ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಪ್ರತಿಮೆ ನಿರ್ಮಾಣದ ಕಟ್ಟಡ ನೆಲಸಮ: ಉಗ್ರ ಪ್ರತಿಭಟನೆ

varthajala
0

 ಜಯನಗರದ ಭೈರಸಂದ್ರ ವಾರ್ಡ್‌ ನಲ್ಲಿ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಪ್ರತಿಮೆ ನಿರ್ಮಾಣದ ಕಟ್ಟಡ ನೆಲಸಮ ಮಾಡಿದ ಬಿಬಿಎಂಪಿ ಅಧಿಕಾರಿಗಳು – ನಾಗರಾಜು ನೇತೃತ್ವದಲ್ಲಿ ಉಗ್ರ ಪ್ರತಿಭಟನೆ*






ಬೆಂಗಳೂರು, ಡಿ, 17; ಜಯನಗರದ ೪ ಬ್ಲಾಕ್‌ ನ ಭೈರಸಂದ್ರ ವಾರ್ಡ್‌ ನ ತಿಲಕ್‌ ನಗರದಲ್ಲಿ ಕ್ಷಿಪಣಿ ಪಿತಾಮಹಾ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಪ್ರತಿಮೆಯನ್ನು ಸರ್ವಸಮ್ಮತವಾಗಿ ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಬಿಬಿಎಂಪಿ ಅಧಿಕಾರಿಗಳು ಕಟ್ಟಡವನ್ನು ಧ್ವಂಸಗೊಳಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಕುಮ್ಮಕ್ಕು ಮತ್ತು ರಾಜಕೀಯ ದ್ವೇಷದಿಂದ ನಮ್ಮ ರಾಷ್ಟ್ರ ನಿರ್ಮಾಪಕರಾದ ಅಬ್ಧುಲ್‌ ಕಲಾಂ ಅವರಿಗಾಗಿ ಕೈಗೊಂಡಿದ್ದ ನಿರ್ಮಾಣ ಚಟುವಟಿಕೆಗೆ ಬಿಬಿಎಂಪಿ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ಕೆ.ಸಿ. ರಾಮಮೂರ್ತಿ ಅವರ ವಿರುದ್ಧ ಭೈರಸಂದ್ರ ವಾರ್ಡ್‌ ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಬಿಎಂಪಿ ಮಾಜಿ ಸದಸ್ಯ ನಾಗರಾಜು, ಜನವರಿ 1 ರಂದು ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಕಟ್ಟಡ ನೆಲಸಮ ಮಾಡಲಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕರ ಒತ್ತಾಯದಿಂದ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿತ್ತು. ಇದೀಗ ಪ್ರತಿಮೆ ಸ್ಥಾಪನೆಯಾಗುವ ತನಕ ಹೋರಾಟ ನಿಲ್ಲುವುದಿಲ್ಲ. ಶಾಸಕರು ಜನವಿರೋಧಿ ಧೋರಣೆ ಕೈಬಿಟ್ಟು ಜನರ ಅಭಿಪ್ರಾಯಗಳಿಗೆ ಗೌರವ ನೀಡಬೇಕು ಎಂದು ಹೇಳಿದರು.

Post a Comment

0Comments

Post a Comment (0)