ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನ ಪ್ರೋತ್ಸಾಹಿಸಿ: ಡಾ.ಕೆ. ರಾಮಕೃಷ್ಣ ರೆಡ್ಡಿ ಕರೆ

varthajala
0

 

ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು “ಎನ್.ಇ.ಎಸ್ ಸೂಪರ್ ನೋವಾ – ಒಂದು ಶೈಕ್ಷಣಿಕ ಮೇಳ

 

ಬೆಂಗಳೂರು ಡಿಸೆಂಬರ್‌ 08: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದುಶಿಕ್ಷಕರು ಹಾಗೂ ಸಂಸ್ಥೆಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಕೆ. ರಾಮಕೃಷ್ಣ ರೆಡ್ಡಿ ಕರೆ ನೀಡಿದರು.

 

ಇಂದು ಬಸವನಗುಡಿಯ ನ್ಯಾಷನಲ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿರುವ “ಎನ್.ಇ.ಎಸ್ ಸೂಪರ್ ನೋವಾ – ಒಂದು ಶೈಕ್ಷಣಿಕ ಮೇಳ” ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆಯುವ ಸಂಧರ್ಭದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಜವಾಹರಲಾಲ್‌ ನೆಹರು ತಾರಾಲಯವಿಜ್ಞಾನ ಗ್ಯಾಲರಿ ಬೆಂಗಳೂರಿನಂತಹ ಹಲವಾರು ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೇವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಹೊಸ ಆಲೋಚನೆಗಳನ್ನ ಅನುಷ್ಠಾನಗೊಳಿಸಿಕೊಳ್ಳಲಾಗುತ್ತಿದೆ. ಶಿಕ್ಷಕರು ಈ ಕಾರ್ಯಕ್ರಮಗಳನ್ನ ಬಳಸಿಕೊಳ್ಳುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಬೇಕು ಎಂದು ಕರೆ ನೀಡಿದರು.

 ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ ಮಾತನಾಡಿ, ಶತಮಾನದ ಇತಿಹಾಸವುಳ್ಳ ಬಸವನಗುಡಿಯ ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿಸೆಂಬರ್ 8 ಮತ್ತು 9 ರಂದು ಎರಡು ದಿನಗಳ ವೈವಿಧ್ಯಮಯ ಮತ್ತು ಅತ್ಯಾಧುನಿಕ ಉತ್ಸವ “ಎನ್ಇಎಸ್ ಸೂಪರ್ ನೋವಾ – ಒಂದು ಶೈಕ್ಷಣಿಕ ಮೇಳ” ಆಯೋಜಿಸಲಾಗಿದೆ. ಬಸವನಗುಡಿಯ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ಎಲ್ಲಾ ಶಾಲಾ-ಕಾಲೇಜುಗಳು ಒಟ್ಟಾಗಿ ಈ ಮೇಳದಲ್ಲಿ ಭಾಗವಹಿಸುತ್ತಿವೆ. ವಿಜ್ಞಾನಕಲೆವಾಣಿಜ್ಯ ಮತ್ತು ಕಂಪ್ಯೂಟರ್ ಒಳಗೊಂಡಂತೆ ಎಲ್ಲ ಕ್ಷೇತ್ರಗಳ ಅತ್ಯಾಧುನಿಕ ಬೆಳವಣಿಗೆಗಳ ಬಗ್ಗೆ ವಿವಿಧ ಮಾದರಿಗಳು ಮತ್ತು ಭಿತ್ತಿ ಚಿತ್ರಗಳನ್ನು ವಿದ್ಯಾರ್ಥಿಗಳು ರೂಪಿಸಿ ಪ್ರದರ್ಶಿಸಲಿದ್ದಾರೆ ಎಂದರು.
ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ. ವೆಂಟಕಶಿವಾರೆಡ್ಡಿ ಮಾತನಾಡಿ,  ಪ್ರದರ್ಶನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೂ ಇರಲಿದೆ. ಎಲ್ಲಾ ವಯೋನದವರ ವೀಕ್ಷಣೆಗೆ ಅವಕಾಶವಿದ್ದುಇದು ಸಂಪೂರ್ಣ ಉಚಿತವಾಗಿದೆ. ಈ ಆಧುನಿಕ ಕಾರ್ಯಕ್ರಮದಲ್ಲಿ 200 ಶಾಲೆಗಳಿಂದ 4 ರಿಂದ 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಉತ್ಸವದಲ್ಲಿಲೇಸರ್ ಶೋತಾರೆಗಳ ತೋಟದ ತಾರೇಜಮೀನ್ ಪೆರ್ ಪ್ರದರ್ಶನದ ಜೊತೆಗೆ ತಾರಾಲಯದ ಸಹಯೋಗದಲ್ಲಿ ಆದಿತ್ಯ-4 ಮತ್ತಿತರ ಮಾದರಿಗಳು ಇಸ್ರೋ ಸಹಯೋಗದಲ್ಲಿ ಸಂಸ್ಥೆಯ ವಿವಿಧ ರಾಕೆಟ್ ಗ್ರಹದ ಮಾದರಿಗಳುಅಗಸ್ತ್ಯಾ ಸಂಸ್ಥೆಯ ಮೊಬೈಲ್ ವಿಜ್ಞಾನ ಪ್ರಯೋಗಾಲಯಭಾರತೀಯ ವಿಜ್ಞಾನ ಸಂಸ್ಥೆಯ ಪರಿಣಿತರು ಡ್ರೋನ್ ಮೂಲಕ ಪ್ರದರ್ಶನ ನೀಡಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯಿಂದ  ಈ ಮೇಳಕ್ಕೆ ಸೂಕ್ತ ಸೌಲಭ್ಯ ಒದಗಿಸಲಾಗುತ್ತಿದೆ. ಜಿಕೆವಿಕೆ ಸಹಯೋಗದಲ್ಲಿ ಕೃಷಿ ಸಂಬಂಧಿತ ಮಾದರಿಗಳು ಹಾಗೂ ನಿಮ್ಹಾನ್ಸ್ ಸಹಯೋಗದಲ್ಲಿ ಮಿದುಳು ಮ್ಯೂಸಿಯಂ ನಂತಹ ವಿಶೇಷ ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಎನ್ ಇ ಎಸ್ ಕಾರ್ಯದರ್ಶಿ ಗಳಾದ ಬಿ ಎಸ್ ಅರುಣ್ ಕುಮಾರ್ಎನ್ ಇ ಎಸ್ ಜಯನಗರ ದ ಅಧ್ಯಕ್ಷ ರಾದ ಪಿ ಎಲ್ ವೆಂಕಟರಾಮ ರೆಡ್ಡಿಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ವಿಭಾಗದ ಉಪನಿರ್ದೇಶಕ ಆನಂದ್ ರಾಜ್ಶಾಲಾ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.


Post a Comment

0Comments

Post a Comment (0)