ಬರಹಗಾರ ಕೋಟಿಗಾನ ಹಳ್ಳಿ ರಾಮಯ್ಯನವರ ಮೇಲಿನ ಹಲ್ಲೆಗೆ

varthajala
0

ಬೆಂಗಳೂರು: ಕೋಲಾರದ ಅಸ್ಮಿತೆ ಎಂದೇ ಬಣ್ಣಿತವಾಗಿದ್ದ ಬರಹಗಾರ ಕೋಟಗಾನಹಳ್ಳಿ ರಾಮಯ್ಯನವರ ಮೇಲೆ ನಡೆದಿರುವ ಹಲ್ಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿಯವರು ತೀವ್ರವಾಗಿ ಖಂಡಿಸಿದ್ದಾರೆ. ‘ಆದಿಮ’ ಸಂಘಟನೆಯ ಮೂಲಕ ದಲಿತ ಸಂಘಟನೆಗೆ ಹೊಸ ರೂಪವನ್ನು ನೀಡಿ ರಂಗಭೂಮಿ, ಚಲನಚಿತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಸಲ್ಲಿಸುತ್ತಿರುವ ಈ ಹಿರಿಯ ಚೇತನದ ಮೇಲೆ ಹಲ್ಲೆಯಾಗಿರುವುದು ಬಹು ದೊಡ್ಡ ಆತಂಕದ ಸಂಗತಿ, ಕನ್ನಡ ನಾಡಿನಲ್ಲಿ ಬರಹಗಾರರ ಮೇಲೆ ಇನ್ನೂ ಹಲ್ಲೆಯಾಗುತ್ತಿದೆ ಎನ್ನುವುದೇ ಖಂಡನೀಯ ಸಂಗತಿ ಈ ಕುರಿತು ದೂರು ದಾಖಲಾಗಿರುವ ಕೋಲಾರ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಸೂಕ್ತ ಕ್ರಮ ಜರಗಿಸುವುದರೊಂದಿಗೆ ಕೊಟಿಗಾನ ಹಳ್ಳಿ ರಾಮಯ್ಯನವರಿಗೆ ಸಂಪೂರ್ಣ ರಕ್ಷಣೆ ನೀಡ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. 

ಡಾ.ಮಹೇಶ ಜೋಶಿ ಆಗ್ರಹಿಸಿದ್ದಾರೆ. ಕೋಲಾರದ ಹೊರ ವಲಯದಲ್ಲಿರುವ ತೇರಹಳ್ಳಿ ಬೆಟ್ಟದ ಪಾಪರಾಜನಹಳ್ಳಿಯಲ್ಲಿ ಗುರುವಾರ (ಏಪ್ರಿಲ್ 12) ದಂದು ನಡೆದಿರುವ ಈ ಘಟನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಮಯ್ಯ ಮತ್ತು ಅವರ ಪುತ್ರ ಮೇಘವರ್ಷ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಇದರಿಂದಾಗಿ ರಾಮಯ್ಯನವರ ಕಣ್ಣು ಮತ್ತು ತಲೆಗೆ ಗಂಭೀರ ಗಾಯವಾಗಿರುವುದನ್ನು ಮತ್ತು ಅವರ ಪುತ್ರ ಮೇಘವರ್ಷ ಅವರ ಕಾಲಿಗೆ ಪೆಟ್ಟಾಗಿರುವುದನ್ನು ಪ್ರಸ್ತಾಪಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಸರ್ವಜನಾಂಗದ ಶಾಂತಿಯ ತೋಟ ಎನ್ನಿಸಿ ಕೊಂಡಿರುವ ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆದಿರುವುದು ಅಘಾತಕರವೆಂದು ಹೇಳಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಸಾಕಷ್ಟು ವಿಧಾನಗಳಿದ್ದು ಪರಸ್ಪರ ಚರ್ಚೆಯ ಮೂಲಕ ಸೌಹಾರ್ದಯುತವಾಗಿ ಇಂತಹ ಸಮಸ್ಯೆಗಳನ್ನು ಬಗೆ ಹರಿಸಿ ಕೊಳ್ಳ ಬೇಕು. ಕನ್ನಡ ನಾಡಿನಲ್ಲಿ ಆದಿಕವಿ ಪಂಪನ ಕಾಲದಿಂದಲೂ ಇಂತಹ ಉನ್ನತ ಪರಂಪರೆಯೊಂದು ರೂಪುಗೊಂಡಿದ್ದು ಕನ್ನಡಿಗರು ಸಹನಾಶೀಲರು ಎನ್ನುವ ಹೆಗ್ಗಳಿಕೆಯನ್ನು ಜಾಗತಿಕವಾಗಿ ಪಡೆದು ಕೊಂಡಿದ್ದಾರೆ ಇಂತಹ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳ ಕೆಳಗೆ ಕೋಟಿಗಾನ ಹಳ್ಳಿ ರಾಮಯ್ಯನವರು ಕೋಲಾರದಿಂದ ತಮ್ಮ ಕಾರ್ಯಕ್ಷೇತ್ರವನ್ನು ಬದಲಾಯಿಸುವ ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಬರಹಗಾರರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳುವ ಸನ್ನಿವೇಶ ರೂಪುಗೊಳ್ಳ ಬೇಕಾದ ಅಗತ್ಯವನ್ನು ಒತ್ತಿ ಹೇಳಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ಬರಹಗಾರರ ಮುಕ್ತ ಅಭಿವ್ಯಕ್ತಿಯ ಪರವಾಗಿರುವುದಾಗಿ ಹೇಳಿದ್ದಾರೆ.ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು  ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ

Post a Comment

0Comments

Post a Comment (0)