“ಕವನಗಳ ಕೈ ಬುಟ್ಟಿ” ಕವನ ಸಂಕಲನ ಬಿಡುಗಡೆ

varthajala
0

1966 ರಲ್ಲಿ ಹುಟ್ಟಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ), ಕರ್ನಾಟಕದಲ್ಲಿ 2015ರಿಂದ ತನ್ನ ಕಾರ್ಯವಿಸ್ತರಣೆಯನ್ನು ಮಾಡುತ್ತ ಬಹುಮುಖೀ ಚಟುವಟಿಕೆಗಳಲ್ಲಿ ತೊಡಗಿದೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಮ್ಮ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಪ್ರವಾಸಿ ತಾಣಗಳು, ಪ್ರಕೃತಿ ವೈವಿಧ್ಯತೆ ಹೀಗೆ ಕನ್ನಡದ ಈ ವಿಷಯಗಳ ಕುರಿತಾಗಿ ಹೊಸ ಕವನಗಳನ್ನು ರಚಿಸಲು ಆಹ್ವಾನಿಸಿದ್ದೆವು. ನಾಡಿನ ಮೂಲೆ ಮೂಲೆಗಳಿಂದ ನೂರಾರು ಹೊಸ ಕವಿಗಳ ಕವನಗಳು ನಮಗೆ ತಲುಪಿದವು. ಇವುಗಳ ಪೈಕಿ ಆಯ್ದ ಕವನಗಳನ್ನು ಕವನ ಸಂಕಲನವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. 

ಪದ್ಮಶ್ರೀ ಪುರಸ್ಕೃತರಾದ ಡಾ||ದೊಡ್ಡರಂಗೇಗೌಡರು ಮುನ್ನುಡಿ ಬರೆದು ಹೊಸ ಕವಿಗಳಿಗೆ ಪ್ರೋತ್ಸಾಹಿಸಿದ್ದಾರೆ. ಕಾಂತಾರಾ ಚಲಚಚಿತ್ರ ಖ್ಯಾತಿಯ ಯುವ ಕವಿ ಪ್ರಮೋದ್‌ ಮರವಂತೆ ಮತ್ತು ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ಹಾಗೂ ಸಮನ್ವಿತ ಸಂಸ್ಥಾಪಕರಾದ ಶ್ರೀ ರಾಧಾಕೃಷ್ಣ ಕೌಂಡಿನ್ಯ ರವರು ಬೆನ್ನುಡಿ ಬರೆದು ಹಾರೈಸಿದ್ದಾರೆ. ಇಂತಹ ಅಪೂರ್ವ ಸಂದರ್ಭಕ್ಕೆ ನಾಡಿನ ಕವನಾಸಕ್ತರು ಸಾಕ್ಷಿಯಾಗಲು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವೇದಿಕೆಯಾಗುತ್ತಿದೆ.


ಇದೇ ಡಿಸೆಂಬರ್ ತಿಂಗಳ 16 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರಂಗರಾವ್ ರಸ್ತೆಯಲ್ಲಿರುವ “ಉತ್ತುಂಗ ಸಭಾಭವನ” ದಲ್ಲಿ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.

ಪುಸ್ತಕ ಬಿಡುಗಡೆ ಸಮಾರಂಭದ ಜೊತೆಗೆ ಕವನ ವಾಚನ, ಗಾಯನ ಕಾರ್ಯಕ್ರಮಗಳೂ ನಡೆಯಲಿದ್ದು, ಈ ಸಭೆಯ ಅಧ್ಯಕ್ಷತೆಯನ್ನು ಖ್ಯಾತ ಹಾಸ್ಯಬರಹಗಾರರಾದ ಎಂ. ಎಸ್. ನರಸಿಂಹಮೂರ್ತಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರು ಹಾಗು ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿಯಾದ ಶ್ರೀ ವಿ.ನಾಗರಾಜ್ ರವರು, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ, ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಹಾಗೂ ಎನ್ಮಾರ್ಕ್‌ ಟೆಕ್ನಾಲಜೀಸ್‌ ಸ್ಥಾಪಕ ನಿರ್ದೇಸಕರಾದ ಶ್ರೀ ಕೃಷ್ಣರಾಜ್ ರವರೂ ನಮ್ಮೊಂದಿಗೆ ಇರಲಿದ್ದಾರೆ.‌

Post a Comment

0Comments

Post a Comment (0)