ವಾಸವಿ ಇಂಟರ್ ನ್ಯಾಷನಲ್ ಪಿ.ಯು.ಕಾಲೇಜು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ವಿದ್ಯಾರ್ಥಿ ಗಣನೀಯ ಸಾಧನೆ

varthajala
0

 ವಿಜಯನಗರ: ವಾಸವಿ ಇಂಟರ್ ನ್ಯಾಷನಲ್ ಪಿ.ಯು.ಕಾಲೇಜು ಈ ಬಾರಿ ಪಿ.ಯು.ಸಿ ಫಲಿತಾಂಶ ಪ್ರಕಟನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಾದ ವರಲಕ್ಷ್ಮಿ ಎಸ್.ಶೇಕಡ 95 ಲಕ್ಷ್ಮಿ ಶೇಕಡ 94/ಪ್ರಿಯಾಂಕ ಶೇಕಡ 94/ಕೀರ್ತನ ಎಮ್.ಶೇಕಡ 92/ಐಶ್ವರ್ಯ ಡಿ.ಸಿ.ಶೇಕಡ 92% ರಕ್ಷ ಶೇಕಡ 92/ರವರುಗಳಿಗೆ ವಾಸವಿ ಸಮೂಹ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಆರ್.ವಿಜಯ ಸಾರಥಿರವರು ಗೌರವಿಸಿ, ಸನ್ಮಾನಿಸಿದರು. 

ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ವಿಜಯಸಾರಥಿರವರು ಮಾತನಾಡಿ ವಿದ್ಯಾದಾನ ಮಹಾದಾನ ಎಂಬಂತೆ ವಾಸವಿ ಶಿಕ್ಷಣ ಸಮೂಹ ಸಂಸ್ಥೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.
ಬಡವರು ಮತ್ತು ಮಧ್ಯಮವರ್ಗದವರು ನಮ್ಮ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಫೀಸು ಮುಖ್ಯವಲ್ಲ ಮಕ್ಕಳ ಶಿಕ್ಷಣ ಮುಖ್ಯ ಎಂದು ಸೇವಾಮನೋಭಾವನೆಯಿಂದ ನಮ್ಮ ಸಂಸ್ಥೆ ಶ್ರಮಿಸುತ್ತಿದೆ.
ಕಡಿಮೆ ಶುಲ್ಕ ಮತ್ತು ಹಂತ, ಹಂತವಾಗಿ ಪಾವತಿ ವ್ಯವಸ್ಥೆ ಮಾಡಿ ಕುಟುಂಬದಲ್ಲಿ ಶಿಕ್ಷಣದ ಆರ್ಥಿಕ ಹೊರೆ ಕಡಿಮೆ ಮಾಡಲಾಗಿದೆ.
ಮಕ್ಕಳು ಉತ್ತಮ ಅಂಕಗಳಿಸಲು ಶಿಕ್ಷಣ ತಜ್ಞರಿಂದ ಉಚಿತವಾಗಿ ಟ್ಯೂಶನ್ ವ್ಯವಸ್ಥೆ ಮಾಡಲಾಗಿದೆ.
ವಾಸವಿ ಸಮೂಹ ವಿದ್ಯಾಸಂಸ್ಥೆಗಳು ಕೌಟುಂಬಿಕ ವಾತವರಣ ನಿರ್ಮಿಸಿ ಮಕ್ಕಳಿಗೆ ಮನೆಯಲ್ಲಿ ಶಿಕ್ಷಣ ಪಡೆದಂತ ಅನುಭವ ಬರುವ ಹಾಗೇ ವಾತವರಣ ನಮ್ಮ ಶಾಲೆಯಲ್ಲಿ ಇದೆ.

Post a Comment

0Comments

Post a Comment (0)