ತಿ, ಕಾವ್ಯದೀಪ್ತಿ ಪ್ರಶಸ್ತಿ,ಕನ್ನಡ ಸೇವಾರತ್ನ ಪ್ರಶಸ್ತಿಗಳು ದೊರೆತಿವೆ. ಈ ಪ್ರಶಸ್ತಿ ಗಳಿಸುವುದಕ್ಕೆ ಸಹಕರಿಸಿದ ನನ್ನ ತಂದೆ ತಾಯಿ,ಮಕ್ಕಳು ಹಾಗೂ ನನ್ನ ಸಹಪಾಠಿ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು.


-ಪಟೇಲ್ ಟಿ ನಾರಾಯಣಸ್ವಾಮಿ. ರಾಜ್ಯಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ

Post a Comment

0Comments

Post a Comment (0)