ಓದುಗರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವ ಸಲುವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನುμÁ್ಠನಕ್ಕೆ ತರುತ್ತಿದೆ. ಇದೀಗ "ಅಂಗಳದಲ್ಲಿ ತಿಂಗಳ ಪುಸ್ತಕ" ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು ಒಂದೊಂದು ಕೃತಿಯನ್ನು ಕುರಿತು ಹೆಸರಾಂತ ವಿದ್ವಾಂಸರುಗಳು ಮಾತನಾಡಲಿದ್ದಾರೆ.
2025ರ ಫೆಬ್ರವರಿ ಮಾಹೆಯ "ಅಂಗಳದಲ್ಲಿ ತಿಂಗಳ ಪುಸ್ತಕ" ಕಾರ್ಯಕ್ರಮವನ್ನು ಫೆಬ್ರವರಿ 21 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ರಾಜಾಜಿನಗರದ ಕೆ.ಇ.ಬಿ. ಸಮುದಾಯ ಭವನ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪೆÇ್ರ. ಎಲ್.ಎಸ್. ಶೇಷಗಿರಿರಾವ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ "ಪೆÇ್ರ.ಎಲ್.ಎಸ್. ಎನ್. ಸಮಗ್ರ ಸಾಹಿತ್ಯಾವಲೋಕನ" ಕುರಿತು ಕನ್ನಡಪರ ಹೋರಾಟಗಾರರು ಹಾಗೂ ಹೆಸರಾಂತ ಲೇಖಕರು ಆದ ರಾ.ನಂ.ಚಂದ್ರಶೇಖರ್ ಅವರು ಮಾತನಾಡಲಿದ್ದು, ರಾಜಾಜಿನಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ವನಜಾಕ್ಷಿ ಹಳ್ಳಿಯವರ ಅವರು ಉಪಸ್ಥಿತರಿರಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.