ಚಾಲಕ-ಕಂ-ನಿರ್ವಾಹಕ ಹುದ್ದೆಯ ಮೂಲದಾಖಲಾತಿ ಪರಿಶೀಲನೆಗೆ ಅಂತಿಮ ಅವಕಾಶ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ):


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಯ ಮೂಲ ದಾಖಲಾತಿ / ದೇಹದಾಢ್ರ್ಯತೆ ಪರಿಶೀಲನೆಯನ್ನು ನಿಗಮದ ಕೇಂದ್ರ ಕಛೇರಿಯಲ್ಲಿ ನಡೆಸಲಾಗುತ್ತಿದ್ದು, ಸದರಿ ಮೂಲ ದಾಖಲಾತಿ ಪರಿಶೀಲನೆಯು ಜುಲೈ 13ಕ್ಕೆ ಮುಕ್ತಾಯಗೊಳ್ಳಲಿದೆ. 


ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಹಾಗೂ ಇದುವರೆವಿಗೂ ದಾಖಲಾತಿ ಪರಿಶೀಲನೆಗೆ ಗೈರುಹಾಜರಾದ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್-ಸೈಟ್ ಆದ www.ksrtcjobs.karnataka.gov.in  ರಿಂದ ಅಂತಿಮ ಕರೆಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕ ಅಥವಾ ಜುಲೈ 13 ರೊಳಗಾಗಿ ತಪ್ಪದೇ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ತದನಂತರ ಯಾವುದೇ ಪರಿಶೀಲನಾ ಕಾರ್ಯ ನಡೆಯುವುದಿಲ್ಲ ಹಾಗೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರು (ಸಿ&ಜಾ) ಹಾಗೂ ಆಯ್ಕೆ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)