ಉತ್ತಮ -ವಿದ್ಯಾವಂತ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಕೊಡುಗೆ ಅಪಾರ: ಶಾಸಕ ಎ.ಸಿ.ಶ್ರೀನಿವಾಸ್

varthajala
0

ಪುಲಕೇಶಿನಗರ ವಿಧಾನಸಭಾ ಕ್ಷೇತ್ರ:ಪಿಳ್ಳಣ್ಣಗಾರ್ಡನ್ ನಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಪುಲಕೇಶಿ ನಗರದ  ಶಾಸಕರಾದ ಎ.ಸಿ. ಶ್ರೀನಿವಾಸ್ ರವರು ಸನ್ಮಾನಿಸಿದರು.


 ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ  ಸೋಮಶೇಖರ್ ಎನ್.ಎಸ್. ಹಾಗೂ ವಿದ್ಯಾಧಿಕಾರಿಯಾದ ಕುಮಾರ ಹೆಚ್.ಜಿ.ಕುಮಾರ್ ರವರು ಉಪಸ್ಥಿತರಿದ್ದರು.

ಶಾಸಕರಾದ ಎ.ಸಿ.ಶ್ರೀನಿವಾಸ್ ರವರು ಮಾತನಾಡಿ ಉತ್ತಮ ಹಾಗೂ ವಿದ್ಯಾವಂತ ಸಮಾಜ ನಿರ್ಮಾಣ ಶಿಕ್ಷಕರ ಕೊಡುಗೆ ಅಪಾರ.

ತಂದೆ, ತಾಯಿ ನಂತರ ಮಕ್ಕಳಿಗೆ ಶಿಕ್ಷಕರು ಗುರುವಾಗಿ  ಉತ್ತಮ ಮಾರ್ಗದಲ್ಲಿ ಸಾಗಲು ಮಾರ್ಗದರ್ಶಕರಾಗುತ್ತಾರೆ.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳನ್ನು ಆಧುನೀಕರಣಗೊಳಿಸಲಾಗುವುದು.

ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸೌಲಭ್ಯ, ಸೌವಲತ್ತು ಸಿಗಬೇಕು. ಮಕ್ಕಳು ದೇವರ ಸಮಾನ ಅವರಿಗೆ ಉತ್ತಮ ಮಾರ್ಗ, ಸಹಕಾರ ನೀಡಿದರೆ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

Post a Comment

0Comments

Post a Comment (0)